Asianet Suvarna News Asianet Suvarna News

ಮಗುವಿನ ಮೇಲೆ ಕಾರು ಹತ್ತಿಸಿದ, ಕೈ ಮುಗಿದು ಬೇಡಿಕೊಂಡರು ಆಸ್ಪತ್ರೆ ಸೇರಿಸಲು ನಿರಾಕರಿಸಿದ : ಮಗು ಸಾವು

ವಾಲೆಟ್ ಪಾರ್ಕಿಂಗ್‌ನಲ್ಲಿ ಮೂರು ವರ್ಷದ ಮಗುವೊಂದು ಕಾರಿನ ಚಕ್ರಕ್ಕೆ ಸಿಲುಕಿ ಸಾವಿಗೀಡಾದ ದುರಂತ ಘಟನೆ ಶಿಪ್ರಾ ಮಾಲ್‌ನ ಪಾರ್ಕಿಂಗ್ ಏರಿಯಾದಲ್ಲಿ ನಡೆದಿದೆ.

A 3 year old child died after a car ran over her in a Shipra mall parking lot akb
Author
First Published Mar 4, 2024, 1:09 PM IST

ಗಾಜಿಯಾಬಾದ್: ವಾಲೆಟ್ ಪಾರ್ಕಿಂಗ್‌ನಲ್ಲಿ ಮೂರು ವರ್ಷದ ಮಗುವೊಂದು ಕಾರಿನ ಚಕ್ರಕ್ಕೆ ಸಿಲುಕಿ ಸಾವಿಗೀಡಾದ ದುರಂತ ಘಟನೆ ಶಿಪ್ರಾ ಮಾಲ್‌ನ ಪಾರ್ಕಿಂಗ್ ಏರಿಯಾದಲ್ಲಿ ನಡೆದಿದೆ. ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಬರುವ ಇಂದಿರಾಪುರಂನಲ್ಲಿರುವ ಶಿಪ್ರಾ ಮಾಲ್‌ನಲ್ಲಿ ಈ ಘಟನೆ ನಡೆದಿದೆ.  ಘಟನೆಗೆ ಸಂಬಂಧಿಸಿದಂತೆ ಮಗುವಿನ ಅಪ್ಪ ದುಃಖ  ತೊಡಿಕೊಂಡಿದ್ದು, ಅವರ ಮಾತುಗಳು ಕಣ್ಣೀರು ತರಿಸುತ್ತಿವೆ. 

ಕಾರಿನ ಚಕ್ರಕ್ಕೆ ಸಿಲುಕಿ ಗಾಯಗೊಂಡು ರಕ್ತ ಸೋರುತ್ತಿದ್ದ ಮಗುವನ್ನು  ಆಸ್ಪತ್ರೆಗೆ ಕರೆದೊಯ್ಯುವುದಕ್ಕಾಗಿ ಇತರ ವಾಹನಗಳಿಗೆ ನಿಲ್ಲಿಸುವಂತೆ ಅಂಗಾಲಾಚಿ ಬೇಡಿಕೊಂಡರು ಒಬ್ಬರು ವಾಹನ ನಿಲ್ಲಿಸಲಿಲ್ಲ,  ಹೀಗಾಗಿ ನಂತರ ಸಮಯ ಮೀರುತ್ತಿದ್ದುದ್ದರಿಂದ ಪಾರ್ಕಿಂಗ್ ಲಾಟ್‌ನಲ್ಲಿದ್ದ ನನ್ನ ಬೈಕನ್ನು ತೆಗೆದುಕೊಂಡು ಮಗುವನ್ನು ಬೈಕ್‌ನಲ್ಲೇ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದೆ ಅಷ್ಟರಲ್ಲಾಗಲೇ ಗಂಭೀರ ಗಾಯಗೊಂಡು ರಕ್ತ ಸೋರಿಕೆಯಾಗಿದ್ದ ಆಕೆ ಉಸಿರು ಚೆಲ್ಲಿದಳು ಎಂದು ಮಗುವಿನ ಅಪ್ಪ ದುಃಖ ತೋಡಿಕೊಂಡಿದ್ದಾರೆ. 

ವಿವೇಕ್ ಪಾಂಡೆ ಮಗುವನ್ನು ಕಳೆದುಕೊಂಡ ತಂದೆ. ಇವರು ತಮ್ಮ ಪತ್ನಿ ಗರಿಮಾ ಹಾಗೂ ಪುತ್ರಿ ರಿದಿಯನ್ನು ಕರೆದುಕೊಂಡು ಮಾಲ್‌ಗೆ ಸಿನಿಮಾ ನೋಡುವುದಕ್ಕೆ ಬಂದಿದ್ದರು, ಸಿನಿಮಾ ನೋಡಿದ ನಂತರ ಹೊರಗೆ ಬಂದು ಮನೆಗೆ ವಾಪಸ್ ಹೋಗುವುದಕ್ಕೆ ಪಾರ್ಕಿಂಗ್ ಲಾಟ್ ಬಳಿ ಬಂದಾಗ ಕಾರೊಂದು ಮಗು ಟರ್ನಿಂಗ್‌ನಲ್ಲಿ ರಿದಿ ಮೇಲೆ ಹರಿದಿದೆ.  ಪರಿಣಾಮ ಕೆಳಗೆ ಬಿದ್ದ ಮಗುವಿಗೆ ಗಂಭೀರ ಗಾಯವಾಗಿದೆ.  ಕಾರು ಚಾಲಕ ಕಾರ್ನರ್‌ನಲ್ಲಿ ಮಗು ಇರುವುದನ್ನು ಗಮನಿಸಿರಲಿಲ್ಲ,  ಇತ್ತ ಮಗುವಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ಸಾಗಿಸಿದರು ಮಗು ಬದುಕುಳಿಯಲಿಲ್ಲ.  ಅಪಘಾತದಿಂದಾಗಿ ಮಗು ತೀವ್ರ ರಕ್ತ ಸೋರಿಕೆಗೆ ಒಳಗಾಗಿತ್ತು ಎಂದು ಡಿಸಿಪಿ ನಿಮಿಷ್ ಪಾಟೀಲ್ ಹೇಳಿದ್ದಾರೆ. 

