Asianet Suvarna News Asianet Suvarna News

ಬಸ್‌ ಡ್ರೈವಿಂಗ್ ನಲ್ಲಿದ್ದಾಗಲೇ ಹೃದಯಾಘಾತ, 40 ಜನರ ಪ್ರಾಣ ಉಳಿಸಿ ಉಸಿರು ಚೆಲ್ಲಿದ ಚಾಲಕ

ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ಬಸ್ ಚಾಲಕನಿಗೆ ಹೃದಯಾಘಾತವಾಗಿ ಬಸ್ ಪಲ್ಟಿಯಾಗಿದೆ. ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಗಾಯಗಳಾಗಿವೆ. ಬಸ್‌ನಲ್ಲಿದ್ದ 40 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

A bus veered off after driver suffers heart attack in andhra pradesh gow
Author
First Published Oct 16, 2024, 5:07 PM IST | Last Updated Oct 16, 2024, 5:07 PM IST

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಸಂಖ್ಯೆಗಳು ಹೆಚ್ಚಾಗುತ್ತಲೇ ಇದೆ. ಮದ್ಯವಯಸ್ಕರಲ್ಲಿ ಇಂದಿನ ದಿನಗಳಲ್ಲಿ ಅತೀ ಹೆಚ್ಚು ಗೋಚರಿಸುತ್ತದೆ. ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ಬಸ್‌ ಚಲಾಯಿಸುತ್ತಿದ್ದ ಚಾಲಕನೊಬ್ಬನಿಗೆ ಪ್ರಯಾಣದ ಮಧ್ಯದಲ್ಲೇ ಹೃದಯಾಘಾತವಾಗಿರುವ ದಾರುಣ ಘಟನೆ ನಡೆದಿದೆ.

ಎರಡನೇ ಮದುವೆ ಸುದ್ದಿ ಬೆನ್ನಲ್ಲೇ ಟರ್ಕಿ ಟ್ರಿಪ್ ಎಂಜಾಯ್ ಮಾಡುತ್ತಿರುವ ಸಾನಿಯಾ, ಜತೆಯಲ್ಲಿರೋರು ಯಾರು?

ರೇಪಲ್ಲೆಯಿಂದ ಚಿರಾಳಕ್ಕೆ ಬಸ್ ಚಲಾಯಿಸುತ್ತಿದ್ದಾಗ ಹೃದಯಾಘಾತದಿಂದ ಎಪಿಎಸ್‌ಆರ್‌ಟಿಸಿ ಬಸ್ ಚಾಲಕ ಡಿ.ಸಾಂಬಶಿವ ರಾವ್ ಅವರು ಮೃತಪಟ್ಟಿದ್ದಾರೆ.  ಬಾಪಟ್ಲಾ ಡಿಪೋಗೆ ಸೇರಿದ ಬಸ್ ಚಾಲಕನಿಗೆ ಹೃದಯಾಘಾತವಾದಾಗ ನಿಯಂತ್ರಣ ತಪ್ಪಿದೆ. ನಂತರ ರಸ್ತೆಯಿಂದ ಆಚೆ ಇರುವ ಪಕ್ಕದ ಹೊಲದಲ್ಲಿ ಹೂತು ನಿಂತಿದೆ.

ಶರದ್ ಪೂರ್ಣಿಮೆಯಲ್ಲಿ ಹುಟ್ಟಿದ ಮಗಳಿಗೆ 'ಮ' ಅಕ್ಷರದ ಹೆಸರುಗಳು

ಬಸ್ ಪಲ್ಟಿಯಾಗುತ್ತಿದ್ದಂತೆ ಅದೇ ಸಮಯಕ್ಕೆ ಅದೇ ಮಾರ್ಗದಲ್ಲಿ ಒಂದು ಬೈಕ್‌  ಬಂದಿದ್ದು,  ಬೈಕ್ ಸವಾರ ಪಿಟ್ಟಾ ವೆಂಕಟೇಶ್ವರ ರೆಡ್ಡಿ ಎಂಬುವವರಿಗೆ ಡಿಕ್ಕಿ ಹೊಡೆದು ಅವರಿಗೆ ತೀವ್ರ ಗಾಯವಾಗಿದೆ. ಬಸ್‌ ನಲ್ಲಿ ಸುಮಾರು 40 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯವಾದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತವಾದಾಗ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದರು. ಗಾಯ ಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಾಯ ಮಾಡಿದರು. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

Latest Videos
Follow Us:
Download App:
  • android
  • ios