ಉಂಡು ಹೋದ ಕೊಂಡು ಹೋದ: 23 ಲಕ್ಷ ಬಿಲ್ ನೀಡದೇ ಫೈವ್ ಸ್ಟಾರ್ ಹೊಟೇಲ್‌ನಿಂದ ಪರಾರಿ
ದೆಹಲಿ ಫೈವ್ ಸ್ಟಾರ್ ಹೊಟೇಲೊಂದರಲ್ಲಿ ಯುಎಇ ರಾಜಮನೆತನದ ಉದ್ಯೋಗಿ ಎಂದು ಹೇಳಿಕೊಂಡು ನಾಲ್ಕು ತಿಂಗಳ ಕಾಲ ವಾಸ್ತವ್ಯವಿದ್ದ ವ್ಯಕ್ತಿಯೊಬ್ಬ 23 ಲಕ್ಷ ರೂಪಾಯಿ ಬಿಲ್ ನೀಡದೇ ಹೊಟೇಲ್‌ನಿಂದ ಪರಾರಿಯಾಗಿದ್ದಾನೆ.
ನವದೆಹಲಿ: ದೆಹಲಿ ಫೈವ್ ಸ್ಟಾರ್ ಹೊಟೇಲೊಂದರಲ್ಲಿ ಯುಎಇ ರಾಜಮನೆತನದ ಉದ್ಯೋಗಿ ಎಂದು ಹೇಳಿಕೊಂಡು ನಾಲ್ಕು ತಿಂಗಳ ಕಾಲ ವಾಸ್ತವ್ಯವಿದ್ದ ವ್ಯಕ್ತಿಯೊಬ್ಬ 23 ಲಕ್ಷ ರೂಪಾಯಿ ಬಿಲ್ ನೀಡದೇ ಹೊಟೇಲ್‌ನಿಂದ ಪರಾರಿಯಾಗಿದ್ದಾನೆ. ಆತನ ವಿರುದ್ಧ ಹೊಟೇಲ್ ಸಿಬ್ಬಂದಿ ಕಳವು ಮಾಡಿದ ಆರೋಪ ಮಾಡಿದ್ದಾರೆ. ಆಗಸ್ಟ್‌ನಲ್ಲಿ ಮೊಹಮ್ಮದ್ ಶರೀಫ್ ಎಂಬಾತ ದೆಹಲಿ ಲೀಲಾ ಪ್ಯಾಲೇಸ್ ಹೊಟೇಲ್‌ಗೆ ಆಗಮಿಸಿ ಅಲ್ಲಿ ರೂಮ್ ಬಾಡಿಗೆ ಪಡೆದಿದ್ದ. ಅಲ್ಲಿ ಆತ ತಾನು ಯುಎಇ (UAE)ನಿವಾಸಿಯಾಗಿದ್ದು, ಅಬುಧಾಬಿ ರಾಜಮನೆತನದ ಶೇಖ್ ಫಲಾಹ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೊಟೇಲ್ ಸಿಬ್ಬಂದಿಗೆ ತಿಳಿಸಿದ್ದರು. ಅದಕ್ಕೆ ತಕ್ಕಂತೆ ಆತ ದಾಖಲೆಗಳನ್ನು ಕೂಡ ನೀಡಿದ್ದ.
