ಆಧಾರ್ ಕಾರ್ಡ್ ಭಾರತೀಯರಿಗೆ ಪ್ರಮುಖ ದಾಖಲೆಯಾಗಿದ್ದು, ಸರ್ಕಾರಿ ಮತ್ತು ಖಾಸಗಿ ಕೆಲಸಗಳಿಗೆ ಕಡ್ಡಾಯವಾಗಿದೆ. ಆಧಾರ್‌ನಿಂದಾಗುವ ಮೋಸ ತಡೆಯಲು ನಿಯಮ ಬದಲಾಗಬಹುದು. 130 ಕೋಟಿ ಭಾರತೀಯರು ಆಧಾರ್ ಹೊಂದಿದ್ದು, ಅದನ್ನು ನವೀಕರಿಸಲು ಸರ್ಕಾರ ತಿಳಿಸಿದೆ. ಬೆರಳಚ್ಚು ಮತ್ತು OTP ಬದಲಿಗೆ ಮುಖ ಸ್ಕ್ಯಾನ್ ಮಾಡುವ ತಂತ್ರಜ್ಞಾನ ಬರಲಿದ್ದು, ಇದು ಬ್ಯಾಂಕಿಂಗ್, ಇ-ಕಾಮರ್ಸ್‌ನಲ್ಲಿ ಸಮಯ ಉಳಿಸುತ್ತದೆ. ನಕಲಿ ಆಧಾರ್ ಪತ್ತೆಹಚ್ಚಲು ಮತ್ತು ಅಪರಾಧಿಗಳನ್ನು ಗುರುತಿಸಲು ಇದು ಸಹಾಯಕವಾಗಲಿದೆ.

ಭಾರತೀಯರಿಗೆ ಬಹಳ ಮುಖ್ಯವಾದ ಗುರುತಿನ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಒಂದಾಗಿದೆ. ಹುಟ್ಟಿನಿಂದ ಸಾವಿನವರೆಗೆ ಎಲ್ಲದಕ್ಕೂ ಆಧಾರ್ ಕಾರ್ಡ್ ಇರಲೇಬೇಕು. ಸರ್ಕಾರಿ ಮತ್ತು ಖಾಸಗಿ ಕೆಲಸಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಈ ಕಾರ್ಡ್ ಇಟ್ಟುಕೊಂಡು ಇತ್ತೀಚಿನ ದಿನಗಳಲ್ಲಿ ಮೋಸ ನಡೆಯುತ್ತಿದೆ ಎಂಬ ದೂರುಗಳು ಬಂದಿವೆ. ಆದ್ದರಿಂದ ಮೋಸವನ್ನು ತಡೆಯಲು ಆಧಾರ್ ನಿಯಮಗಳಲ್ಲಿ ಬದಲಾವಣೆ ಮಾಡಬಹುದು. ಮಕ್ಕಳಿಗಾಗಿ ನೀಲಿ ಆಧಾರ್ ಕಾರ್ಡ್ ಬರಬಹುದು.

ಸರ್ಕಾರಿ ಅಂಕಿಅಂಶವೊಂದರ ಪ್ರಕಾರ, ಭಾರತದಲ್ಲಿ 130 ಕೋಟಿ ಜನರಿಗೆ ಆಧಾರ್ ಕಾರ್ಡ್ ಇದೆ. ಆಧಾರ್ ಕಾರ್ಡ್ ಅನ್ನು ನವೀಕರಿಸಲು ಕೇಂದ್ರ ಸರ್ಕಾರ ತಿಳಿಸಿದೆ. ಆಧಾರ್ ಕಾರ್ಡ್‌ನ ಬಳಕೆಯನ್ನು ಇನ್ನಷ್ಟು ಸುಲಭಗೊಳಿಸಬಹುದು. ಇನ್ಮುಂದೆ ಗ್ರಾಹಕರು ಉದ್ದನೆಯ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲ, ಬೆರಳಚ್ಚು ಮತ್ತು OTP ಕೊಡಬೇಕಾಗಿಲ್ಲ. ಈಗ ಕ್ಯಾಮೆರಾ ಮುಂದೆ ನಿಂತರೆ ಕೆಲಸ ಮುಗಿಯುತ್ತದೆ.

