Asianet Suvarna News Asianet Suvarna News

ಇಡಿ ಕಸ್ಟಡಿಯಿಂದ ಸಿಎಂ ಕೇಜ್ರಿವಾಲ್ ಹೊರಡಿಸಿದ ಆರ್ಡರ್ ನಕಲಿ, ದಾಖಲೆ ಬಹಿರಂಗಪಡಿಸಿದ ಬಿಜೆಪಿ!

ಜೈಲು ಪಾಲಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಇಡಿ ಕಸ್ಟಡಿಯಿಂದಲೇ ಮೊದಲ ಸರ್ಕಾರಿ ಆದೇಶ ಹೊರಡಿಸಿದ್ದಾರೆ ಎಂದು ಆಪ್ ಆದೇಶ ಪತ್ರ ಬಹಿರಂಗಪಡಿಸಿತ್ತು. ಆದರೆ ಈ ಆದೇಶ ಪತ್ರ ನಕಲಿ, ಮುಖ್ಯಮಂತ್ರಿ ಕಚೇರಿಯನ್ನೇ ಹೈಜಾಕ್ ಮಾಡಿ ನಕಲಿ ಪತ್ರ ಹೊರಡಿಸಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಇದಕ್ಕೆ ಪ್ರಮುಖ ಕಾರಣಗಳನ್ನು ನೀಡಿದೆ.
 

CM Arvind Kejriwal order letter from ED custody forged BJP Claims after AAP Press Meet ckm
Author
First Published Mar 24, 2024, 4:13 PM IST

ನವದೆಹಲಿ(ಮಾ.24) ಇಡಿ ಕಸ್ಟಡಿಯಿಂದ ಸಿಎಂ ಅರವಿಂದ್ ಕೇಜ್ರಿವಾಲ್ ಮೊದಲ ಸರ್ಕಾರಿ ಆದೇಶ ಹೊರಡಿಸಿದ್ದಾರೆ ಎಂದು ಆಪ್ ಸಚಿವೆ ಆತಿಶಿ ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ್ದರು. ಜೈಲಿನಲ್ಲಿದ್ದರೂ ಅರವಿಂದ್ ಕೇಜ್ರಿವಾಲ್ ಸದಾ ಜನರ ಸೇವೆಗೆ ತಮ್ಮ ಬದುಕು ಮುಡಿಪಾಗಿಟ್ಟಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಬಿಂಬಿಸಿತ್ತು. ಆದರೆ ಸುದ್ದಿಗೋಷ್ಠಿ ನಡೆದ ಬೆನ್ನಲ್ಲೇ ಬಿಜೆಪಿ ಮಾಡಿದ ಗಂಭೀರ ಆರೋಪಕ್ಕೆ ಆಮ್ ಆದ್ಮಿ ಪಾರ್ಟಿ ತಬ್ಬಿಬ್ಬಾಗಿದೆ. ದೆಹಲಿ ಮುಖ್ಯಮಂತ್ರಿ ಕಚೇರಿಯನ್ನು ಹೈಜಾಕ್ ಮಾಡಿ ನಕಲಿ ಆದೇಶ ಪತ್ರವನ್ನು ಆಪ್ ಬಿಡುಗಡೆ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಹಾಗೂ ಬಿಜೆಪಿ ಸಂಸದ ಮನೋಜ್ ತಿವಾರಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಇದು ಸಿಎಂ ಅರವಿಂದ್ ಕೇಜ್ರಿವಾಲ್ ಹೊರಡಿಸಿದ ಸರ್ಕಾರಿ ಆದೇಶ ಪತ್ರವಲ್ಲ. ಪತ್ರವನ್ನು ನಕಲಿ ಮಾಡಲಾಗಿದೆ ಎಂದು ಬಿಜೆಪಿ ಕೆಲ ಪ್ರಮುಖ ದಾಖಲೆಗಳನ್ನು ನೀಡಿದೆ. ಅರವಿಂದ್ ಕೇಜ್ರಿವಾಲ್ ಇಡಿ ಕಸ್ಟಡಿಯಲ್ಲಿದ್ದಾರೆ. ಒಂದು ವೇಳೆ ಕೇಜ್ರಿವಾಲ್ ಈ ಆರ್ಡರ್ ಪಾಸ್ ಮಾಡಿದ್ದರೆ, ಅದೂ ಸಿಎಂ ಪ್ರಧಾನ ಕಾರ್ಯದರ್ಶಿ ಮೂಲಕ ಹೊರಡಿಸಬೇಕು. ಹೀಗೆ ಆರ್ಡರ್ ಪಾಸ್ ಮಾಡಲು ಲೆಫ್ಟಿನೆಂಟ್ ಗವರ್ನರ್ ಅನುಮತಿ ಅಗತ್ಯ. ಆದರೆ ಇಲ್ಲಿ ಸಚಿವೆಯೊಬ್ಬರು ಆರ್ಡರ್ ಪಾಸ್ ಆಗಿದೆ ಎಂದು ಸುದ್ದಿಗೋಷ್ಠಿ ಮೂಲಕ ಹೇಳಿದ್ದಾರೆ. ಈ ರೀತಿ ಆರ್ಡರ್ ಪಾಸ್ ಮಾಡಲು ಯವುದೇ ಹಕ್ಕಿಲ್ಲ. ಅಸಂವಿದಾನಿಕವಾಗಿ ಮುಖ್ಯಮಂತ್ರಿ ಕಚೇರಿಯನ್ನು ಆಪ್ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಇಡಿ ಕಸ್ಟಡಿಯಿಂದಲೇ ಮೊದಲ ಸರ್ಕಾರಿ ಆದೇಶ ಹೊರಡಿಸಿದ ಅರವಿಂದ್‌ ಕೇಜ್ರಿವಾಲ್‌!

