ಜೇಬಿನಲ್ಲಿಟ್ಟಿದ್ದ ಮೊಬೈಲ್ ಫೋನ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಶಿಕ್ಷಕರೊಬ್ಬರು ಸಾವನ್ನಪ್ಪಿದ ದುರ್ಘಟನೆ ಮಹಾರಾಷ್ಟ್ರ ರಾಜ್ಯ, ಗೊಂಡಿಯಾ ಜಿಲ್ಲೆಯ ಅರ್ಜುನಿ ಮೋರ್ಗಾಂವ್ ತಾಲೂಕಿನ ಸಿರೆಗಾಂವ್ ಅಣೆಕಟ್ಟೆಯಲ್ಲಿ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ

ಮಹಾರಾಷ್ಟ್ರ: ಜೇಬಿನಲ್ಲಿಟ್ಟಿದ್ದ ಮೊಬೈಲ್ ಫೋನ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಶಿಕ್ಷಕರೊಬ್ಬರು ಸಾವನ್ನಪ್ಪಿದ ದುರ್ಘಟನೆ ಮಹಾರಾಷ್ಟ್ರ ರಾಜ್ಯ, ಗೊಂಡಿಯಾ ಜಿಲ್ಲೆಯ ಅರ್ಜುನಿ ಮೋರ್ಗಾಂವ್ ತಾಲೂಕಿನ ಸಿರೆಗಾಂವ್ ಅಣೆಕಟ್ಟೆಯಲ್ಲಿ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ.

ದುರ್ಘಟನೆಯಲ್ಲಿ ಶಿಕ್ಷಕ ಸುರೇಶ್ ಸಂಗ್ರಾಮೆ (ವಯಸ್ಸು 55). ಗಂಭೀರವಾಗಿ ಗಾಯಗೊಂಡಿರುವ ಇಸ್ಮಾ ನತ್ತು ಗಾಯಕ್ವಾಡ್ (56). ಮೃತ ಸುರೇಶ ಸಂಗ್ರಾಮೆ, ನಾಥು ಗಾಯಕವಾಡಗೆ ಗಂಭೀರ ಗಾಯ. ನಾಥು ಗಾಯಕ್ವಾಡ್ ಪ್ರಸ್ತುತ ಭಂಡಾರಾ ಜಿಲ್ಲಾ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಇಬ್ಬರು ಸಂಬಂಧಿಕರಾಗಿದ್ದು, ಭಂಡಾರ ಜಿಲ್ಲೆಯ ಸಾಕೋಲಿ ತಾಲೂಕಿನ ಸಿರೆಗಾವ್ಟೋಲ ನಿವಾಸಿಗಳಾಗಿದ್ದಾರೆ.

ಅನ್‌ಲೋಡ್ ಮಾಡುವಾಗ ಸಿಡಿದ ಲಾರಿ ಜಾಕ್, ಅವಘಡದಲ್ಲಿ ಚಾಲಕ ದುರಂತ ಅಂತ್ಯ!

ನಿನ್ನೆ ಸಂಜೆ ವೇಳೆ ಸಂಬಂಧಿಕರ ಕಾರ್ಯಕ್ರಮಕ್ಕೆ ಅರ್ಜುನಿ ಮೋರ್ಗಾಂವ್‌ಗೆ ಹೋಗುತ್ತಿದ್ದಾಗ ಏಕಾಏಕಿ ಜೇಬಿನಲ್ಲಿದ್ದ ಮೊಬೈಲ್ ಫೋನ್ ಬಾಂಬ್ ರೀತಿ ಸ್ಫೋಟಗೊಂಡಿದೆ. ಸ್ಫೋಟಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಈ ಘಟನೆಯಿಂದ ಸುತ್ತಮುತ್ತಲಿನ ಜನ ಬೆಚ್ಚಿಬಿದ್ದಿದ್ದಾರೆ. ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳಲು ಹೆದರುವಂತಾಗಿದೆ.

ಮೊಬೈಲ್ ಸ್ಫೋಟ ತಡೆಯಲು ಹೀಗೆ ಮಾಡಿ:

ಮೊಬೈಲ್ ಫೋನ್ ಒಳಗಡೆ ಬ್ಯಾಟರಿ ಇರುವುದರಿಂದ ಯಾವಾಗ ಬಿಸಿಯಾಗಿ ಸ್ಫೋಟಗೊಳ್ಳುತ್ತದೋ ಹೇಳಲು ಬರುವುದಿಲ್ಲ. ಅದಕ್ಕೆ ತಾಜಾ ನಿದರ್ಶನವಾಗಿ ಈ ಘಟನೆಯೇ ಸಾಕ್ಷಿ ಹೀಗಾಗಿ ಮೊಬೈಲ್ ಸ್ಫೋಟಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಹಾಗಾದ್ರೆ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ನೋಡೋಣ.

