ಸಂಸತ್ ಭವನ ಉದ್ಘಾಟನೆ ವೇಳೆ ಶೃಂಗೇರಿ ಪುರೋಹಿತರಿಂದ ಪೂಜಾ ಕೈಂಕರ್ಯ: ರಾಜದಂಡ ಪ್ರತಿಷ್ಠಾಪನೆಯ ಹೈಲೈಟ್ಸ್..
ಭಾನುವಾರ ಉದ್ಘಾಟನೆಯಾದ ನೂತನ ಸಂಸತ್ ಭವನದ ಪೂಜಾ ವಿಧಿಗಳನ್ನು ಶೃಂಗೇರಿ ಶಾರದಾ ಮಠದ ಹಲವು ಪುರೋಹಿತರು ನಡೆಸಿಕೊಟ್ಟಿದ್ದಾರೆ. ಶನಿವಾರ ಸಂಸತ್ ಭವನದಲ್ಲಿ ವಾಸ್ತು ಹೋಮ ಪೂಜೆ ನೆರವೇರಿಸಲಾಗಿದ್ದು ಭಾನುವಾರ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮ ನಡೆದಿದೆ.
ನೂತನ ಸಂಸತ್ತಿನ ಉದ್ಘಾಟನೆ ಪೂರ್ಣಾಹುತಿ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಶೃಂಗೇರಿ ಶಾರದಾ ಪೀಠದ ಶ್ರೀ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರ ಪರವಾಗಿ ಹಸುವಿನ ವಿಗ್ರಹದ ಪ್ರಸಾದವನ್ನು ದೇಗುಲದ ಮುಕ್ತೇಸರರಾದ ಗೌರಿ ಶಂಕರ ಅವರು ನೀಡಿದರು.
ಭಾನುವಾರ ಉದ್ಘಾಟನೆಯಾದ ನೂತನ ಸಂಸತ್ ಭವನದ ಪೂಜಾ ವಿಧಿಗಳನ್ನು ಶೃಂಗೇರಿ ಶಾರದಾ ಮಠದ ಹಲವು ಪುರೋಹಿತರು ನಡೆಸಿಕೊಟ್ಟಿದ್ದಾರೆ. ಶನಿವಾರ ಸಂಸತ್ ಭವನದಲ್ಲಿ ವಾಸ್ತು ಹೋಮ ಪೂಜೆ ನೆರವೇರಿಸಲಾಗಿದ್ದು ಭಾನುವಾರ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಸೀತಾರಾಮ ಶರ್ಮಾ, ಶ್ರೀರಾಮ ಶರ್ಮ, ಲಕ್ಷ್ಮೇಶ ತಂತ್ರಿ, ನಾಗರಾಜ ಅಡಿಗ, ಋುಷ್ಯಶೃಂಗ ಭಟ್ಟರು ಪಾಲ್ಗೊಂಡಿದ್ರು.
ತಮಿಳುನಾಡಿನ ಚೆನ್ನೈನಲ್ಲಿರುವ ವುಮ್ಮಿಡಿ ಬಂಗಾರು ಚೆಟ್ಟಿ ಕುಟುಂಬದವರು ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಮುನ್ನ ಸೆಂಗೋಲ್ ತಯಾರಿಸಿ ಕೊಟ್ಟಿದ್ದರು. ಆ ಕುಟುಂಬದವರಿಗೆ ಹೊಸ ಸಂಸತ್ ಭವನದ ಉದ್ಘಾಟನೆಗೆ ಈಗ ಆಹ್ವಾನ ಕಳುಹಿಸಲಾಗಿದ್ದು, ಸಮಾರಂಭದಲ್ಲಿ ಭಾಗವಹಿಸಲು ತುದಿಗಾಲಿನಲ್ಲಿ ನಿಂತಿರುವುದಾಗಿ ಕುಟುಂಬ ಹೇಳಿಕೊಂಡಿತ್ತು.
ಬ್ರಿಟಿಷರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರವಾದುದರ ಸಂಕೇತವೇ ‘ಸೆಂಗೋಲ್’ (ರಾಜದಂಡ). ಅದಕ್ಕೆ ಸಲ್ಲಬೇಕಿದ್ದ ಗೌರವವನ್ನು ಇದೀಗ ನೀಡಲಾಗಿದೆ.
ಚೋಳರ ಆಳ್ವಿಕೆಯಲ್ಲಿ ಸೆಂಗೋಲ್ ಅನ್ನು ಕರ್ತವ್ಯ ಪಥ, ಸೇವಾ ಪಥ ಹಾಗೂ ರಾಷ್ಟ್ರಪಥದ ಸಂಕೇತವಾಗಿ ಪರಿಗಣಿಸಲಾಗಿತ್ತು ಎಂದು ಮೋದಿ ಹೇಳಿದರು.
