Asianet Suvarna News Asianet Suvarna News

ಟ್ರಕ್, ಡಿಸೇಲ್‌ ಟ್ಯಾಂಕರ್ ಮಧ್ಯೆ ಡಿಕ್ಕಿಯಾಗಿ ಬೆಂಕಿ : ಒಂಭತ್ತು ಜನ ಸಜೀವ ದಹನ

  • ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಭೀಕರ ಅನಾಹುತ
  • ಮರದ ದಿಮ್ಮಿ ಸಾಗಿಸುತ್ತಿದ್ದ ಟ್ರಕ್ ಹಾಗೂ ಟ್ಯಾಂಕರ್ ಮಧ್ಯೆ ಡಿಕ್ಕಿ
  • ಅಪಘಾತದ ಬಳಿಕ ಬೆಂಕಿ, ಒಂಭತ್ತು ಜನ ಸಜೀವ ದಹನ
9 charred dead in fire due to tanker truck collision in Maharashtras Chandrapur akb
Author
Bangalore, First Published May 20, 2022, 2:55 PM IST

ಚಂದ್ರಾಪುರ (ಮಹಾರಾಷ್ಟ್ರ): ಮಹಾರಾಷ್ಟ್ರದ(Maharashtra) ಚಂದ್ರಾಪುರದಲ್ಲಿ (Chandrapura) ಭೀಕರ ಅನಾಹುತವೊಂದು ನಡೆದಿದೆ.  ಡೀಸೆಲ್ ತುಂಬಿದ ಟ್ಯಾಂಕರ್ ಮತ್ತು ಮರವನ್ನು ಸಾಗಿಸುತ್ತಿದ್ದ ಟ್ರಕ್ ನಡುವೆ ಡಿಕ್ಕಿಯಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ 9 ಜನರು ಸಜೀವ ದಹನಗೊಂಡಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ನಗರದ ಹೊರವಲಯದಲ್ಲಿ ಈ ದುರಂತ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ. ಗುರುವಾರ ರಾತ್ರಿ 10.30ರ ಸುಮಾರಿಗೆ ಚಂದ್ರಾಪುರ-ಮುಲ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು.

ಚಂದ್ರಾಪುರ ನಗರದ ಸಮೀಪದ ಅಜಯಪುರದಲ್ಲಿ(Ajayapura) ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಡೀಸೆಲ್ ತುಂಬಿದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಈ ಅಪಘಾತದ ನಂತರ, ಬೆಂಕಿ ಕಾಣಿಸಿಕೊಂಡಿದೆ. ಇದರಲ್ಲಿ ಒಂಬತ್ತು ಜನರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಚಂದ್ರಾಪುರದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಸುಧೀರ್ ನಂದನವರ್ (Sudhir Nandanavar) ಹೇಳಿದರು. ಅಪಘಾತ ಸಂಭವಿಸಿದ ಸುಮಾರು ಒಂದು ಗಂಟೆಯ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಅಜಯಪುರಕ್ಕೆ ತಲುಪಿದ್ದು, ಕೆಲವು ಗಂಟೆಗಳ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ. ದುರಂತದಲ್ಲಿ ಮೃತರಾದವರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚಂದ್ರಾಪುರ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ನಂದನವರ್ ಹೇಳಿದರು. 

 

ಕಳೆದ ನವಂಬರ್‌ನಲ್ಲಿ ರಾಜಸ್ಥಾನದ ಬಾರ್ಮರ್ (Rajasthan's Barmer) ಜಿಲ್ಲೆಯಲ್ಲಿ ಇಂತಹದ್ದೇ ಅನಾಹುತವೊಂದು ನಡೆದಿತ್ತು. ಜೋಧ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ (Jodhpur National Highway) ಬಸ್ ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತದಲ್ಲಿ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರು. ಅಪಘಾತದ (Accident) ನಂತರ ಬಸ್‌ಗೆ ಬೆಂಕಿ ತಗುಲಿ ಅನೇಕ ಯುವಕರು ಸಾವನ್ನಪ್ಪಿದ್ದರು. ಬಾರ್ಮರ್ (Barrmer) ಜಿಲ್ಲೆಯ ಜೋಧ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭಂಡಿಯಾವಾಸ್ ಗ್ರಾಮದಲ್ಲಿ ಈ ದುರಂತ ಸಂಭವಿಸಿತ್ತು. ವೇಗವಾಗಿ ಬಂದ ಬಸ್ ಮತ್ತು ಟ್ಯಾಂಕರ್ ಮಧ್ಯೆ  ಡಿಕ್ಕಿ ಸಂಭವಿಸಿತ್ತು. ಡಿಕ್ಕಿ ಹೊಡೆದ ಮರುಕ್ಷಣವೇ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಎಷ್ಟು ಪ್ರಬಲವಾಗಿತೆಂದರೆ ಅದರಲ್ಲಿ 12 ಜನರು ಸಜೀವ ದಹನವಾಗಿದ್ದರು.

Mandya Accident: ಪಿಲ್ಲರ್‌ಗೆ ಡಿಕ್ಕಿ ಹೊಡೆದ ಟಿಪ್ಪರ್‌ಗೆ ಬೆಂಕಿ: ಡ್ರೈವರ್‌ ಸಜೀವ ದಹನ

ಅಪಘಾತ ಸಂಭವಿಸಿದಾಗ ತಾನು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ ಎಂದು ಅಪಘಾತ ಕಂಡ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಬೆಳಗ್ಗೆ 10:30ರ ಸುಮಾರಿಗೆ ಬಸ್ ಬಲೋತ್ರಾದಿಂದ ಜೋಧ್‌ಪುರಕ್ಕೆ ಹೋಗುತ್ತಿತ್ತು. ಇದರಲ್ಲಿ ಸುಮಾರು 25 ಪ್ರಯಾಣಿಕರು ಕುಳಿತಿದ್ದರು. ಬಸ್ಸು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿತ್ತು. ಆದರೆ ಮುಂದೆ ಇದ್ದ ಟ್ಯಾಂಕರ್ ರಾಂಗ್ ಸೈಡ್ ನಿಂದ ಬರುತ್ತಿದ್ದು ಬಸ್ ಗೆ ಡಿಕ್ಕಿ ಹೊಡೆದಿದೆ. ಎರಡೂ ವಾಹನಗಳು ವೇಗವಾಗಿ ಚಲಿಸುತ್ತಿದ್ದವು. ಡಿಕ್ಕಿಯ ನಂತರ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಆಗ ಟ್ರಾಲಿ ಕೂಡ ಬೆಂಕಿಗೆ ಆಹುತಿಯಾಯಿತು. ತರಾತುರಿಯಲ್ಲಿ 10 ರಿಂದ 12 ಪ್ರಯಾಣಿಕರನ್ನು ಹೊರಗೆಳೆದು ರಕ್ಷಿಸಲಾಯಿತು. ಆದರೂ ಬೆಂಕಿ ಹೊತ್ತಿ ಉರಿಯುತ್ತಿದ್ದರಿಂದ ಎಲ್ಲರಿಗೂ ಹೊರಗೆ ಬರಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದರು.

Bengaluru: ಚಲಿಸುತ್ತಿದ್ದ ಕಾರಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ: ವ್ಯಕ್ತಿ ಸಜೀವ ದಹನ!

Follow Us:
Download App:
  • android
  • ios