* ವಿಶ್ವದಲ್ಲೇ ಅತಿದೊಡ್ಡ ಲಸಿಕಾ ಅಭಿಯಾನ* ಮಗು ಹೊತ್ತುಕೊಂಡು ನದಿ ದಾಟುತ್ತಿರುವ ಕೊರೋನಾ ವಾರಿಯರ್* ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಟೋ* ಇಂಥ ಕಾರ್ಯಕರ್ತರನ್ನು ಪ್ರತಿದಿನ ನೆನೆಯಬೇಕು

ಜಾರ್ಖಂಡ್(ಜೂ. 22) ಆರೋಗ್ಯ ಕಾರ್ಯಕರ್ತರು ತಮ್ಮ ಪ್ರಾಣ ಪಣಕ್ಕಿಟ್ಟು ಇನ್ನೊಬ್ಬರ ಆರೋಗ್ಯಕ್ಕಾಗಿ ಶ್ರಮಿಸುತ್ತಿದ್ದಾರೆ. ಆರೋಗ್ಯ ಕಾರ್ಯಜರ್ತೆಯೊಬ್ಬರ ಕರ್ತವ್ಯನಿಷ್ಠೆ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜಾರ್ಖಂಡ್ ನ ಆರೋಗ್ಯ ಕಾರ್ಯಕರ್ತೆಯೊಬ್ಬರು ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಒಂದು ಕೈನಲ್ಲಿ ಕೊರೋನಾ ಲಸಿಕೆ ಹಿಡಿದುಕೊಂಡು ನದಿ ದಾಟುತ್ತಿರುವ ದೃಶ್ಯ ವೈರಲ್ ಆಗಿದೆ. ಇವರ ಸಾಹಸವನ್ನು ಸೋಶಿಯಲ್ ಮೀಡಿಯಾ ಕೊಂಡಾಡಿದೆ.

ಕರ್ನಾಟಕದಲ್ಲಿ ಕೊರೋನಾ ಸ್ಥಿತಿ ಹೇಗಿದೆ?

ನರ್ಸ್ ಆಗಿ ಕೆಲಸ ಮಾಡುತ್ತಿರುವ ಮಂತಿ ಕುಮಾರಿ ಇನ್ನೊಬ್ಬರ ಆರೋಗ್ಯ ಕಾಪಾಡಲು ತೆರಳುತ್ತಿದ್ದಾರೆ. ಒಂದೂವರೆ ವರ್ಷದ ಮಗಳನ್ನು ಬೆನ್ನ ಮೇಲೆ ಕೂರಿಸಿಕೊಂಡಿದ್ದಾರೆ. 

ಬುರ್ರಾ ನದಿ ದಾಟಿ ತದನಂತರ ಕಾಡಿನೊಳಗೆ ಸುಮಾರು 35 ಕಿ.ಮೀ ಪ್ರಯಾಣಿಸಿ ಚಿಕ್ಕ ಮಕ್ಕಳಿಗೆ ಲಸಿಕೆ ನೀಡುವ ಕೆಲಸ ಮಾಡುತ್ತಿರುವ ಇಂಥ ಸಾವಿರಾರು ಕಾರ್ಯಕರ್ತರನ್ನು ಪ್ರತಿದಿನ ನೆನೆಯಬೇಕು .

Scroll to load tweet…