Asianet Suvarna News Asianet Suvarna News

ಬ್ರಹ್ಮಪುತ್ರದಲ್ಲಿ 120 KM ಈಜಿದ ಬೆಂಗಾಲಿ ಟೈಗರ್.. ವಿಡಿಯೋ ವೈರಲ್

ಇಲ್ಲೊಂದು ಕಡೆ ಹುಲಿಯೊಂದು ಬರೋಬ್ಬರಿ 120 ಕಿಲೋ ಮೀಟರ್ ದೂರ ಈಜಿ ನದಿಯ ಮತ್ತೊಂದು ತುದಿ ತಲುಪಿದೆ. ಇದಕ್ಕೆ ಹುಲಿ ತೆಗೆದುಕೊಂಡ ಸಮಯ 10 ಗಂಟೆಗಳು. ರಾಯಲ್ ಬೆಂಗಾಲಿ ಟೈಗರೊಂದು ಈ ಸಾಧನೆ ಮಾಡಿದೆ. ಹುಲಿ ಬ್ರಹ್ಮಪುತ್ರ ನದಿಯನ್ನು ಈಜಿ ದಡ ಸೇರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Bengali tiger swimming in Brahmaputra river video akb
Author
First Published Dec 21, 2022, 3:20 PM IST

ಗುವಾಹಟಿ: ಸಾಮಾನ್ಯವಾಗಿ ಮನುಷ್ಯರು ಈಜುವುದನ್ನು ನೀವು ನೋಡಿದ್ದೀರಿ, ಕಿಲೋ ಮೀಟರ್‌ಗಟ್ಟಲೇ ಈಜಿ ಚಿನ್ನದ ಪದಕ ಗಳಿಸಿದ್ದನ್ನು ನೋಡಿರುತ್ತೀರಿ. ಆದರೆ ಹುಲಿ ಈಜುವುದನ್ನು ನೋಡಿದ್ದೀರಾ.. ಇಲ್ಲೊಂದು ಕಡೆ ಹುಲಿಯೊಂದು ಬರೋಬ್ಬರಿ 120 ಕಿಲೋ ಮೀಟರ್ ದೂರ ಈಜಿ ನದಿಯ ಮತ್ತೊಂದು ತುದಿ ತಲುಪಿದೆ. ಇದಕ್ಕೆ ಹುಲಿ ತೆಗೆದುಕೊಂಡ ಸಮಯ 10 ಗಂಟೆಗಳು. ರಾಯಲ್ ಬೆಂಗಾಲಿ ಟೈಗರೊಂದು ಈ ಸಾಧನೆ ಮಾಡಿದೆ. ಹುಲಿ ಬ್ರಹ್ಮಪುತ್ರ ನದಿಯನ್ನು ಈಜಿ ದಡ ಸೇರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈಜುತ್ತಾ ಬಂದ ಹುಲಿ ವಿಶ್ವದ ಅತ್ಯಂತ ಸಣ್ಣ ದ್ವೀಪ ಎನಿಸಿರುವ ಗುವಾಹಟಿಗೆ ಸಮೀಪವಿರುವ ಪಿಕಾಕ್ ದ್ವೀಪವನ್ನು ಬಂದು ತಲುಪಿದೆ.ಮಂಗಳವಾರ ಈ ದ್ವೀಪದಲ್ಲಿರುವ ಉಮಾನಂದ ದೇಗುಲದ ವ್ಯಾಪ್ತಿಯಲ್ಲಿ ಬ್ರಹ್ಮಪುತ್ರ ನಡಿಯಲ್ಲಿ ಹುಲಿ ಈಜುವುದನ್ನು ನೋಡಿ ಅಲ್ಲಿದ್ದ ಕೆಲವು ಕೆಲಸಗಾರರ ಗುಂಪು ದಂಗಾಗಿದ್ದಾರೆ. ಈ ವೇಳೆ ಹುಲಿ ದ್ವೀಪದಲ್ಲಿರುವ ಪುಟ್ಟ ಗುಹೆಯತ್ತ ಸಾಗುತ್ತಿತ್ತು. ಈ ಹುಲಿ ದ್ವೀಪದಿಂದ 120 ಕಿಲೋ ಮೀಟರ್ ದೂರದಲ್ಲಿರುವ ಓರಂಗ ರಾಷ್ಟ್ರೀಯ ಪಾರ್ಕ್‌ನಿಂದ ಬಂದಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. 

ಓರಂಗ ರಾಷ್ಟ್ರೀಯ ಪಾರ್ಕ್‌  ಗುವಾಹಟಿಯಿಂದ ಬ್ರಹ್ಮಪುತ್ರ (Brahmaputra river) ನದಿಯಲ್ಲಿ ಬೋಟ್‌ನಲ್ಲಿ ಸಾಗಿದರೆ ಕೇವಲ 10 ನಿಮಿಷದ ಅವಧಿಯಲ್ಲಿ ಅಲ್ಲಿಗೆ ತಲುಪಬಹುದಾದಷ್ಟು ದೂರದಲ್ಲಿ ಇದೆ. ಬಹುಶಃ ಈ ಹುಲಿ ನೀರು ಕುಡಿಯಲು ಬಂದ ವೇಳೆ ನದಿಯ ಬೃಹತ್ ಅಲೆಗಳಿಗೆ ಸಿಲುಕಿ ಕೊಚ್ಚಿಕೊಂಡು ಇತ್ತ ಬಂದಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ.   

