ಹಿಂದುಗಳ ಭಾವನೆಗಳಿಗೆ ಮತ್ತೆ ಧಕ್ಕೆ, ಅಮೀರ್ ಖಾನ್ ಜಾಹೀರಾತಿಗೆ ವಿವಾದದ ಕಿಡಿ!
ಬಾಲಿವುಡ್‌ನ ಮಿ.ಪರ್ಫೆಕ್ಷನಿಸ್ಟ್ ಮೇಲೆ ಮತ್ತೆ ಹಿಂದುಗಳ ಭಾವನೆಗೆ ಧಕ್ಕೆ ತಂದ ಆರೋಪ ಎದುರಾಗಿದೆ. ಖಾಸಗಿ ಬ್ಯಾಂಕ್ ಜಾಹೀರಾತಿನಲ್ಲಿ ಅಮೀರ್ ಖಾನ್ ಹಿಂದುಗಳ ಸಂಪ್ರದಾಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಮಧ್ಯಪ್ರದೇಶದ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದರೆ, ಕಾಶ್ಮೀರ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಿಂದುಗಳ ಆಚರಣೆಯ ಬಗ್ಗೆ ಬ್ಯಾಂಕ್ ಜಾಹೀರಾತಿನ ಅಗತ್ಯವೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಭೋಪಾಲ್ (ಅ.12): ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ನಟಿಸಿದ ಜಾಹೀರಾತುವೊಂದು ವಿವಾದಕ್ಕೆ ಕಾರಣವಾಗಿದೆ. ಈ ಜಾಹೀರಾತು ಖಾಸಗಿ ಬ್ಯಾಂಕ್‌ನದ್ದಾಗಿದ್ದು, ಅದರಲ್ಲಿ ನಟಿ ಕಿಯಾರಾ ಅಡ್ವಾಣಿ ಕೂಡ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಮದುವೆಯ ಬಳಿಕ ಪತ್ನಿ ಗಂಡನ ಮನೆಗೆ ಹೊಸಲು ಹೊಕ್ಕುವ ಸಂಪ್ರದಾಯವಿದೆ. ಆದರೆ, ಈ ಜಾಹೀರಾತಿನಲ್ಲಿ ಅಮೀರ್ ಖಾನ್, ವಧುವಾಗಿರುವ ಕಿಯಾರಾ ಅಡ್ವಾಣಿಗೆ ಮನೆಗೆ ಹೋಗುವ ವೇಳೆ ಹೊಸಲು ಹೊಕ್ಕುವ ಸಂಪ್ರದಾಯ ಮಾಡುತ್ತಾರೆ. ಜಾಹೀರಾತಿನ ಈ ಅಂಶ ವಿವಾದಕ್ಕೆ ಕಾರಣವಾಗಿದೆ. ಈ ಜಾಹೀರಾತಿಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ಜಾಹೀರಾತುಗಳಿಂದ ಹಿಂದುಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದರು. ಅವರಿಗೆ (ಅಮೀರ್ ಖಾನ್) ಇದನ್ನು ಮಾಡಲು ಅವಕಾಶವಿಲ್ಲ. ಈ ಕುರಿತಾಗಿ ನಾನು ದೂರು ದಾಖಲಿಸಿದ್ದೇನೆ. ಈ ಜಾಹೀರಾತು ನೋಡಿದಾಗ ನನಗೂ ತಪ್ಪು ಎಂದನಿಸಿದೆ ಎಂದಿದ್ದಾರೆ. ಇನ್ನು ಕಾಶ್ಮೀರ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಈ ಜಾಹೀರಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಬ್ಯಾಂಕ್‌ನ ಜಾಹೀರಾತಿನಲ್ಲಿ ಹಿಂದುಗಳ ಸಂಪ್ರದಾಯವನ್ನು ಕುಹಕ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಬುಧವಾರ ಭೋಪಾಲ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra), 'ನನಗೆ ದೂರು ಬಂದಿದೆ. ಇದಾದ ನಂತರ ಖಾಸಗಿ ಬ್ಯಾಂಕ್‌ನ (Hindu Tradition) ಅಮೀರ್ ಖಾನ್ ಅವರ ಈ ಜಾಹೀರಾತನ್ನೂ ನೋಡಿದ್ದೇನೆ. ಭಾರತೀಯ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಜಾಹೀರಾತು ನೀಡುವಂತೆ ನಾನು ಅಮೀರ್ ಖಾನ್‌ಗೆ ವಿನಂತಿಸುತ್ತೇನೆ. ಅಮೀರ್ ಖಾನ್ ಅವರ ಇಂತಹ ಪ್ರಕರಣಗಳು ಭಾರತೀಯ ಆಚರಣೆ, ಸಂಪ್ರದಾಯಗಳು ಮತ್ತು ದೇವರು ಮತ್ತು ದೇವತೆಗಳ ಬಗ್ಗೆ ಬರುತ್ತಲೇ ಇರುತ್ತವೆ. ಸಂಪ್ರದಾಯವನ್ನು ತಿರುಚಿ ಇಂಥ ಜಾಹೀರಾತು ಮಾಡುವುದರಿಂದ ನಿರ್ದಿಷ್ಟ ಧರ್ಮದ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಯಾರ ಭಾವನೆಗಳಿಗೂ ಧಕ್ಕೆ ತರಲು ಇಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಜಾಹೀರಾತಿನಲ್ಲಿ ಏನಿದೆ: ಈ ಜಾಹೀರಾತಿನಲ್ಲಿ ಅಮೀರ್ (Amir Khan)-ಕಿಯಾರಾ (Kiara Advani) ಹೊಸದಾಗಿ ಮದುವೆಯಾದ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅಮೀರ್ ಕಿಯಾರಾಗೆ, 'ವಿದಾಯದಲ್ಲಿ ವಧು ಅಳದಿರುವುದು ಇದೇ ಮೊದಲು' ಎಂದು ಹೇಳುತ್ತಾನೆ. ಜಾಹೀರಾತಿನಲ್ಲಿನ ಸಾಮಾನ್ಯ ಅಭ್ಯಾಸಕ್ಕಿಂತ ಭಿನ್ನವಾಗಿ, ವರನು ವಧುವಿನ ಅನಾರೋಗ್ಯದ ತಂದೆಯನ್ನು ನೋಡಿಕೊಳ್ಳಲು ವಧುವಿನ ಮನೆಗೆ ಹೋಗುತ್ತಾನೆ. ಈ ಸಮಯದಲ್ಲಿ, ವಧು ನಿಜ ಜೀವನದಲ್ಲಿ ಮನೆಯಲ್ಲಿ ಮೊದಲ ಹೆಜ್ಜೆ ಇಡುವ ರೀತಿಯಲ್ಲಿ, ಈ ಜಾಹೀರಾತಿನಲ್ಲಿ, ಅಮೀರ್ ವಧುವಿನ ಮನೆಯಲ್ಲಿ ಮೊದಲ ಹೆಜ್ಜೆ ಇಡುವ ಮೂಲಕ ಪ್ರವೇಶಿಸುತ್ತಾರೆ. ಎಲ್ಲಾ ಅತಿಥಿಗಳು ಅಮೀರ್ ಅವರನ್ನುವೈಭವದಿಂದ ಸ್ವಾಗತಿಸುತ್ತಾರೆ. ಇದೇ ಕಾರಣದಿಂದಾಗಿ ಬಳಕೆದಾರರು, ಅಮೀರ್ ಮತ್ತೊಮ್ಮೆ ಹಿಂದುಗಳ ಭಾವನೆಗೆ ಧಕ್ಕೆ ತಂದ ಜಾಹೀರಾತು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