ಸಾಲಕ್ಕಾಗಿ ಅಲೆಯಬೇಕಿಲ್ಲ, ಆಧಾರ್ ಕಾರ್ಡ್ ಇದ್ದರೆ ಸಾಕು ಪಡೆಯಿರಿ 2.5 ಲಕ್ಷ ರೂ ಲೋನ್

ಬೆರಳಚ್ಚಿಗೆ ಬದಲಾಗಿ, ಗ್ರಾಹಕರ ಮುಖವನ್ನು ನೇರವಾಗಿ ಸ್ಕ್ಯಾನ್ ಮಾಡುವ ಮೂಲಕ ಎಲ್ಲಾ ರೀತಿಯ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಮತ್ತು ಈ ಬಗ್ಗೆ ಹೊಸ ತಂತ್ರಜ್ಞಾನಗಳನ್ನು ತರಲಾಗುವುದು ಎಂದು ಈಗಾಗಲೇ ಸಂಬಂಧಿಸಿದ ಇಲಾಖೆ ಯುಐಡಿಎಐ ಹೇಳಿದೆ. ಇದು ಬ್ಯಾಂಕಿಂಗ್, ಇ-ಕಾಮರ್ಸ್ ಮತ್ತು ಟ್ರಾವೆಲ್‌ ಸಮಯವನ್ನು ಉಳಿಸುತ್ತದೆ

ಇದಲ್ಲದೆ ಗ್ರಾಹಕರಿಗೆ ಅನುಕೂಲಕರವಾಗಿರುತ್ತದೆ. ಕಾಲಕ್ರಮೇಣ ಜನರ ಬೆರಳಚ್ಚು ಬದಲಾಗುವುದರಿಂದ ಅನೇಕ ಬಾರಿ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಮುಖವನ್ನು ಸ್ಕ್ಯಾನ್ ಮಾಡಿದರೆ ಮೋಸ ಮಾಡಿ ಅನೇಕ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದವರು ಸುಲಭದಲ್ಲಿ ಸಿಕ್ಕಿ ಬೀಳುತ್ತಾರೆ. ಈ ತಂತ್ರಜ್ಞಾನ ಪ್ರಾರಂಭವಾದರೆ, ಎಲ್ಲಾ ನಕಲಿ ಆಧಾರ್ ಪತ್ತೆ ಹಚ್ಚಲು ಸುಲಭವಾಗುತ್ತದೆ . ಅಪರಾಧಿಗಳನ್ನು ಗುರುತಿಸುವುದು ಕೂಡ ಅತೀ ಸುಲಭ.

35 ಜನರ ಆಧಾರ್ ಕಾರ್ಡ್ ಮೇಲೆ ಮೈಕ್ರೋ ಫೈನಾನ್ಸ್ ಸಾಲ ಪಡೆದು ಪರಾರಿಯಾದ ದಂಪತಿ!

ಎಲ್ಲರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಈ ಆಲೋಚನೆ ಮಾಡಿದೆ. ಮತ್ತು ಗ್ರಾಹಕರಿಗೆ ಹೆಚ್ಚು ಸಮಯ ಉಳಿತಾಯವಾಗುತ್ತದೆ. ಆದರೆ ಈ ಕೆಲಸ ಯಾವಾಗ ಪ್ರಾರಂಭವಾಗುತ್ತದೆ ಎಂಬುದರ ಬಗ್ಗೆ ಸರ್ಕಾರದಿಂದ ಯಾವುದೇ ಸ್ಪಷ್ಟವಾದ ಅಭಿಪ್ರಾಯ ಇಲ್ಲಿಯವರೆಗೆ ಲಭ್ಯವಾಗಿಲ್ಲ.