ಇತ್ತ ಹುಲಿ (Bengali Tiger) ನೋಡಿದ ದ್ವೀಪದ ಜನ ಆತಂಕಕ್ಕೆ ಒಳಗಾಗಿದ್ದು, ಅದೇ ದ್ವೀಪದಲ್ಲಿ ಘಟಕವನ್ನು ಹೊಂದಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ನಂತರ ಅಲ್ಲಿಗೆ ವಿಪತ್ತು ನಿರ್ವಹಣಾ ಪಡೆ, ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ (forest officials) ಹಾಗೂ ಪಶು ವೈದ್ಯರು ಜೊತೆಯಾಗಿ ಆಗಮಿಸಿದ್ದಾರೆ. ಮೊದಲಿಗೆ ಈ ರಕ್ಷಣಾ ಕಾರ್ಯಾಚರಣೆ ತಂಡ ಈ ನದಿ ದಡದಿಂದ ದೂರದಲ್ಲಿರುವ ಹುಲಿಯನ್ನು ಶಾಂತಗೊಳಿಸುವುದು ಕಷ್ಟ ಎಂದು ಭಾವಿಸಿದ್ದರು. ಈ ಹುಲಿ ಎರಡು ದೊಡ್ಡದಾದ ಕಲ್ಲುಗಳ ಮಧ್ಯೆ ಸಿಲುಕಿತ್ತು. ಹೀಗಾಗಿ ರಕ್ಷಣಾ ಕಾರ್ಯಾಚರಣೆ ತಂಡ ಬಹಳ ಜಾಗರೂಕತೆಯಿಂದ ಈ ಕಾರ್ಯಾಚರಣೆಯನ್ನು ನಡೆಸಿತ್ತು ಎಂದು ಅರಣ್ಯ ಸಿಬ್ಬಂದಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ. 

ಜೊಯಿಡಾ : ಆತಂಕ ಸೃಷ್ಟಿಸಿದ್ದ ಹುಲಿ ಕೊನೆಗೂ ಬೋನಿಗೆ ಸೆರೆ

ಇದೊಂದು ಬಲು ಕಷ್ಟದ ಟಾಸ್ಕ್ ಆಗಿತ್ತು. ಏನಾದರು ಸ್ವಲ್ಪ ಹೆಚ್ಚು ಕಡಿಮೆ ಆದರೂ ಹುಲಿ ನೀರಿಗೆ ಬಿದ್ದು ಕೊಚ್ಚಿ ಹೋಗುವ ಸಾಧ್ಯತೆ ಇತ್ತು. ಹಾಗೆಯೇ ಶಾಂತವಾಗಿಲ್ಲದೇ ಇದ್ದಲ್ಲಿ ರಕ್ಷಣಾ ತಂಡದ ಮೇಲೆ ದಾಳಿ ನಡೆಸುವ ಸಾಧ್ಯತೆ ಇತ್ತು. ಹೀಗಾಗಿ ತಂಡವೂ ಹುಲಿ ಸಂಪೂರ್ಣವಾಗಿ ಶಾಂತವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ಮೇಲೆಯೇ ಅದನ್ನು ನಿಧಾನವಾಗಿ ಹಿಡಿದು ಗೂಡಿನೊಳಗೆ ಹಾಕಿದರು. ಈ ಹುಲಿ ಸಿಲುಕಿಕೊಂಡಿದ್ದ ಕಲ್ಲುಗಳು ತುಂಬಾ ಸಪೂರವಾಗಿದ್ದರಿಂದ ಈ ಕಾರ್ಯಾಚರಣೆಗೆ ಬಹಳ ಸಮಯ ಹಿಡಿಯಿತು. 

ಈ ಹುಲಿಯಿಂದಾಗಿ ಇತ್ತ ಉಮಾನಂದ ದೇಗುಲಕ್ಕೆ ಆಗಮಿಸಿದ್ದ ಭಕ್ತರನ್ನು ಬೋಟಿನಲ್ಲಿ ತುಂಬಿ ಅಲ್ಲಿಂದ ಮೊದಲಿಗೆ ಅವರನ್ನು ಸ್ಥಳಾಂತರ ಮಾಡಲಾಯ್ತು. ನಂತರ ಅರಣ್ಯ ಸಿಬ್ಬಂದಿ ಈ ಪುಟ್ಟ ದ್ವೀಪವನ್ನು ಸುತ್ತುವರೆದು ಈ ಹುಲಿಯನ್ನು ಸುರಕ್ಷಿತವಾಗಿ ರಕ್ಷಿಸಿ ಅಲ್ಲಿಂದ ಸ್ಥಳಾಂತರಿಸಿದ್ದಾರೆ. ಅಲ್ಲದೇ ದೇಗುಲದ ಪುರೋಹಿತರನ್ನು ಕೂಡ ಸ್ಥಳಾಂತರಿಸಲಾಯ್ತು. ಈ ಉಮಾನಂದ ದೇಗುಲವನ್ನು 17ನೇ ಶತಮಾನದಲ್ಲಿ ಅಹೋಮ್ ರಾಜ ಗದಧಾರ್ ಸಿಂಗಾ ಎಂಬುವವರು ಕಟ್ಟಿಸಿದ್ದರು.

ಕ್ಲಚ್ ವೈರ್‌ನಿಂದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಹುಲಿ ಶವಪತ್ತೆ


 

Follow Us:
Download App:
  • android
  • ios