Aamir Khan ಪುತ್ರಿ ಬಾಯ್‌ಫ್ರೆಂಡ್ ಜೊತೆ ಹಾಟ್ ಮತ್ತು ಬೋಲ್ಡ್ ಫೋಟೋಗಳು
ಸಂಸ್ಕೃತಿ ಬಚಾವೋ ಮಂಚ್ ಎಚ್ಚರಿಕೆ: ಅಮೀರ್ ಖಾನ್ ಅವರ ಈ ಜಾಹೀರಾತಿನ ಬಗ್ಗೆ ಸಂಸ್ಕೃತಿ ಬಚಾವೋ ಮಂಚ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಮಂಚ್ ಅಧ್ಯಕ್ಷ ಚಂದ್ರಶೇಖರ್ ತಿವಾರಿ, 'ಹಿಂದೂ ಧರ್ಮದ ಆಚರಣೆಗಳನ್ನು ಬದಲಾಯಿಸುವ ಗುತ್ತಿಗೆಯನ್ನು ಅಮೀರ್ ಖಾನ್ ಪಡೆದುಕೊಂಡಿರುವಂತೆ ಕಾಣುತ್ತದೆ. ನಮ್ಮ ದೇವತೆಗಳನ್ನು ಅವಮಾನಿಸುವುದು, ಹಿಂದೂ ಧರ್ಮವನ್ನು ನೋಯಿಸುವುದು ನಿಮ್ಮ ಗುರಿಯಾಗಿದೆ' ಎಂದು ಹೇಳಿದ್ದಾರೆ. ಹಿಂದೂ ಧರ್ಮದಲ್ಲಿ ಮಾತೃಶಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಮಹಿಳೆಯನ್ನು ಗೌರವಿಸಲಾಗುತ್ತದೆ. ಆ ಕಾರಣಕ್ಕಾಗಿ ಮದುವೆಯಾದ ಹೆಣ್ಣು, ತನ್ನ ಪ್ರಥಮ ಹೆಜ್ಜೆಯನ್ನು ಗಂಡನ ಮನೆಯಲ್ಲಿ ಇಡುವಾಗ ಸಂಭ್ರಮ ತುಂಬಿರುತ್ತದೆ. ಅದನ್ನೇಕೆ ಬದಲಾಯಿಸಲು ಪ್ರಯತ್ನಿಸುತ್ತಿದ್ದೀರಿ. ಇದನ್ನು ನಾವು ವಿರೋಧಿಸುತ್ತೇವೆ' ಎಂದು ಹೇಳಿದೆ.
ಬಾಲಿವುಡ್ ಖಾನ್‌ಗಳು ಪಾಕಿಸ್ತಾನದ ಏಜೆಂಟರು: ಯತ್ನಾಳ್
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಆಕ್ರೋಶ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri ) ಅವರಿಗೂ ಈ ಜಾಹೀರಾತಿನ ಬಗ್ಗೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. 'ಸಾಮಾಜಿಕ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಬದಲಾಯಿಸಲು ಬ್ಯಾಂಕ್‌ಗಳು (Bank) ಯಾವಾಗ ಜವಾಬ್ದಾರಿ ಪಡೆದುಕೊಂಡಿದೆ ಎನ್ನುವುದೇ ಅರ್ಥವಾಗಿಲ್ಲ. ನನ್ನ ಪ್ರಕಾರ ಎಯು ಬ್ಯಾಂಕ್ ಇಂಡಿಯಾ ಭ್ರಷ್ಟ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬದಲಾಯಿಸುವ ಮೂಲಕ ಕ್ರಿಯಾಶೀಲತೆ ತೋರಿಸಬೇಕು. ಇಂಥ ಬಕ್ವಾಸ್ ಜಾಹೀರಾತು ಮಾಡ್ತಾರೆ. ಬಳಿಕ ಹಿಂದುಗಳು ಟ್ರೋಲ್ ಮಾಡ್ತಾರೆ ಅಂತಾರೆ. ಮೂರ್ಖರು' ಎಂದು ಬರೆದುಕೊಂಡಿದ್ದಾರೆ.