ಇತ್ತೀಚೆಗೆ ಮೊಬೈಲ್ ಸ್ಫೋಟದಿಂದ ಸಾವನ್ನಪ್ಪುವ, ಗಾಯಗೊಂಡವರ ಪ್ರಕರಣಗಳು ಹೆಚ್ಚಳವಾಗಿವೆ. ಹೆಚ್ಚಿನವರು ಮೊಬೈಲ್ ಬಳಸುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಕಂಪನಿ ಅಂದರೆ ಮಾಲೀಕರು ನೀಡುವ ಚಾರ್ಜರ್ ಅಲ್ಲದೇ ಬೇರೊಂದು ಕಡಿಮೆ ಗುಣಮಟ್ಟದ ಮೊಬೈಲ್ ಚಾರ್ಜಿಂಗ್ ಬಳಸುವುದು.ಇದು ತುಂಬಾ ಅಪಾಯಕಾರಿ. ಒಂದು ಕಂಪನಿಯ ಮೊಬೈಲ್ ಫೋನ್ ಬಳಸುವುದು ಮತ್ತು ಮೂರನೇ ವ್ಯಕ್ತಿಯ ಚಾರ್ಜರ್ ಬಳಸುವುದು ಕೂಡ ಅಪಾಯಕಾರಿಯಾಗಿದೆ ಎಂಬುದು ತಿಳಿದಿರಲಿ. 

ವೆಡ್ಡಿಂಗ್‌ ಕಾರ್ಡ್ ಬಂತೆಂದು ಲಿಂಕ್‌ ಓಪನ್‌ ಮಾಡಿದ್ರೆ ನಿಮ್ಮ ಬ್ಯಾಂಕ್‌ ಖಾತೆ ಖಾಲಿ! ಏನಿದು ಹೊಸ ವಂಚನೆ?

ದೈನಂದಿನ ಜೀವನದಲ್ಲಿ ಸ್ಮಾರ್ಟ್ ಫೋನ್ ಬಳಕೆ ಮಾರಕವಾಗಬಹುದು. ಇವು ಈಗಾಗಲೇ ಮನುಷ್ಯನ ಜೀವದ ಮೇಲೆ ದುಷ್ಪಾರಿಣಾಮ ಬೀರುತ್ತಲಿವೆ. ಮೊಬೈಲ್ ಫೋನ್ ಸ್ಫೋಟಗೊಳ್ಳಲು ಏನು ಕಾರಣವಾಗಬಹುದು? ಮೊಬೈಲ್ ಫೋನ್ ಸ್ಫೋಟಗೊಳ್ಳದಂತೆ ತಡೆಯಲು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಇಲ್ಲಿ ನೋಡೋಣ.

ಹೆಚ್ಚಿನ ಮೊಬೈಲ್ ಬ್ಯಾಟರಿಗಳು ಶಾರ್ಟ್ ಸರ್ಕ್ಯೂಟ್‌ಗೆ ಒಳಗಾಗುತ್ತಿವೆ. ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳಲು ಪ್ರಮುಖ ಕಾರಣವಾಗಿದೆ. ಎರಡನೆಯದು ಪ್ರಾಡಕ್ಟ್ ಕ್ವಾಲಿಟಿ ದೋಷಗಳು. ಹ್ಯಾಂಡ್‌ಸೆಟ್‌ಗೆ ಶಕ್ತಿ ತುಂಬುವ ಬ್ಯಾಟರಿಯನ್ನು ಅಳವಡಿಸುವಾಗ ಅದನ್ನು ಸರಿಯಾಗಿ ಪರೀಕ್ಷಿಸುವುದು ಮುಖ್ಯ. ಇದಲ್ಲದೆ, ಹೊರಗಿನ ತಾಪಮಾನ ಹೆಚ್ಚಾದಾಗ ಮೊಬೈಲ್ ಬ್ಯಾಟರಿ ಬಿಸಿಯಾಗಿ ಸ್ಫೋಟಗೊಳ್ಳುವ ಸಾಧ್ಯತೆ. ಬ್ಯಾಟರಿ ಇದ್ದರೂ ಪದೇಪದೆ ಚಾರ್ಜ್ ಮಾಡುವುದು ಅಪಾಯಕಾರಿ. ಸಂಪೂರ್ಣ ಖಾಲಿ ಆಗುವವರೆಗೆ ಚಾರ್ಜಿಂಗ್ ಮಾಡದಿರುವುದು ಒಳ್ಳೆಯದು. ಕಳಪೆಯಾಗಿ ತಯಾರಿಸಿದ ಫೋನ್‌ಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತವೆ. ದುಡ್ಡು ಉಳಿಸಲು ಅಂಥ ಕಳಪೆಮೊಬೈಲ್ ಖರೀದಿ ಜೀವಕ್ಕೆ ಅಪಾಯ ತರುತ್ತದೆ