ಲಿಫ್ಟ್ ಬಾಗಿಲಿಗೆ ಸಿಲುಕಿ 9 ವರ್ಷದ ಬಾಲಕ ಸಾವನ್ನಪ್ಪಿದ ಆಘಾತಕಾರಿ ಘಟನೆ ಪಶ್ಚಿಮ ದೆಹಲಿಯ ವಿಕಾಸ್‌ಪುರಿಯಲ್ಲಿ ನಡೆದಿದೆ. ಆಶೀಶ್ ಮೃತ ಬಾಲಕನಾಗಿದ್ದು, ಈತ ಸೀತಾಪುರಿ ಪ್ರದೇಶದಲ್ಲಿ ತನ್ನ ಪೋಷಕರೊಂದಿಗೆ ವಾಸ ಮಾಡುತ್ತಿದ್ದ.
ನವದೆಹಲಿ: ಲಿಫ್ಟ್ ಬಾಗಿಲಿಗೆ ಸಿಲುಕಿ 9 ವರ್ಷದ ಬಾಲಕ ಸಾವನ್ನಪ್ಪಿದ ಆಘಾತಕಾರಿ ಘಟನೆ ಪಶ್ಚಿಮ ದೆಹಲಿಯ ವಿಕಾಸ್‌ಪುರಿಯಲ್ಲಿ ನಡೆದಿದೆ. ಆಶೀಶ್ ಮೃತ ಬಾಲಕನಾಗಿದ್ದು, ಈತ ಸೀತಾಪುರಿ ಪ್ರದೇಶದಲ್ಲಿ ತನ್ನ ಪೋಷಕರೊಂದಿಗೆ ವಾಸ ಮಾಡುತ್ತಿದ್ದ. ಈತನ ಪೋಷಕರು ಲ್ಯಾಂಡ್ರಿ (ಬಟ್ಟೆ ತೊಳೆಯುವ ಹಾಗೂ ಇಸ್ತ್ರೀ ಹಾಕಿ ಸ್ವಚ್ಛಗೊಳಿಸಿ ನೀಡುವ ಕೆಲಸ) ಮಾಡುತ್ತಿದ್ದರು. ಸಮೀಪದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ ಮಾಡುವವರ ಬಟ್ಟೆಗಳನ್ನು ಸಂಗ್ರಹಿಸಿ ಲ್ಯಾಂಡ್ರಿ ಮಾಡಿ ನೀಡುತ್ತಿದ್ದರು.
ಮಾರ್ಚ್ 24 ರಂದು ಈ ಘಟನೆ ನಡೆದಿದೆ. ಬಾಲಕನನ್ನು ತಾನು ಕೆಲಸ ಮಾಡುವ ಸ್ಥಳದಲ್ಲಿ ಬಿಟ್ಟು ಬಾಲಕನ ತಾಯಿ ಜೆ ಬ್ಲಾಕ್‌ನಲ್ಲಿರುವ ಐದಂತಸ್ಥಿನ ಕಟ್ಟಡಕ್ಕೆ ಐರನ್ ಮಾಡಿದ ಬಟ್ಟೆಗಳನ್ನು ಗ್ರಾಹಕರಿಗೆ ಮರಳಿಸಲು ಹೋಗಿದ್ದಾರೆ. ಈ ವೇಳೆ ಬಾಲಕನ ಅಮ್ಮನನ್ನು ಹಿಂಬಾಲಿಸಿ ಹೋಗಿದ್ದಾನೆ. ತಾಯಿ ರೇಖಾ ಕಟ್ಟಡದ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಿದ್ದು, ತಾಯಿಯನ್ನು ಹಿಂಬಾಲಿಸಿ ಹೋದ ಮಗ ಲಿಫ್ಟ್‌ನಲ್ಲಿ ಹೋಗಲು ಮುಂದಾಗಿದ್ದು, ಬಾಗಿಲು ಮುಚ್ಚುತ್ತಿರುವ ವೇಳೆ ಒಳ ಹೋಗಿದ್ದಾನೆ. ಆಗ ಲಿಫ್ಟ್ ಬಾಗಿಲು ಹಾಕಿಕೊಂಡಿದ್ದು ಮಧ್ಯೆ ಸಿಲುಕಿ ಕೊಂಡಿದ್ದಾನೆ. ಲಿಫ್ಟ್ ಮೇಲಕ್ಕೆ ಹೋಗಿದ್ದು ಬಾಲಕನಿಗೆ ಗಂಭೀರ ಗಾಯಗಳಾಗಿದ್ದವೂ, ಸ್ವಲ್ಪ ಹೊತ್ತಿನಲ್ಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆದರೆ ಆತ ಸಾವನ್ನಪ್ಪಿದ್ದಾನೆ. ಬಆಲಕ ಸುಮಾರು 30 ನಿಮಿಷ ಲಿಫ್ಟ್‌ನಲ್ಲಿ ಸಿಲುಕಿದ್ದ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
