ತೇಜಸ್ವಿ ಯಾದವ್ ಮನೆಗೆ ಹೊಸ ಅತಿಥಿಯ ಆಗಮನ: ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿ
ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಲಾಲೂ ಹಾಗೂ ರಾಬ್ಡಿ ದೇವಿ ಪುತ್ರ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮನೆಗೆ ಅವರ ಪತ್ನಿ ರಾಜಶ್ರೀ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.
ಪಾಟ್ನಾ: ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಲಾಲೂ ಹಾಗೂ ರಾಬ್ಡಿ ದೇವಿ ಪುತ್ರ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮನೆಗೆ ಅವರ ಪತ್ನಿ ರಾಜಶ್ರೀ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಸ್ವತ: ತೇಜಸ್ವಿ ಯಾದವ್ ಹಾಗೂ ಅವರ ಸಹೋದರಿ ರೋಹಿಣಿ ಆಚಾರ್ಯ ಅವರು ಈ ವಿಚಾರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ತೇಜಸ್ವಿ ಯಾದವ್ ನವಜಾತ ಪುತ್ರಿಯನ್ನು ಎತ್ತಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಚೊಚ್ಚಲ ಬಾರಿ ಪೋಷಕರಾದ ರಾಜಶ್ರೀ ಹಾಗೂ ತೇಜಸ್ವಿ ಯಾದವ್ ದಂಪತಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ.
ದೇವರು ಸಂತೋಷಪಟ್ಟು ಮಗಳ ರೂಪದಲ್ಲಿ ಉಡುಗೊರೆಯನ್ನು ಕಳುಹಿಸಿದ್ದಾರೆ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ತೇಜಸ್ವಿ ಮಗುವಿನೊಂದಿಗೆ ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಲಾಲು ಪ್ರಸಾದ್ ಯಾದವ್ (Lalu Prasad Yadav) ಮತ್ತು ರಾಬ್ರಿ ದೇವಿ (Rabri Devi) ಅವರ ಪುತ್ರಿ ರೋಹಿಣಿ ಆಚಾರ್ಯ ಕೂಡ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಂದು ನನ್ನ ಮನೆಯಂಗಳದಲ್ಲಿ ಚಿಲಿಪಿಲಿ ಪ್ರತಿಧ್ವನಿಸುತ್ತಿದೆ. ಅಂತಹ ಸಂತೋಷದ ಉಡುಗೊರೆಯನ್ನು ದೇವರು ಕೊಟ್ಟಿದ್ದಾನೆ ಎಂದು ಟ್ವಿಟ್ಟರ್ನಲ್ಲಿ ರೋಹಿಣಿ ಆಚಾರ್ಯ ಬರೆದುಕೊಂಡಿದ್ದಾರೆ.
Land For Job Scam: ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ಗೆ ಸಿಬಿಐ ಸಮನ್ಸ್ ಜಾರಿ!
ಹಾಗೆಯೇ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಕೂಡ ತೇಜಸ್ವಿ ಯಾದವ್ ಅವರನ್ನು ಅಭಿನಂದಿಸಿದ್ದಾರೆ. ನವರಾತ್ರಿಯ ಪವಿತ್ರ ದಿನಗಳಲ್ಲಿ ಮಾತಾ ರಾಣಿಯ ಆಶೀರ್ವಾದಕ್ಕಾಗಿ ನಿಮಗೆ ಮತ್ತು ನಿಮ್ಮ ಇಡೀ ಕುಟುಂಬಕ್ಕೆ ಅಭಿನಂದನೆಗಳು ತೇಜಸ್ವಿಜಿ, ಮಗಳು ರಾಣಿಗೆ ಬಹಳಷ್ಟು ಪ್ರೀತಿ ಮತ್ತು ಆಶೀರ್ವಾದಗಳು, ದೇವರು ನಿಮ್ಮ ಕುಟುಂಬವನ್ನು ಯಾವಾಗಲೂ ಆಶೀರ್ವದಿಸಲಿ ಎಂದು ಅರವಿಂದ್ ಕೇಜ್ರಿವಾಲ್ ಶುಭ ಹಾರೈಸಿದ್ದಾರೆ.
ತೇಜಸ್ವಿ (Tejashwi Yadav) ಅವರು ತಮ್ಮ ಬಹುಕಾಲದ ಸ್ನೇಹಿತೆ ರಾಜಶ್ರೀ ಯಾದವ್ ( ರಾಚೆಲ್ ಗೊಡಿನ್ಹೋ ) (Rachel Godinho) ಅವರನ್ನು 2021ರ ಡಿಸೆಂಬರ್ 9 ರಂದು ವಿವಾಹವಾಗಿದ್ದರು. ರಾಜಶ್ರೀ ಹರಿಯಾಣದ (Haryana) ರೇವಾರಿಯವರಾಗಿದ್ದು, ಬಾಲ್ಯದಿಂದಲೂ ದೆಹಲಿಯಲ್ಲಿ ವಾಸಿಸುತ್ತಿದ್ದರು. ಈ ಹಿಂದೆ ಮದುವೆಗೂ ಮುನ್ನ ತಮ್ಮ ಪತ್ನಿಯ ಬಗ್ಗೆ ಮಾತನಾಡಿದ ತೇಜಸ್ವಿ, ನಾನು ನನ್ನ ತಂದೆಗೆ ಹೇಳಿದ್ದೆ, 'ನಾನು ಈ ಹುಡುಗಿಯನ್ನು ಡೇಟಿಂಗ್ ಮಾಡುತ್ತಿದ್ದೇನೆ ಮತ್ತು ಅವಳನ್ನು ಮದುವೆಯಾಗಲು ಇಷ್ಟಪಡುತ್ತೇನೆ. ಆದರೆ ಅವಳು ಕ್ರಿಶ್ಚಿಯನ್' ಎಂದು ಹೇಳಿದ್ದೆ. ಅದಕ್ಕೆ ನನ್ನ ತಂದೆ ಅದು ಸರಿ. ತೊಂದರೆ ಇಲ್ಲ ಎಂದು ಹೇಳಿದ್ದರು ಎಂದು ತೇಜಸ್ವಿ ಹೇಳಿಕೊಂಡಿದ್ದರು. ರಾಜಶ್ರೀ ಮತ್ತು ತೇಜಸ್ವಿ ಯಾದವ್ ಒಂದೇ ಶಾಲೆಯಲ್ಲಿ ಓದಿದ್ದು, ಅವರು ಬಾಲ್ಯದಿಂದಲೂ (childhood) ಸ್ನೇಹಿತರಾಗಿದ್ದಾರೆ.
Land For Job Scam: ಲಾಲೂ ಪ್ರಸಾದ್ ಯಾದವ್ಗೆ ಸೇರಿದ 15 ಸ್ಥಳಗಳಲ್ಲಿ ಇಡಿ ದಾಳಿ!