ಈತ ಆಗಸ್ಟ್ ಒಂದರಿಂದ ನವೆಂಬರ್ 20ರವರೆಗೆ ಮೂರು ತಿಂಗಳ ಕಾಲ ಹೊಟೇಲ್‌ನಲ್ಲಿ ತಂಗಿದ್ದಾನೆ. ನವಂಬರ್ 20 ರಂದು ಹೊಟೇಲ್‌ನಿಂದ ಹೊರಟು ಹೋಗಿದ್ದು, ಈ ವೇಳೆ ಈತ ಹೊಟೇಲ್‌ನಲ್ಲಿದ್ದ ಬೆಳ್ಳಿಯ ಪಾತ್ರೆ, ಮುತ್ತಿನ ತಟ್ಟೆ ಮುಂತಾದ ಐಷಾರಾಮಿ ವಸ್ತುಗಳು ಸೇರಿದಂತೆ ಅನೇಕ ಅಮೂಲ್ಯ ವಸ್ತುಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ ಎಂದು ಹೊಟೇಲ್ ಸಿಬ್ಬಂದಿ ಆರೋಪಿಸಿದ್ದು, ಆತನ ವಿರುದ್ಧ ವಂಚನೆ ಹಾಗೂ ಕಳ್ಳತನದ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಆರೋಪಿಗೆ ಆರೋಪಿ ಮೊಹಮ್ಮದ್ ಶರೀಫ್‌ಗಾಗಿ (Mohammed Sharif) ಹುಡುಕಾಟ ನಡೆಸುತ್ತಿದ್ದಾರೆ.
ಸಿಬ್ಬಂದಿ ಮೇಲೆ ಸಿಟ್ಟಿಗೆದ್ದು ಹೊಟೇಲ್‌ಗೆ ಕಾರು ನುಗ್ಗಿಸಿದ ಅತಿಥಿ: ವಿಡಿಯೋ
ಆಗಸ್ಟ್ 1 ರಂದು ಆರೋಪಿ ಮೊಹಮ್ಮದ್ ಶರೀಪ್ ಲೀಲಾ ಪ್ಯಾಲೇಸ್‌ನ (leela palace) ಕೊಠಡಿ ಸಂಖ್ಯೆ 427ರಲ್ಲಿ ವಾಸ್ತವ್ಯ ಹೂಡಲು ಆರಂಭಿಸಿದ್ದರು. ಅಬುಧಾಬಿ ರಾಜ ಮನೆತನದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದು, ಅಧಿಕೃತ ವ್ಯವಹಾರದ ಹಿನ್ನೆಲೆಯಲ್ಲಿ ಭಾರತದಲ್ಲಿ ಇರುವುದಾಗಿ ಆರೋಪಿ ಹೇಳಿದ್ದ. ಅಲ್ಲದೇ ಹೊಟೇಲ್ ಸಿಬ್ಬಂದಿ ಈತನನ್ನು ನಂಬುವುದಕ್ಕಾಗಿ ಆತ ಅನೇಕ ದಾಖಲೆಗಳನ್ನು ನೀಡಿದ್ದು, ಅಬುಧಾಬಿಯ ಲೈಫ್‌ಸ್ಟೈಲ್ ಬಗ್ಗೆ ಹೊಟೇಲ್ ಸಿಬ್ಬಂದಿ ಜೊತೆ ಹರಟುತ್ತಿದ್ದ ಎಂದು ಹೊಟೇಲ್ ಸಿಬ್ಬಂದಿ ಅವಲತ್ತುಕೊಂಡಿದ್ದಾರೆ. ಈತ ನೀಡಿರುವ ದಾಖಲೆಗಳು ನಕಲಿ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಗಂಟೆಗಟ್ಟಲೆ ಕಾದರೂ ಬರಲೇ ಇಲ್ಲ ಫುಡ್, ಝೊಮೇಟೋ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬೆಂಗಳೂರಿನ ಗ್ರಾಹಕ
ಈತನ ನಾಲ್ಕು ತಿಂಗಳ ಹೊಟೇಲ್ ಬಿಲ್ 35 ಲಕ್ಷ ಆಗಿದ್ದು, ಇದರಲ್ಲಿ ಆತ 11.5 ಲಕ್ಷವನ್ನು ಪಾವತಿ ಮಾಡಿದ್ದಾನೆ. ನವಂಬರ್ 20 ರಂದು ಹೊಟೇಲ್‌ನಿಂದ ತೆರಳುವಾಗ ಆತ 20 ಲಕ್ಷದ ಚೆಕ್ ಅನ್ನು ಸಿಬ್ಬಂದಿಗೆ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಪ್ರಸ್ತುತ ಈತನ ಪತ್ತೆ ಮಾಡಲು ಸುಳಿವಿಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾರೆ.