Asianet Suvarna News Asianet Suvarna News

ಅಯೋಧ್ಯೆಯಲ್ಲಿ ಶ್ರೀರಾಮ ನಾಮ ಜಪಿಸಿದ ಆಪ್, ಮತಕ್ಕಾಗಿ ಹಿಂದುತ್ವದ ಸರ್ಕಸ್!

  • ಉತ್ತರ ಪ್ರದೇಶ ಚುನಾವಣೆ ಮೇಲೆ ಕಣ್ಣಿಟ್ಟ ಆಮ್ ಆದ್ಮಿ ಪಕ್ಷ
  • ಅಯೋಧ್ಯೆಯಲ್ಲಿ ಆಪ್ ತಿರಂಗ ಯಾತ್ರೆ ಮೂಲಕ ರಾಜಕೀಯ
  • ಯಾತ್ರೆಗೂ ಮೊದಲು ಹನುಮಾನ್ ದೇಗುಲಕ್ಕೆ ಸಿಸೋಡಿಯಾ ಭೇಟಿ
AAP form Ram rajya government in Uttar pradesh not ram politics says Manish sisodiya ckm
Author
Bengaluru, First Published Sep 14, 2021, 5:40 PM IST
  • Facebook
  • Twitter
  • Whatsapp

ಅಯೋಧ್ಯೆ(ಸೆ.14): ಉತ್ತರ ಪ್ರದೇಶ ಮುಂಬರುವ ವಿಧಾನಸಭಾ ಚುನಾವಣೆಗೆ ಎಲ್ಲಾ ಪ್ರಮುಖ ಪಕ್ಷಗಳು ಈಗಿನಿಂದಲೇ ತಯಾರಿ ಆರಂಭಿಸಿದೆ. ಇದೀಗ 2022ರ ಯುಪಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷ ಮತಗಳಿಕೆಗೆ ಸರ್ಕಸ್ ಆರಂಭಿಸಿದೆ. ಅಯೋಧ್ಯೆಯಲ್ಲಿ ತಿರಂಗ ಯಾತ್ರಾ ಚಾಲನೆಗೂ ಮುನ್ನ ದೇಗುಲ ಸಂದರ್ಶನ ನಡೆಸಿದೆ.

ಪಂಜಾಬ್ ಮಿಷನ್ ಆರಂಭ: AAP ಗೆದ್ದರೆ 300 ಯೂನಿಟ್ ವಿದ್ಯುತ್ ಫ್ರೀ ಎಂದ ಕೇಜ್ರೀವಾಲ್!

ಆಪ್ ನಾಯಕ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆಪ್ ತಿರಂಗ ಯಾತ್ರೆ ಕಾರಣ ಅಯೋಧ್ಯೆಯಲ್ಲಿ ಬೀಡುಬಿಟ್ಟಿದ್ದಾರೆ. ತಿರಂಗ ಯಾತ್ರೆಗೂ ಮೊದಲು ಸಿಸೋಡಿಯಾ ಹನುಮಾನ್ ಘರ್ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ರಾಮ ರಾಜ್ಯದ ಆಡಳಿತ ಕುರಿತು ಮಾತನಾಡಿದ್ದಾರೆ.

 

ತಿರಂಗ ಯಾತ್ರೆಗೂ ಮೊದಲು ಮಾಧ್ಯಮದ ಜೊತೆ ಮಾತನಾಡಿದ ಮನೀಶ್ ಸಿಸೋಡಿಯಾ, ಶ್ರೀರಾಮ, ಅಯೋಧ್ಯೆ ಬಿಜೆಪಿಗೆ ಸೇರಿದ ಸ್ವತ್ತಲ್ಲ. ರಾಮ ಎಲ್ಲರಿಗೂ ಸೇರಿದ್ದಾಗಿದೆ. ಶ್ರೀರಾಮ ಉತ್ತರ ಪ್ರದೇಶ ಚುನಾವಣೆ ಮಾತ್ರವಲ್ಲ, ಈ ದೇಶದ ಐತಿಹಾಸಿಕ ಕ್ಷೇತ್ರ. ಭಾರತದ ಇತಿಹಾಸ ಹಾಗೂ ಸಂಸ್ಕೃತಿಯಲ್ಲಿ ಶ್ರೀ ರಾಮನಿಗೆ ಪ್ರಮುಖ ಸ್ಥಾನವಿದೆ. ಹೀಗಾಗಿ ಶ್ರೀರಾಮನ ಆಶೀರ್ವಾದದೊಂದಿಗೆ ಆಪ್ ಉತ್ತರ ಪ್ರದೇಶ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಕಾಣಲಿದೆ ಎಂದು ಸಿಸೋಡಿಯಾ ಹೇಳಿದೆ.

ಕಮರ್ಷಿಯಲ್ ಉದ್ದೇಶಕ್ಕೆ ಕಟ್ಟಡ ಪಡೆದು ಕಚೇರಿ ತೆರೆದ ಆಪ್; ಮಾಲೀಕರಿಂದ ಆಕ್ಷೇಪ

ಆಪ್ ತಿರಂಗ ಯಾತ್ರೆ ಅಯೋಧ್ಯೆ ಮಾತ್ರವಲ್ಲ, ಉತ್ತರ ಪ್ರದೇಶದ ಉದ್ದಗಲಕ್ಕೂ ಸಂಚರಿಸಲಿದೆ. ಶ್ರೀರಾಮ, ಹುನುಮಾ ಕ್ಷೇತ್ರವಾಗಿರುವ ಅಯೋಧ್ಯೆಯಿಂದ ಆಪ್ ತಿರಂಗ ಯಾತ್ರೆ ಆರಂಭಿಸಲಿದೆ. ಆಮ್ ಆದ್ಮಿ ಪಾರ್ಟಿ ಶ್ರೀರಾಮನ ಕುರಿತು ರಾಜಕೀಯ ಮಾಡಲು ಇಲ್ಲಿಗೆ ಬಂದಿಲ್ಲ. ಬದಲಾಗಿ ರಾಮ ರಾಜ್ಯ ಪರಿಕಲ್ಪನೆಯ ಆಡಳಿತ ನೀಡಲು ಬಂದಿದ್ದೇವೆ ಎಂದು ಸಿಸೋಡಿಯಾ ಹೇಳಿದ್ದಾರೆ.

 

ಉತ್ತರ ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷ ಇತರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ಏಕಾಂಗಿಯಾಗಿ ಹೋರಾಟ ನೀಡಲಿದೆ. ದೆಹಲಿಯಂತೆ ಉಚಿತ ನೀರು, ಉಚಿತ ವಿದ್ಯುತ್, ಉತ್ತಮ ಶಿಕ್ಷಣ, ಮೂಲಭೂತ ಸೌಕರ್ಯ ಆಮ್ ಆದ್ಮಿ ಪಕ್ಷದ ಗುರಿ. ಹೀಗಾಗಿ ಜನ ಅಭಿವೃದ್ಧಿಗೆ ಮತ ಹಾಕಲಿದ್ದಾರೆ ಅನ್ನೋ ವಿಶ್ವಾಸವಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.

Follow Us:
Download App:
  • android
  • ios