Asianet Suvarna News Asianet Suvarna News

ಕೇಜ್ರಿವಾಲ್ ಬಂಧನದ ವಿರೋಧಿಸಿ ಹೋಳಿ ಹಬ್ಬ ಬಹಿಷ್ಕರಿಸಿದ ಆಮ್ ಆದ್ಮಿ ಪಾರ್ಟಿ!

ದೆಹಲಿ ಅಬಕಾರಿ ಹಗರಣದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅರೆಸ್ಟ್ ಆಪ್ ನಾಯಕರನ್ನು ಕೆರಳಿಸಿದೆ. ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ದ ಸತತ ವಾಗ್ದಾಳಿ, ಪ್ರತಿಭಟನೆ, ಆಕ್ರೋಶ ಹೊರಹಾಕತ್ತಿರುವ ಆಪ್ ನಾಯಕರು ಇದೀಗ ಹೋಳಿ ಹಬ್ಬವನ್ನೂ ಬಹಿಷ್ಕರಿಸಿದ್ದಾರೆ.
 

AAP leaders boycott Holi celebration to mark protest against arrest of CM Arvind Kejriwal ckm
Author
First Published Mar 25, 2024, 4:01 PM IST

ನವದೆಹಲಿ(ಮಾ.25) ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಮ್ ಆದ್ಮಿ ಪಾರ್ಟಿಗೆ ಸಂಕಷ್ಟಗಳು ಹೆಚ್ಚಾಗುತ್ತಿದೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅರೆಸ್ಟ್ ಆಗಿದ್ದಾರೆ. ಇಡಿ ಕಸ್ಟಡಿಯಲ್ಲಿರುವ ಕೇಜ್ರಿವಾಲ್ ಪರ ಆಪ್ ಹಾಗೂ ಇಂಡಿಯಾ ಒಕ್ಕೂಟ ನಾಯಕರು ಬ್ಯಾಟ್ ಬೀಸಿದ್ದಾರೆ. ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎಂದು ಆರೋಪಿಸಿ ಆಪ್ ಈಗಾಗಲೇ ದೇಶಾದ್ಯಂತ ಪ್ರತಿಭಟನೆ ಮಾಡಿದೆ. ಇಂದು ತನ್ನು ಹೋರಾಟ ಮುಂದುವರಿಸಿರುವ ಆಪ್, ಹೋಳಿ ಹಬ್ಬವನ್ನು ಬಹಿಷ್ಕರಿಸಿದೆ. 

ಕೇಜ್ರಿವಾಲ್ ಬಂಧನದಲ್ಲಿರುವ ಕಾರಣ ಆಪ್ ನಾಯಕರು ಯಾರು ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೋಳಿ ಹಬ್ಬ ಆಚರಣೆ ಗೆಲುವಿನ ಸಂಕೇತವಾಗಿದೆ. ಸಂಭ್ರಮದ ಸಂಕೇತವಾಗಿದೆ. ಆದರೆ ಆಪ್ ದುಷ್ಟರ ವಿರುದ್ಧ, ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮಾಡುತ್ತಿದೆ. ಹೀಗಾಗಿ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ದೆಹಲಿ ಸಚಿವೆ ಅತೀಶಿ ಹೇಳಿದ್ದಾರೆ.

ಇಡಿ ಕಸ್ಟಡಿಯಿಂದ ಸಿಎಂ ಕೇಜ್ರಿವಾಲ್ ಹೊರಡಿಸಿದ ಆರ್ಡರ್ ನಕಲಿ, ದಾಖಲೆ ಬಹಿರಂಗಪಡಿಸಿದ ಬಿಜೆಪಿ!

ಆಮ್ ಆದ್ಮಿ ಪಾರ್ಟಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಹೋರಾಡುತ್ತೇವೆ. ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ಧ್ವನಿ ಎತ್ತುವ ಶಕ್ತಿಗಳನ್ನು ದಮನ ಮಾಡಲಾಗುತ್ತದೆ. ಹೀಗಾಗಿ ಈ ವರ್ಷ ಆಪ್ ನಾಯರು ಹೋಳಿ ಹಬ್ಬ ಆಚರಿಸುತ್ತಿಲ್ಲ ಎಂದು ಆತಿಶಿ ಹೇಳಿದ್ದಾರೆ. ಸರ್ವಾಧಿಕಾರಿ ಪ್ರಧಾನ ಮಂತ್ರಿ, ಪ್ರಜಾಪ್ರಭುತ್ವ, ಸಂವಿಧಾನ ಮಾರ್ಗದಲ್ಲಿ ನಡೆಯತ್ತಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿ ಜೈಲಿಗಟ್ಟಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಆಪ್ ಅವಿರತ ಹೋರಾಟ ಮಾಡಲಿದೆ ಎಂದು ಅತಿಶಿ ಹೇಳಿದ್ದಾರೆ.

ಪ್ರಜಾಪ್ರಭುತ್ವ ಉಳಿಸಲು ಆಪ್ ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಆತಿಶಿ ಮನವಿ ಮಾಡಿದ್ದಾರೆ. ಇದು ಕೇವಲ ದೆಹಲಿಗೆ ಸೀಮಿತವಾದ ಹೋರಾಟವಲ್ಲ, ಈ ದೇಶಕ್ಕೆ ಈ ಪ್ರಜಾಪ್ರಭುತ್ವಕ್ಕಾಗಿ ನಡೆಸುತ್ತಿರುವ ಹೋರಾಟ ಎಂದು ಅತೀಶಿ ಹೇಳಿದ್ದಾರೆ. 

ಸಿಎಂ ಕೇಜ್ರಿವಾಲ್ ಬಂಧನ ವಿರೋಧಿಸಿ ಇಂಡಿಯಾ ಮೈತ್ರಿ ಒಕ್ಕೂಟದಿಂದ ಪ್ರತಿಭಟನೆಗೆ ಕರೆ!

ಮಾರ್ಚ್ 22ರಂದು ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ಅರವಿಂದ್ ಕೇಜ್ರಿವಾಲ್ ಬಂಧಿಸಲಾಗಿತ್ತು. ಅರವಿಂದ್ ಕೇಜ್ರಿವಾಲ್‌ಗೆ 9 ಸಮನ್ಸ್ ಪಡೆದಿದ್ದರೂ ಇಡಿ ವಿಚಾರಣೆಗೆ ಗೈರಾಗಿದ್ದರು. ಈ ಕರಿತು ಕೋರ್ಟ್ ಮೆಟ್ಟಿಲೇರಿದ್ದರು. ಬಂಧನದ ಬಳಿಕ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ 6 ದಿನಗಳ ಕಾಲ ಕೇಜ್ರಿವಾಲ್ ಅವರನ್ನು ಇಡಿ ಕಸ್ಟಡಿಗೆ ನೀಡಿದೆ.

Follow Us:
Download App:
  • android
  • ios