ಈ ಸರ್ಕಾರಿ ಆದೇಶ ಪತ್ರದಲ್ಲಿ ಆರ್ಡರ್ ನಂಬರ್ ಇಲ್ಲ. ಇದರ ಜೊತೆಗೆ ಸಂಬಂಧ ಪಟ್ಟ ಅಧಿಕಾರಿಗಳ ಹೆಸರು ಸೇರಿದಂತೆ ಯಾವುದೇ ಪ್ರಸ್ತಾಪವಿಲ್ಲ. ಇದು ಜನರನ್ನು ಮೋಸ ಮಾಡಲು ಆಪ್ ಹೊರಡಿಸಿರುವ ನಕಲಿ ಆದೇಶ ಪತ್ರ ಎಂದು ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ. ಇದು ಆಮ್ ಆದ್ಮಿ ಪಾರ್ಟಿ ಬರೆದ ನಾಟಕವಾಗಿದೆ. ಜೈಲಿನಲ್ಲೂ ಜನಪರ ಸೇವೆ ಎಂದು ಬಿಂಬಿಸುವ ಮೂಲಕ ಆಪ್‌ಗೆ ಆಗಿರುವ ಡ್ಯಾಮೇಜ್ ಸರಿಸಪಡಿಸಲು ಮಾಡಿದ ಕೃತ್ಯವಿದು ಎಂದು ಮನೋಜ್ ತಿವಾರಿ ಹೇಳಿದ್ದಾರೆ.

 

 

ದೆಹಲಿ ಸಚಿವೆ ಆತಿಶಿ ಸುದ್ದಿಗೋಷ್ಠಿ ಬೆನ್ನಲ್ಲೇ ಬಿಜೆಪಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ. ಇದು ಆಮ್ ಆದ್ಮಿ ಪಾರ್ಟಿಗೆ ತೀವ್ರ ಹಿನ್ನಡೆ ತಂದಿದೆ. ಇದೀಗ ಸರ್ಕಾರಿ ನಕಲಿ ಆದೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲೂ ಟ್ರೆಂಡ್ ಆಗಿದೆ. 

ಜೈಲಿನಿಂದ ಕೇಜ್ರಿವಾಲ್ ಸಂದೇಶದ ಜೊತೆಗೆ ಮುಂದಿನ ಸಿಎಂ ಸೂಚನೆ ನೀಡಿದ್ರಾ ಪತ್ನಿ ಸುನೀತಾ?

Follow Us:
Download App:
  • android
  • ios