Asianet Suvarna News Asianet Suvarna News

ಜಾರ್ಖಂಡ್ ಸಿಎಂ ಆಗಿ ಸೊರೇನ್‌ ಶಪಥ: ಕುಮಾರಸ್ವಾಮಿಗೆ ಆಹ್ವಾನ

ನಾಳೆ ಹೇಮಂತ್‌ ಸೊರೇನ್‌ ಸಿಎಂ ಆಗಿ ಪ್ರಮಾಣ ವಚನ| ಕುಮಾರಸ್ವಾಮಿಗೆ ಆಹ್ವಾನ|  ಭಾನುವಾರ ಮಧ್ಯಾಹ್ಯ 2 ಗಂಟೆಗೆ ಶಪಥ

HD Kumaraswamy To attend the swearing in ceremony of Hemant Soren as Jharkhand CM
Author
Bangalore, First Published Dec 28, 2019, 2:14 PM IST
  • Facebook
  • Twitter
  • Whatsapp

ರಾಂಚಿ[ಡಿ.28]: ಜಾರ್ಖಂಡ್‌ ಮುಖ್ಯಮಂತ್ರಿಯಾಗಿ ಹೇಮಂತ್‌ ಸೊರೇನ್‌ ಭಾನುವಾರ ಮಧ್ಯಾಹ್ಯ 2 ಗಂಟೆಗೆ ಅಧಿಕಾರ ಸ್ವೀಕರಲಿದ್ದು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಅವರನ್ನೂ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.

ಅಲ್ಲದೇ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರನ್ನೂ ಸೊರೇನ್‌ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.

ಆದರೆ, ಪೂರ್ವ ನಿಗದಿತ ಕಾರ್ಯಕ್ರಮದ ಹಿನ್ನೆಯಲ್ಲಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಉಳಿದಂತೆ ವಿಪಕ್ಷಗಳ ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

Follow Us:
Download App:
  • android
  • ios