ಈಶಾನ್ಯ ಭಾರತಕ್ಕೂ ಸಿಕ್ತು ವಂದೇ ಭಾರತ್ ರೈಲು: ದೇಶದ 18ನೇ ಸೆಮಿ ಹೈ ಸ್ಪೀಡ್ ಟ್ರೈನಿಗೆ ಪ್ರಧಾನಿ ಮೋದಿ ಚಾಲನೆ
ಅಸ್ಸಾಂನ ಗುವಾಹಟಿಯಿಂದ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಡುವೆ ಸಂಚರಿಸಲಿದ್ದು, ಉಭಯ ನಗರಗಳನ್ನು 5 ಗಂಟೆ 30 ನಿಮಿಷದಲ್ಲಿ ಕ್ರಮಿಸಲಿದೆ.
ಗುವಾಹಟಿ (ಮೇ 29, 2023): ದೇಶದಲ್ಲಿಂದು ಮತ್ತೊಂದು ವಂದೇ ಭಾರತ್ ರೈಲು ಉದ್ಘಾಟನೆಯಾಗಿದೆ. ದೇಶದ ಅತಿ ಹಿಂದುಳಿದ ಪ್ರದೇಶ ಎನ್ನಲಾದ ಈಶಾನ್ಯ ಭಾರತಕ್ಕೂ ಈಗ ಈ ರೈಲು ದೊರೆತಿದೆ. ಈಶಾನ್ಯ ಭಾರತದ ಮೊದಲ ಹಾಗೂ ದೇಶದ 18ನೇ ವಂದೇ ಭಾರತ್ ರೈಲಿಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ವರ್ಚುವಲ್ ಆಗಿ ಮೋದಿ ಈ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ.
ಈ ರೈಲು ಅಸ್ಸಾಂನ ಗುವಾಹಟಿಯಿಂದ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಡುವೆ ಸಂಚರಿಸಲಿದ್ದು, ಉಭಯ ನಗರಗಳನ್ನು 5 ಗಂಟೆ 30 ನಿಮಿಷದಲ್ಲಿ ಕ್ರಮಿಸಲಿದೆ. ಅಸ್ಸಾಂನ ಮೊದಲ ಮತ್ತು ಬಂಗಾಳದ ಮೂರನೇ ಸೆಮಿ-ಹೈ ಸ್ಪೀಡ್ ರೈಲು 411 ಕಿಮೀ ದೂರವನ್ನು ಕ್ರಮಿಸುತ್ತದೆ.
ಇದನ್ನು ಓದಿ: ಕೇರಳದ ಮೊದಲ ವಂದೇ ಭಾರತ್ ರೈಲಿಗೆ ಕಾಂಗ್ರೆಸ್ ಸಂಸದನ ಪೋಸ್ಟರ್: ನೆಟ್ಟಿಗರ ಕಿಡಿ
ಅಲ್ಲದೆ, 182 ಕಿಲೋಮೀಟರ್ ವಿದ್ಯುದ್ದೀಕರಣ ಮಾರ್ಗವನ್ನು ಸಹ ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಸೆಮಿ-ಹೈ ಸ್ಪೀಡ್ ರೈಲಿನ ಜೊತೆಗೆ, ಪ್ರಧಾನಿ ಮೋದಿ ಅವರು ಹೊಸ ಬೊಂಗೈಗಾಂವ್ - ದುದ್ನೋಯ್ - ಮೆಂಡಿಪಥರ್ ಮತ್ತು ಗುವಾಹಟಿ - ಚಾಪರ್‌ಮುಖ್ ವಿದ್ಯುದ್ದೀಕರಿಸಿದ ವಿಭಾಗಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಹಾಗೆ, ಅಸ್ಸಾಂನ ಲುಂಬ್ಡಿಂಗ್‌ನಲ್ಲಿನ ನೂತನ ಡೆಮು/ಮೆಮು (ರೈಲುಗಳ ಕಾರ್ಯಾಗಾರ) ಶೆಡ್ ಅನ್ನು ಸಹ ವಿಡಿಯೋ ಕಾನ್ಫರೆನ್ಸ್ ಮೂಲಕ ಮಧ್ಯಾಹ್ನ 12 ಗಂಟೆಗೆ ಉದ್ಘಾಟಿಸಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿ ಕಾರ್ಯಾಲಯವೂ ಮಾಹಿತಿ ನೀಡಿದೆ.