ಕಾರು ಹರಿದು ಅಪಾರ್ಟ್‌ಮೆಂಟ್ ಎದುರು ಆಡುತ್ತಿದ್ದ ಹೆಣ್ಣು ಮಗು ಸಾವು!

ಘಟನೆಗೆ ಸಂಬಂಧಿಸಿದಂತೆ ಮಗುವಿನ ಪೋಷಕರಾದ ವಿವೇಕ್ ಪಾಂಡೆ ಇಂದಿರಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  ಕುಟುಂಬದೊಂದಿಗೆ ವೀಕೆಂಡ್ ಎಂಜಾಯ್ ಮಾಡಲು ಬಂದ ನನ್ನ ಬದುಕಿನಲ್ಲಿ ಈ ರೀತಿ ಸಂಭವಿಸಬಹುದು ಎಂದು ನಾನು ಊಹೆಯೂ ಮಾಡಿರಲಿಲ್ಲ, ಕಾರು ಡಿಕ್ಕಿ ಹೊಡೆದಾಗ ನಾವು ಪಾರ್ಕಿಂಗ್ ಸ್ಥಳಕ್ಕೆ ಹೋಗುತ್ತಿದ್ದೆವು. ಕಾರು ಚಾಲನೆ ಮಾಡ್ತಿದ್ದ ವ್ಯಕ್ತಿ ವೇಗದಲ್ಲಿದ್ದು ಟರ್ನ್ ತೆಗೆದುಕೊಳ್ಳುವ ವೇಳೆ ಹಾರ್ನ್ ಕೂಡ ಮಾಡಲಿಲ್ಲ,  ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ನೆರವಾಗುವಂತೆ ನಾವು ಆತನಿಗೆ ಮನವಿ ಮಾಡಿದರು ಆತ ಸಿದ್ಧನಿರಲಿಲ್ಲ, ನಾವು ಕೈ ಮುಗಿದರು ಆತ ನಮ್ಮ ಮನವಿಯನ್ನು ತಿರಸ್ಕರಿಸಿದ, ಅಲ್ಲಿ ಅದೆಷ್ಟು ಜನರಿದ್ದರೂ ಯಾರು ನಮ್ಮ ನೆರವಿಗೆ ಧಾವಿಸಲಿಲ್ಲ, 

ಹೀಗಾಗಿ ಪಾರ್ಕಿಂಗ್‌ನಲ್ಲಿದ್ದ ಬೈಕ್ ತೆಗೆದುಕೊಂಡು ಮಗುವನ್ನು ಮಧ್ಯೆ ಕೂರಿಸಿಕೊಂಡು ಆಸ್ಪತ್ರೆಗೆ ಬರುವಷ್ಟರಲ್ಲಿ ಮಗುವಿಗೆ ಸಾಕಷ್ಟು ರಕ್ತಸ್ರಾವವಾಗಿತ್ತು. ಆಷ್ಟರಲ್ಲಾಗಲೇ ಆಕೆ ಕೋಮಕ್ಕೆ ಜಾರಿದ್ದಳು, ಆಕೆ ಬದುಕುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.  ಆಸ್ಪತ್ರೆಗೆ ಆಕೆಯನ್ನು ಸರಿಯಾದ ಸಮಯಕ್ಕೆ ಕರೆತಂದಿದ್ದಾರೆ ಆಕೆ ಬದುಕಿರುತ್ತಿದ್ದಳು ಎಂದು ಮಗುವಿನ ಅಪ್ಪ ದುಃಖ ತೋಡಿಕೊಂಡಿದ್ದಾರೆ. 

ಮಗು ಪಡೆಯಲು 11 ವರ್ಷ ತಪಸ್ಸು ಮಾಡಿದ ತಾಯಿ : ಆಸ್ತಿಗಾಗಿ ಐದೇ ತಿಂಗಳಿಗೆ ಬಲಿ ಪಡೆದಳು ಮಲತಾಯಿ

ಇನ್ನು ಮಾಲ್ ಸಿಬ್ಬಂದಿ ನಮಗೆ ಸಿಸಿಟಿವಿ ದೃಶ್ಯಾವಳಿ ನೀಡಲು ನಿರಾಕರಿಸಿದ್ದಾರೆ ಎಂದು ಮಗುವಿನ ಚಿಕ್ಕಪ್ಪ ಆಕ್ರೋಶ್ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆ ಪ್ರದೇಶದ ಕ್ಯಾಮರಾವನ್ನು ಕೂಡ ಅವರು ತೆಗೆದಿದ್ದಾರೆ ಎಂದು ಅವರು ಹೇಳಿದ್ದಾರೆ. 

Follow Us:
Download App:
  • android
  • ios