ರಾಂಚಿ(ಡಿ.29): ಜಾರ್ಖಂಡ್‌ನಲ್ಲಿ ಜೆಎಂಎಂ, ಕಾಂಗ್ರೆಸ್ ಹಾಗೂ ಆರ್‌ಜೆಡಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಜೆಎಂಎಂ ಮುಖ್ಯಸ್ಥ ಹೇಮಂತ್ ಸೋರೆನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಜ್ಯಪಾಲೆ ದ್ರೌಪದಿ ಮರ್ಮು ರಾಂಚಿಯ ಮೋರಾಬಡಿ ಮೈದಾನದಲ್ಲಿ ಹೇಮಂತ್ ಸೋರೆನ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಜಾರ್ಖಂಡ್ ಸಿಎಂ ಆಗಿ ಸೊರೇನ್‌ ಶಪಥ: ಕುಮಾರಸ್ವಾಮಿಗೆ ಆಹ್ವಾನ

ಇನ್ನು ಹೇಮಂತ್ ಸೋರೆನ್ ಪ್ರಮಾಣವಚನ ಸಮಾರಂಭದಲ್ಲಿ ದೇಶದ ಪ್ರಮುಖ ಪ್ರತಿಪಕ್ಷಗಳ ನಾಯಕರ ದಂಡೇ ಸೇರಿತ್ತು. ಬಿಜೆಪಿ ವಿರೋಧಿ ಪ್ರಬಲ ಪ್ರತಿಪಕ್ಷದ ಒಗ್ಗಟ್ಟನ್ನು ಈ ನಾಯಕರು ವೇದಿಕೆ ಮೇಲೆ ಪ್ರದರ್ಶಿಸಿದರು.

ಪ್ರಮುಖವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಪ್ರಮುಖ ಪ್ರತಿಪಕ್ಷ ನಾಯಕರು ಸೋರೆನ್ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.

ನಡೆಯದ ಮೋ-ಶಾದಾಟ: ಜಾರ್ಖಂಡ್‌ನಲ್ಲಿ ಜಾರಿ ಬಿದ್ದ ಬಿಜೆಪಿ; 'ಕೈ' ಹಿಡಿದ ಮತದಾರ

ಈ ವೇಳೆ ಕಾಂಗ್ರೆಸ್ನ ಆಲಂಗಿರ್ ಆಲಂ, ರಾಮೇಶ್ವರ್ ಒರಾನ್, ಆರ್‌ಜೆಡಿ ಶಾಸಕ ಸತ್ಯಾನಂದ ಭೊಕ್ತಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.