ಲಿಫ್ಟ್ ಬಾಗಿಲಿನಲ್ಲಿ ಕಾಲು ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದೆ. ಹೊಟೇಲ್‌ನಲ್ಲಿ ಹೌಸ್ ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವಕ ಈ ದುರಂತದಲ್ಲಿ ಸಾವನ್ನಪ್ಪಿದ್ದಾನೆ.
ಚೆನ್ನೈ: ಲಿಫ್ಟ್ ಬಾಗಿಲಿನಲ್ಲಿ ಕಾಲು ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದೆ. ಹೊಟೇಲ್‌ನಲ್ಲಿ ಹೌಸ್ ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವಕ ಈ ದುರಂತದಲ್ಲಿ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಹೊಟೇಲ್ ಮ್ಯಾನೇಜ್‌ಮೆಂಟ್ ಹಾಗೂ ಲಿಫ್ಟ್ ನಿರ್ವಾಹಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತಪಟ್ಟ ಯುವಕನನ್ನು 24 ವರ್ಷದ ಅಭಿಷೇಕ್ ಕೆ. ಎಂದು ಗುರುತಿಸಲಾಗಿದೆ. ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಟ್ರೋಲಿಯೊಂದಿಗೆ 9ನೇ ಪ್ಲೋರ್‌ನಿಂದ ಲಿಫ್ಟ್‌ಗೆ ಬಂದ ಆತ 8ನೇ ಪ್ಲೋರ್‌ಗೆ ಹೋಗಲು ನಂಬರ್ ಒತ್ತಿದ್ದು, ಈ ವೇಳೆ ಆತನ ಟ್ರೋಲಿ ಬಾಗಿಲಲ್ಲಿ ಸಿಲುಕಿದ ಪರಿಣಾಮ ಆತನ ಒಂದು ಕಾಲು ಲಿಫ್ಟ್‌ನ ಹೊರಗೆ ಬಾಕಿ ಆಗಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಯುವಕ ಪೆರಂಬೂರಿನ ಹೈದರ್ ಗಾರ್ಡನ್ ನಿವಾಸಿ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಿಸಿದ್ದಾರೆ. ಚೆನ್ನೈ ನಗರದ ರಾಧಾಕೃಷ್ಣ ಸಲೈ ನಗರದಲ್ಲಿ ಇರುವ ಹೊಟೇಲೊಂದರಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕೆಲಸ ಮುಗಿಸಿ ಮನೆಗೆ ಹೊರಟ ಯುವಕ ಟ್ರೋಲಿಯೊಂದಿಗೆ ಲಿಫ್ಟ್‌ಗೆ ಬಂದಿದ್ದಾನೆ. ಒಂಬತ್ತನೇ ಪ್ಲೋರ್‌ನಲ್ಲಿದ್ದ ಆತ ಲಿಫ್ಟ್‌ಗೆ ಹೋಗಿ 8ನೇ ಪ್ಲೋರ್‌ಗೆ ತೆರಳಲು ಬಟನ್ ಪ್ರೆಸ್ ಮಾಡಿದ್ದಾನೆ. ಈ ವೇಳೆ ಒಂದು ಕಾಲು ಲಿಫ್ಟ್‌ನಲ್ಲಿ ಸಿಲುಕಿಕೊಂಡಿದೆ. ಲಿಫ್ಟ್‌ನ ಬಾಗಿಲಲ್ಲಿ ಟ್ರೋಲಿ ಸಿಲುಕಿದ ಪರಿಣಾಮ ಈ ಅನಾಹುತ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಲಿಫ್ಟ್ ಬಾಗಿಲಿಗೆ ಸಿಲುಕಿ 9 ವರ್ಷದ ಬಾಲಕ ಸಾವು
ವಿಚಾರ ತಿಳಿದ ಕೂಡಲೇ ಮೈಲಾಪೊರೆ ಅಗ್ನಿಶಾಮಕ ಸಿಬ್ಬಂದಿ (Mylapore Fire Brigade) ಹಾಗೂ ಇಗ್‌ಮೊರೆ ರಕ್ಷಣಾ ತಂಡ (Egmore Rescue Services)ಸ್ಥಳಕ್ಕೆ ಆಗಮಿಸಿದ್ದು, ಸಂಜೆ 5.30ಕ್ಕೆ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ನಂತರ ಶವವನ್ನು ರೊಯಾಪೇಟೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.ಮೃತ ಯುವಕನ ಸಹೋದರ ಅವಿನೇಶ್ ಕುಮಾರ್ (Avinesh Kumar) ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304(ಎ) ಅಡಿ ಪ್ರಕರಣ ದಾಖಲಾಗಿದೆ. ಲಿಫ್ಟ್ ಇನ್‌ಚಾರ್ಜ್ ಗೋಕುಲ್, ಚೀಫ್ ಇಂಜಿನಿಯರ್ ವಿನೋತ್ ಕುಮಾರ್ (Vinoth Kumar), ಹಾಗೂ ಹೊಟೇಲ್ ನಿರ್ವಹಕಾ ಅಧಿಕಾರಿ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.
