Asianet Suvarna News Asianet Suvarna News

ಬ್ರಹ್ಮಪುತ್ರದಲ್ಲಿ 120 KM ನಿರಂತರ ಈಜಿದ ಬೆಂಗಾಲಿ ಟೈಗರ್ ಕೊನೆಗೂ ಕಾಡಿಗೆ

10 ಗಂಟೆ ಕಾಲ ನಿರಂತರ ಬ್ರಹ್ಮಪುತ್ರ ನದಿಯಲ್ಲಿ ನಿರಂತರ 120 ಕಿಲೋ ಮೀಟರ್ ಈಜಿ ಸುದ್ದಿಯಾಗಿದ್ದ ಬೆಂಗಾಲಿ ಟೈಗರೊಂದನ್ನು ಮರಳಿ ಅದರ ಆವಾಸಸ್ಥಾನಕ್ಕೆ ಬಿಡಲಾಗಿದೆ. ಕೆಲ ದಿನಗಳ ಹಿಂದೆ ಹುಲಿಯೊಂದು ನದಿಯಲ್ಲಿ ಈಜುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

A Bengali tiger who swam 120 KM continuously in the Brahmaputra is finally Released to its natural habitat akb
Author
First Published Dec 26, 2022, 10:28 PM IST

ಗುವಾಹಟಿ: 10 ಗಂಟೆ ಕಾಲ ನಿರಂತರ ಬ್ರಹ್ಮಪುತ್ರ ನದಿಯಲ್ಲಿ ನಿರಂತರ 120 ಕಿಲೋ ಮೀಟರ್ ಈಜಿ ಸುದ್ದಿಯಾಗಿದ್ದ ಬೆಂಗಾಲಿ ಟೈಗರೊಂದನ್ನು ಮರಳಿ ಅದರ ಆವಾಸಸ್ಥಾನಕ್ಕೆ ಬಿಡಲಾಗಿದೆ. ಕೆಲ ದಿನಗಳ ಹಿಂದೆ ಹುಲಿಯೊಂದು ನದಿಯಲ್ಲಿ ಈಜುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈಗ ಅದೇ ಹುಲಿಯನ್ನು ಅಸ್ಸಾಂ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಬಿಡುತ್ತಿರುವ ವಿಡಿಯೋವನ್ನು ಕೂಡ ಅವರು ಪೋಸ್ಟ್ ಮಾಡಿದ್ದಾರೆ.

ವಿಡಿಯೋದಲ್ಲಿ ಕಾಣಿಸುವಂತೆ ತೆರೆದ ವಾಹನದಲ್ಲಿ ಹುಲಿ ಇರುವ ಬೋನನ್ನು ಇರಿಸಿ ತೆಗೆದುಕೊಂಡು ಹೋಗಿ ಕಾಡು ಪ್ರದೇಶದಲ್ಲಿ ಬೋನಿನ ಬಾಗಿಲು ತೆರೆದು ಬಿಡಲಾಯ್ತು. ಬಾಗಿಲು ತೆರೆಯುತ್ತಿದ್ದಂತೆ ಹುಲಿ ಬೋನಿನಿಂದ ಜಿಗಿದು ಕಾಡಿನತ್ತ ಹೊರಟು ಹೋಗಿದೆ. ಈ ವಿಡಿಯೋ ಶೇರ್ ಮಾಡುತ್ತಾ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ (Susanta Nanda) ಹೀಗೆ ಬರೆದುಕೊಂಡಿದ್ದಾರೆ. 'ಈ ಹುಲಿ ಅಸ್ಸಾಂನ ಉಮಾನಂದ ದ್ವೀಪವನ್ನು (Umananda Island) ತಲುಪಲು ಬ್ರಹ್ಮಪುತ್ರ ನದಿಯಲ್ಲಿ (Brahmaputra) 50 ಕಿಲೋಮೀಟರ್ ಈಜಿತು. ನಂತರ ಈ ಹುಲಿಯನ್ನು ಸೆರೆಹಿಡಿದು ಆರೋಗ್ಯ ತಪಾಸಣೆಯ ನಂತರ ಇಂದು ನಮೆರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (Nameri Tiger Reserve ) ಮತ್ತೆ ಕಾಡಿಗೆ ಬಿಡಲಾಯಿತು. ಅಸ್ಸಾಂ ಅರಣ್ಯ ಇಲಾಖೆ ತಂಡ ಒಳ್ಳೆ ಕೆಲಸ ಮಾಡಿದೆ' ಎಂದು ಬರೆದುಕೊಂಡಿದ್ದಾರೆ. 

