ನರ್ಸರಿಗೆ ಹೋಗ್ತಿದ್ದ 5 ವರ್ಷದ ಬಾಲಕನೋರ್ವ ತನ್ನ ಸ್ಕೂಲ್ ಬ್ಯಾಗ್‌ನಲ್ಲಿ ಪಿಸ್ತೂಲ್ ಅಡಗಿಸಿಕೊಂಡು ಶಾಲೆಗೆ ಹೋಗಿದ್ದು, 3ನೇ ಕ್ಲಾಸ್ ವಿದ್ಯಾರ್ಥಿಗೆ ಗುಂಡಿಕ್ಕಿದ್ದಾನೆ.

ಬಿಹಾರ: ಶಾಲಾ ಮಕ್ಕಳು ಗುಂಡಿನ ದಾಳಿ ನಡೆಸುವಂತಹ ಘಟನೆಗಳು ಮುಂದುವರೆದ ದೇಶ ಅಮೆರಿಕಾದಲ್ಲಿ ಇದುವರೆಗೆ ನಡೆಯುತ್ತಿದ್ದವು. ಆದರೆ ಈಗ ಭಾರತದ ಬಿಹಾರದಲ್ಲಿ ಇಂತಹದೊಂದು ಘಟನೆ ನಡೆದಿದೆ. ನರ್ಸರಿಗೆ ಹೋಗ್ತಿದ್ದ 5 ವರ್ಷದ ಬಾಲಕನೋರ್ವ ತನ್ನ ಸ್ಕೂಲ್ ಬ್ಯಾಗ್‌ನಲ್ಲಿ ಪಿಸ್ತೂಲ್ ಅಡಗಿಸಿಕೊಂಡು ಶಾಲೆಗೆ ಹೋಗಿದ್ದು, 3ನೇ ಕ್ಲಾಸ್ ವಿದ್ಯಾರ್ಥಿಗೆ ಗುಂಡಿಕ್ಕಿದ್ದಾನೆ. ಈ ಅವಘಡದಲ್ಲಿ ಅದೃಷ್ಟವಶಾತ್ ಗುಂಡೇಟಿಗೊಳಗಾದ ಬಾಲಕ ಗಾಯಗೊಂಡು ಬದುಕುಳಿದಿದ್ದಾನೆ. 

ಉತ್ತರ ಬಿಹಾರದ ಸುಪಾಲ್ ಪ್ರದೇಶದ ಸೇಂಟ್ ಜಾನ್ಸ್‌ ಬೋರ್ಡಿಂಗ್ ಸ್ಕೂಲ್‌ನಲ್ಲಿ ಘಟನೆ ನಡೆದಿದೆ. ಘಟನೆ ಬಗ್ಗೆ ಪೊಲೀಸರು ಹೇಳುವಂತೆ ನರ್ಸರಿಗೆ ಹೋಗುತ್ತಿದ್ದ 5 ವರ್ಷದ ಬಾಲಕ ತನ್ನ ಬ್ಯಾಗ್‌ನಲ್ಲಿ ಗನ್ ಅಡಗಿಸಿಟ್ಟುಕೊಂಡು ಶಾಲೆಗೆ ಹೋಗಿದ್ದು, ಅಲ್ಲಿ 10 ವರ್ಷದ ಬಾಲಕನ ಕೈಗೆ ಗುಂಡಿಕ್ಕಿದ್ದಾನೆ. ಆತ 3ನೇ ಕ್ಲಾಸ್‌ನಲ್ಲಿ ಓದುತ್ತಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 

Breaking: ಮಾಜಿ ಕ್ರಿಕೆಟಿಗನ ಮನೆಯಲ್ಲೇ ಶ್ರೀಲಂಕಾ ಆಟಗಾರನನ್ನು ಗುಂಡಿಕ್ಕಿ ಬರ್ಬರ ಹತ್ಯೆ..!

ನಾನು ಶಾಲೆಗೆ ಹೋಗುತ್ತಿದ್ದ ವೇಳೆ ಆತ ಅವನ ಬ್ಯಾಗ್‌ನಿಂದ ಗನ್ ಹೊರತೆಗೆದು ನನಗೆ ಶೂಟ್ ಮಾಡಿದ, ನಾನು ತಡೆಯಲು ಯತ್ನಿಸಿದರು ಆತ ಕೈಗೆ ಗುಂಡಿಕ್ಕಿದ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಹೇಳಿದ್ದಾನೆ. ಅಲ್ಲದೇ ಏನಾದರೂ ಗುಂಡಿಕ್ಕಿದ ಬಾಲಕನಿಗೂ ಈತನಿಗೂ ವೈಷಮ್ಯವಿತ್ತೇ ಎಂದು ಕೇಳಿದಾಗ ಉತ್ತರಿಸಿದ ಬಾಲಕ ನಮ್ಮ ಮಧ್ಯೆ ಯಾವುದೇ ಕಿತ್ತಾಟ ನಡೆದಿಲ್ಲ ಎಂದಿದ್ದಾನೆ. 

ಘಟನೆಯ ನಂತರ ನಿರ್ಲಕ್ಷ್ಯದ ಕಾರಣಕ್ಕೆ ಶಾಲೆಯ ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಬಾಲಕ ಹಾಗೂ ಆತನ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಘಟನೆಯ ಬಳಿಕ ಭಯಭೀತರಾದ ಪೋಷಕರು ಶಾಲೆ ಮುಂದೆ ಜಮಾಯಿಸಿದ್ದು, ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದ್ದಾರೆ. ಅಲ್ಲದೇ ಜಿಲ್ಲೆಯಾದ್ಯಂತ ಶಾಲೆಗೆ ಆಗಮಿಸುವ ಮೊದಲು ಮಕ್ಕಳ ಬ್ಯಾಗ್‌ನ್ನು ಚೆಕ್ ಮಾಡುವಂತೆ ಪೋಷಕರು ಆಗ್ರಹಿಸಿದ್ದಾರೆ. 

ಬ್ಯೂಟಿಪಾರ್ಲರ್‌ನಲ್ಲಿ ಮದುವೆಗೆ ಸಿದ್ದಗೊಳ್ಳುತ್ತಿದ್ದ ವಧುವನ್ನು ಗುಂಡಿಕ್ಕಿ ಕೊಂದ ಮಾಜಿ ಪ್ರೇಮಿ