1947ರಲ್ಲಿ ಕೇಂದ್ರ ಸರ್ಕಾರದ ಮನವಿಯ ಮೇಲೆ ತಮಿಳುನಾಡಿನ ಶೈವ ಮಠವೊಂದರ ಸೂಚನೆಯಂತೆ ಚೆನ್ನೈನ ವುಮ್ಮಿಡಿ ಬಂಗಾರು ಚೆಟ್ಟಿ ಕುಟುಂಬ ರಾಜದಂಡವನ್ನು ತಯಾರಿಸಿ ಕೊಟ್ಟಿತ್ತು. ನಂತರ ಅದು ಏನಾಯಿತು ಎಂಬುದು ಆ ಕುಟುಂಬಕ್ಕೆ ತಿಳಿದಿರಲಿಲ್ಲ.
ಸಂಪ್ರದಾಯಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದ ಸಿ.ರಾಜಗೋಪಾಲಾಚಾರಿ ಅವರು ಸೆಂಗೋಲ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಂಸತ್ ಭವನವನ್ನು ಪ್ರವೇಶಿಸಿ ನಮ್ಮ ಕುಟುಂಬದ ಐತಿಹಾಸಿಕ ತುಣುಕೊಂದು ಅಲ್ಲಿ ಪ್ರತಿಷ್ಠಾಪನೆಯಾಗುತ್ತಿದೆ.
2021ರಲ್ಲಿ ಅಂಕಣಕಾರ ಎಸ್.ಗುರುಮೂರ್ತಿ ಅವರು ‘ತುಘಲಕ್’ ಪತ್ರಿಕೆಯಲ್ಲಿ ಬರೆದ ಲೇಖನವೊಂದರಿಂದ ‘ಸೆಂಗೋಲ್’ ಹುಡುಕಾಟ ಆರಂಭವಾಗುತ್ತದೆ. ಬಳಿಕ ಸತತ 2 ವರ್ಷಗಳ ಕಾಲ ಕೇಂದ್ರ ಸರ್ಕಾರ ರಾಜದಂಡದ ಬೆನ್ನುಬಿದ್ದು, 1947ರ ಆಗಸ್ಟ್ 14ರ ರಾತ್ರಿ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಹಸ್ತಾಂತರದ ಚಿಹ್ನೆಯಾಗಿ ‘ಸೆಂಗೋಲ್ ಹಸ್ತಾಂತರ ಸಮಾರಂಭ’ ನಡೆದಿತ್ತು ಎಂಬುದನ್ನು ಖಚಿತಪಡಿಸಿಕೊಂಡು, ಕೊನೆಗೆ ಅದನ್ನು ಸಂಸತ್ ಭವನದಲ್ಲಿ ಪ್ರತಿಷ್ಠಾಪನೆ ಮಾಡುವ ನಿರ್ಧಾರಕ್ಕೆ ಬಂದಿತು ಎಂದು ತಿಳಿದುಬಂದಿದೆ.
‘ಸೆಂಗೋಲ್’ನ ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಪತ್ರಿಕಾ ಲೇಖನಗಳು, ಪ್ರಸಿದ್ಧ ಲೇಖಕರು ಬರೆದ ಪುಸ್ತಕಗಳು ಹಾಗೂ ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಗಳನ್ನು ಸೋಸಿ, ಕೊನೆಗೆ ನೆಹರೂ ಅವರ ಮನೆಯಲ್ಲೇ ಅವರಿಗೆ ‘ಸೆಂಗೋಲ್’ ಹಸ್ತಾಂತರ ಮಾಡಲಾಗಿತ್ತು ಎಂಬುದನ್ನು ಪತ್ತೆಹಚ್ಚಿತು.
ಈ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ನೆಹರೂ ಸ್ಮಾರಕ ಮ್ಯೂಸಿಯಂನ ಚೇರ್ಮನ್ ನೃಪೇಂದ್ರ ಮಿಶ್ರಾ ಅವರಿಗೆ ಸೆಂಗೋಲ್ ಹಸ್ತಾಂತರ ಸಮಾರಂಭದ ಫೋಟೋ ಅಥವಾ ಮಾಹಿತಿಯೇನಾದರೂ ನೆಹರು ಅವರ ಖಾಸಗಿ ದಾಖಲೆಗಳಲ್ಲಿ ಲಭ್ಯವಿದೆಯೇ ಎಂದು ಹುಡುಕುವಂತೆ ಮನವಿ ಮಾಡಲಾಯಿತು. ಅವರು ಹುಡುಕಿದಾಗ 1947ರ ಆಗಸ್ಟ್ 25ರಂದು ‘ಟೈಮ್’ ನಿಯತಕಾಲಿಕೆ ತನ್ನ ‘ವಿದೇಶಿ ಸುದ್ದಿ’ ವಿಭಾಗದಲ್ಲಿ ಸೆಂಗೋಲ್ ಸಮಾರಂಭದ ಕುರಿತು ವಿಸ್ತಾರವಾಗಿ ಪ್ರಕಟಿಸಿದ್ದ ವರದಿ ಲಭಿಸಿತು.