ಬ್ರಹ್ಮಪುತ್ರದಲ್ಲಿ 120 KM ಈಜಿದ ಬೆಂಗಾಲಿ ಟೈಗರ್.. ವಿಡಿಯೋ ವೈರಲ್

ಈ ಹುಲಿ ಜನರಿಗೆ ಕಾಣಿಸುವ ಮೊದಲು ಬ್ರಹ್ಮಪುತ್ರ ನದಿಯನ್ನು ನಿರಂತರ 10 ಗಂಟೆಗಳ ಕಾಲ ಈಜಿದೆ. ನಂತರ ವಿಶ್ವದ ಅತ್ಯಂತ ಸಣ್ಣ ದ್ವೀಪ ಎನಿಸಿರುವ ಗುವಾಹಟಿಗೆ ಸಮೀಪವಿರುವ ಪಿಕಾಕ್ ದ್ವೀಪವನ್ನು (Peacock Island) ಬಂದು ತಲುಪಿದೆ. ಈ ದ್ವೀಪದಲ್ಲಿರುವ ಉಮಾನಂದ ದೇಗುಲದ ವ್ಯಾಪ್ತಿಯಲ್ಲಿ ಬ್ರಹ್ಮಪುತ್ರ ನಡಿಯಲ್ಲಿ ಹುಲಿ ಈಜುವುದನ್ನು ನೋಡಿ ಅಲ್ಲಿದ್ದ ಕೆಲವು ಕೆಲಸಗಾರರ ಗುಂಪು ದಂಗಾಗಿ ಸಮೀಪದ ಎನ್‌ಡಿಆರ್‌ಎಫ್‌ ಘಟಕಕ್ಕೆ ವಿಚಾರ ತಿಳಿಸಿದ್ದರು. ಈ ವೇಳೆ ಹುಲಿ ದ್ವೀಪದಲ್ಲಿರುವ ಪುಟ್ಟ ಗುಹೆಯತ್ತ ಸಾಗುತ್ತಿತ್ತು. ಈ ಹುಲಿ ದ್ವೀಪದಿಂದ 120 ಕಿಲೋ ಮೀಟರ್ ದೂರದಲ್ಲಿರುವ ಓರಂಗ ರಾಷ್ಟ್ರೀಯ ಪಾರ್ಕ್‌ನಿಂದ ಬಂದಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ನಂತರ ಅನುಮಾನ ವ್ಯಕ್ತಪಡಿಸಿದ್ದರು. 

ಓರಂಗ ರಾಷ್ಟ್ರೀಯ ಪಾರ್ಕ್‌ (Oranga National Park)  ಗುವಾಹಟಿಯಿಂದ (Guwahati) ಬ್ರಹ್ಮಪುತ್ರ (Brahmaputra river) ನದಿಯಲ್ಲಿ ಬೋಟ್‌ನಲ್ಲಿ ಸಾಗಿದರೆ ಕೇವಲ 10 ನಿಮಿಷದ ಅವಧಿಯಲ್ಲಿ ಅಲ್ಲಿಗೆ ತಲುಪಬಹುದಾದಷ್ಟು ದೂರದಲ್ಲಿ ಇದೆ. ಬಹುಶಃ ಈ ಹುಲಿ ನೀರು ಕುಡಿಯಲು ಬಂದ ವೇಳೆ ನದಿಯ ಬೃಹತ್ ಅಲೆಗಳಿಗೆ ಸಿಲುಕಿ ಕೊಚ್ಚಿಕೊಂಡು ಇತ್ತ ಬಂದಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ನಂತರ ಅನುಮಾನ ವ್ಯಕ್ತಪಡಿಸಿದ್ದರು. 

ಜೊಯಿಡಾ : ಆತಂಕ ಸೃಷ್ಟಿಸಿದ್ದ ಹುಲಿ ಕೊನೆಗೂ ಬೋನಿಗೆ ಸೆರೆ

ಹುಲಿ ಇರುವ ಬಗ್ಗೆ ಮಾಹಿತಿ ಪಡೆದ ವಿಪತ್ತು ನಿರ್ವಹಣಾ ಪಡೆ, ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ (forest officials) ಹಾಗೂ ಪಶು ವೈದ್ಯರು ಜೊತೆಯಾಗಿ ಸ್ಥಳಕ್ಕೆ ಆಗಮಿಸಿದ್ದರು.ಇತ್ತ ಈ ಹುಲಿ ಎರಡು ದೊಡ್ಡದಾದ ಕಲ್ಲುಗಳ ಮಧ್ಯೆ ಸಿಲುಕಿತ್ತು. ಹೀಗಾಗಿ ಬಹಳ ಜಾಗರೂಕತೆಯಿಂದ ಈ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಇದೊಂದು ಬಲು ಕಷ್ಟದ ಟಾಸ್ಕ್ ಆಗಿತ್ತು. ಏನಾದರು ಸ್ವಲ್ಪ ಹೆಚ್ಚು ಕಡಿಮೆ ಆದರೂ ಹುಲಿ ನೀರಿಗೆ ಬಿದ್ದು ಕೊಚ್ಚಿ ಹೋಗುವ ಸಾಧ್ಯತೆ ಇತ್ತು. ಹಾಗೆಯೇ ಶಾಂತವಾಗಿಲ್ಲದೇ ಇದ್ದಲ್ಲಿ ರಕ್ಷಣಾ ತಂಡದ ಮೇಲೆ ದಾಳಿ ನಡೆಸುವ ಸಾಧ್ಯತೆ ಇತ್ತು. ಹೀಗಾಗಿ ತಂಡವೂ ಹುಲಿ ಸಂಪೂರ್ಣವಾಗಿ ಶಾಂತವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ಮೇಲೆಯೇ ಅದನ್ನು ನಿಧಾನವಾಗಿ ಹಿಡಿದು ಗೂಡಿನೊಳಗೆ ಹಾಕಿದರು. ಈ ಹುಲಿ ಸಿಲುಕಿಕೊಂಡಿದ್ದ ಕಲ್ಲುಗಳು ತುಂಬಾ ಸಪೂರವಾಗಿದ್ದರಿಂದ ಈ ಕಾರ್ಯಾಚರಣೆಗೆ ಬಹಳ ಸಮಯ ಹಿಡಿಯಿತು ಎಂದು ಕಾರ್ಯಾಚರಣೆ ತಂಡದ ಭಾಗವಾಗಿದ್ದ ಅಧಿಕಾರಿಗಳು ತಿಳಿಸಿದ್ದಾರೆ. 

 

Follow Us:
Download App:
  • android
  • ios