Bengaluru: ನಿರ್ಮಾಣ ಹಂತ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು ಬಾಲಕಿ ಸಾವು
ಆದರೆ ಮಗ ತನ್ನನ್ನು ಹಿಂಬಾಲಿಸಿ ಬಂದು ಲಿಫ್ಟ್‌ಗೆ ಸಿಲುಕಿದ್ದು, ತಾಯಿಗೆ ಗೊತ್ತಿರಲಿಲ್ಲ. ಬಟ್ಟೆಯನ್ನು ಗ್ರಾಹಕರಿಗೆ ನೀಡಿ ಮರಳಿದ ಆಕೆ ಪತಿಯ ಬಳಿ ಮಗ ಎಲ್ಲಿ ಎಂದು ಕೇಳಿದಾಗ ಆತ ನಿನ್ನನ್ನು ಹಿಂಬಾಲಿಸಿ ಹೋಗಿರುವುದಾಗಿ ಅವರು ಪತ್ನಿಗೆ ಹೇಳಿದ್ದಾರೆ. ನಂತರ ಹುಡುಕಾಟ ನಡೆಸಿದಾಗ ಬಾಲಕ ಲಿಫ್ಟ್‌ನಲ್ಲಿ ಸಿಲುಕಿರುವುದು ಗೊತ್ತಾಗಿದೆ. ನಂತರ ಸ್ಥಳೀಯರು ಹಾಗೂ ಪೊಲೀಸರು ಸೇರಿ ಬಾಲಕನನ್ನು ಲಿಫ್ಟ್‌ನಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ಪ್ರಾಣಬಿಟ್ಟಿದ್ದಾನೆ.
ಈ ಲಿಫ್ಟ್ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಉಪ ಪೊಲೀಸ್ ಕಮೀಷನರ್ ಘನಶ್ಯಾಂ ಬನ್ಸಲ್ ಹೇಳಿದ್ದಾರೆ. ಖಾಸಗಿ ಸಂಸ್ಥೆಯೊಂದು ನಿರ್ವಹಣೆ ಮಾಡುವ ಮೇಲುಸ್ತುವಾರಿ ವಹಿಸಿಕೊಂಡಿತ್ತು. ಆರು ತಿಂಗಳ ಹಿಂದಷ್ಟೇ ಲಿಫ್ಟ್ ನಿರ್ವಹಣೆ ಮಾಡಲಾಗಿತ್ತು. ಲಿಫ್ಟ್ ತಪಾಸಣೆಗೆ ಒಳಪಡಿಸಿದ ನಂತರವೇ ಘಟನೆಗೆ ನಿಖರ ಕಾರಣ ತಿಳಿಯಲಿದೆ ಎಂದು ಕಮೀಷನರ್ ಹೇಳಿದ್ದಾರೆ.
ಕೆಟ್ಟು ನಿಂತ ಲಿಫ್ಟ್, ತಮ್ಮದೇ ಆರತಕ್ಷತೆ ಮಿಸ್ ಮಾಡ್ಕೊಂಡ NRI ಜೋಡಿ
ಇತ್ತ ಮೃತ ಬಾಲಕ ಆಶೀಶ್ (Ashish) 4ನೇ ತರಗತಿಯಲ್ಲಿ ಕಲಿಯುತ್ತಿದ್ದ, ಏಪ್ರಿಲ್‌ನಲ್ಲಿ ಆತನಿಗೆ ತರಗತಿ ಮಾರು ಆರಂಭವಾಗುವುದರಲಿತ್ತು. ನಮ್ಮ ಕನಿಷ್ಠ ಆದಾಯದ ನಡುವೆಯೂ ನಾವು ಆತನಿಗೆ ಉತ್ತಮ ಶಿಕ್ಷಣ ಕೊಡಿಸಿದ್ದೆವು. ನಾವು ಆತ ಸರ್ಕಾರಿ ಅಧಿಕಾರಿ ಆಗಬೇಕೆಂದು ಬಯಸಿದ್ದೆವು ಎಂದು ಬಾಲಕನ ತಂದೆ ರಮೇಶ್ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
