ನವದೆಹಲಿ(ಮೇ.06): ದೇಶಾದ್ಯಂತ ಲಾಕ್‌ಡೌನ್‌ ಸೇರಿದಂತೆ ಕೊರೋನಾ ನಿಗ್ರಹಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಕ್ರಮಗಳ ಬಗ್ಗೆ ದೇಶದ ನಗರ ಪ್ರದೇಶಗಳ ಶೇ.87ರಷ್ಟುಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂಬ ಸಂಗತಿ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.

ಕೊರೋನಾ ತಡೆಗಾಗಿ ಸರ್ಕಾರ ಔಚಿತ್ಯದ ಕ್ರಮಗಳನ್ನು ಜಾರಿ ಮಾಡಿದೆಯೇ ಎಂಬ ಕುರಿತಾಗಿ ಏ.23ರಿಂದ 26ರವರೆಗೂ ಇಪ್ಸೊಸ್‌ ಎಂಬ ಬಹುರಾಷ್ಟ್ರೀಯ ಮಾರುಕಟ್ಟೆಸಂಶೋಧನಾ ಸಂಸ್ಥೆ ಸಮೀಕ್ಷೆ ನಡೆಸಿತ್ತು. ಇದರಲ್ಲಿ, ನಗರ ಪ್ರದೇಶಗಳ ಶೇ.87ರಷ್ಟಕ್ಕೂ ಹೆಚ್ಚು ಜನ ಮೋದಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತವೀಗ ಇಡೀ ವಿಶ್ವದ ಔಷಧಾಲಯ: ಪ್ರಧಾನಿ ಮೋದಿ!

ಕೊರೋನಾ ನಿಗ್ರಹಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಲಾಕ್‌ಡೌನ್‌ ಸೇರಿದಂತೆ ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಹಲವು ದಿಟ್ಟನಿರ್ಧಾರಗಳನ್ನು ಕೈಗೊಂಡಿತ್ತು. ಅಲ್ಲದೆ, ಇದೀಗ ಸೋಂಕು ಮಟ್ಟಹಾಕುವ ಜೊತೆಗೆ ಆರ್ಥಿಕ ವೃದ್ಧಿಗಾಗಿ ಕಂಟೇನ್ಮೆಂಟ್‌ ಸೇರಿದಂತೆ ಕೆಂಪು ವಲಯಗಳನ್ನು ಹೊರತುಪಡಿಸಿ, ಕೊರೋನಾ ಪ್ರಕರಣಗಳು ದಾಖಲಾಗದಿರುವ ಕಡೆಗಳಲ್ಲಿ ಆರ್ಥಿಕ ಚಟುವಟಿಕೆಗೆ ಗ್ರೀನ್‌ ಸಿಗ್ನಲ್‌ ನೀಡಿದೆ ಎಂದು ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಜನರು ಹೇಳಿದ್ದಾರೆ.