ಗುವಾಹಟಿ - ನ್ಯೂ ಜಲ್ಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷತೆ
ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಈ ನೂತನ ಕಾರ್ಯನಿರ್ವಹಿಸಲಿದೆ. ಹಾಗೆ, ಅಸ್ಸಾಂನ ಮೊದಲ ಮತ್ತು ಬಂಗಾಳದ ಮೂರನೇ ಸೆಮಿ-ಹೈ ಸ್ಪೀಡ್ ರೈಲು 411 ಕಿಮೀ ದೂರವನ್ನು ಕೇವಲ 5 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತದೆ. ಈ ಮದ್ಯೆ, ಕೇಂದ್ರ ಸರ್ಕಾರವು 'ಆಕ್ಟ್ ಈಸ್ಟ್' ನೀತಿಯ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲು ಉದ್ಘಾಟನೆಗೂ ಮುನ್ನ ಹೇಳಿದ್ದರು.
ಇದನ್ನೂ ಓದಿ: From the India Gate: ಕೇರಳದಲ್ಲಿ 'ದೋಸೆ' ರಾಜಕೀಯ; ಬಿಜೆಪಿ ಸಂಸದರಿಗೆ ಡಬಲ್ ಡ್ಯೂಟಿಯದ್ದೇ ದೊಡ್ಡ ಚಿಂತೆ!
"ಪ್ರಧಾನಿ ಮೋದಿಯವರು ಇಂದು ಈಶಾನ್ಯದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಲಿದ್ದಾರೆ ಎಂಬುದು ಸಂತೋಷದ ವಿಷಯ. ಮೊದಲು ಅದು 'ಪೂರ್ವಕ್ಕೆ ನೋಡಿ' ಎಂದಿತ್ತು. ಆದರೆ ಈಗ ಅದು 'ಆಕ್ಟ್ ಈಸ್ಟ್' ಆಗಿದೆ," ಎಂದು ಅವರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದರು.
ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎಕ್ಸಿಕ್ಯೂಟಿವ್ ಚೇರ್ ಕಾರ್ ತಲಾ 52 ಆಸನ ಸಾಮರ್ಥ್ಯವನ್ನು ಹೊಂದಿದ್ದರೆ, ಸಾಮಾನ್ಯ ಚೇರ್ ಕಾರುಗಳು ತಲಾ 78 ಆಸನ ಸಾಮರ್ಥ್ಯವನ್ನು ಹೊಂದಿವೆ ಮತ್ತು ಡ್ರೈವಿಂಗ್ ಟ್ರೈಲರ್ ಕೋಚ್‌ಗಳು ತಲಾ 44 ಆಸನ ಸಾಮರ್ಥ್ಯವನ್ನು ಹೊಂದಿವೆ. ಇನ್ನು, ವಂದೇ ಭಾರತ್ ರೈಲಿನೊಂದಿಗೆ, ಪ್ರಯಾಣದ ಸಮಯದಲ್ಲಿ ಸೌಕರ್ಯ ಮತ್ತು ವೇಗವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಈಶಾನ್ಯದ ಜನರಿಗೆ ಪ್ರಯಾಣದ ಭಾವನೆಗಳಂತಹ ಹೊಸ ಯುಗದ ರೈಲು ಪ್ರಯಾಣವನ್ನು ಇದು ಕಂಡುಕೊಂಡಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: From the India Gate: ವಂದೇ ಭಾರತ್ ರೈಲು ಸ್ವಾಗತಿಸಲು ಸಂದಿಗ್ಧತೆ; ಪಂಕ್ಚರ್ ಆದ ತೆಲಂಗಾಣ ಸಿಎಂ ಹಾಗೂ ಪುತ್ರ!
ಇನ್ನೊಂದೆಡೆ, ಕಳೆದ ವಾರ, ಈಶಾನ್ಯ ರೈಲ್ವೆಯು, "ವೇಗ ಮತ್ತು ಇತ್ತೀಚಿನ ಸೌಕರ್ಯಗಳೊಂದಿಗೆ ರೈಲು ಪ್ರಯಾಣದ ಸಂಕೇತವಾದ ವಂದೇ ಭಾರತ್ ಎಕ್ಸ್‌ಪ್ರೆಸ್ ಇಂದು ನ್ಯೂ ಜಲ್ಪೈಗುರಿಯಿಂದ ನಡೆಸಿದ ಪ್ರಾಯೋಗಿಕ ಚಾಲನೆಯಲ್ಲಿ ಮೊದಲ ಬಾರಿಗೆ ಈಶಾನ್ಯದ ಗೇಟ್‌ವೇಯಾದ ಗುವಾಹಟಿ ರೈಲು ನಿಲ್ದಾಣವನ್ನು ತಲುಪಿದೆ’’ ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: ಇದನ್ನೂ ಓದಿ: ತಿರುಪತಿಗೆ ಇನ್ನು ವಂದೇ ಭಾರತ್ ರೈಲು: ಇಂದು ಪ್ರಧಾನಿ ಮೋದಿ ಚಾಲನೆ