ನವದೆಹಲಿ (ಮೇ.28): ಕೊರೋನಾ ಸೋಂಕಿತರಿಗೆ ಇತ್ತೀಚೆಗಷ್ಟೇ ಭಾರತದಲ್ಲಿ ಬಿಡುಗಡೆಯಾದ ಆ್ಯಂಟಿಬಾಡಿ ಕಾಕ್‌ಟೇಲ್‌ ಔಷಧ ಭಾರೀ ಪರಿಣಾಮಕಾರಿಯೆಂದು ಸಾಬೀತಾಗಿದೆ. 

ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ದಾಖಲಾಗಿದ್ದ 84 ವರ್ಷದ ಮೊಹಬ್ಬತ್‌ ಸಿಂಗ್‌ ಎಂಬ ಸೋಂಕಿತರೊಬ್ಬರಿಗೆ ಅಮೆರಿಕದ ರೋಚಿಸ್‌ ಕಂಪನಿ ಅಭಿವೃದ್ಧಿಪಡಿಸಿರುವ ಈ ಔಷಧವನ್ನು ಮಂಗಳವಾರ ನೀಡಲಾಗಿತ್ತು. ಅದಾದ 2 ದಿನದಲ್ಲಿ ಅವರು ಚೇತರಿಸಿಕೊಂಡಿದ್ದು, ಅವರನ್ನು ಬುಧವಾರವೇ ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಈ ಆ್ಯಂಟಿಬಾಡಿ ಕಾಕ್‌ಟೇಲ್‌ ಔಷಧದ ಪ್ರತಿ ಪ್ಯಾಕ್‌ 1200 ಎಂಜಿಯದ್ದಾಗಿರಲಿದೆ. ಇದರಲ್ಲಿ 600 ಎಂಜಿ ಕ್ಯಾಸಿರಿವಿಮ್ಯಾಬ್‌ ಮತ್ತು 600 ಎಂಜಿಯಷ್ಟುಇಮ್‌ಡೆವಿಮ್ಯಾಬ್‌ ಅಂಶಗಳು ಇರುತ್ತದೆ. ಒಂದು ಡೋಸ್‌ನ ಈ ಔಷಧಕ್ಕೆ 59750 ರು. ದರ ನಿಗದಿ ಮಾಡಲಾಗಿದೆ.

ಡೊನಾಲ್ಡ್‌ ಟ್ರಂಪ್‌ಗೆ ನೀಡಿದ್ದ ಕೊರೋನಾ ಔಷಧ ಇದೀಗ ಭಾರತದಲ್ಲಿ: ದರ 59,750 ರು.! ..

ಯಾರಿಗೆ ಲಾಭ?:  ಸೋಂಕಿನ ಅತ್ಯಂತ ಅಪಾಯ ಇರುವ ವ್ಯಕ್ತಿಗಳಿಗೆ, ಪರಿಸ್ಥಿತಿ ಗಂಭೀರವಾಗುವ ಮೊದಲೇ ನೀಡಿದರೆ, ಅವರು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವನ್ನಪ್ಪುವ ಪ್ರಮಾಣ ಶೇ.70ರಷ್ಟುಇಳಿಯುತ್ತದೆ. ಅವರ ಚೇತರಿಸಿಕೊಳ್ಳಲು ಬೇಕಾಗುವ ಸಮಯ 4 ದಿನಗಳಷ್ಟುಕಡಿಮೆಯಾಗುತ್ತದೆ. 12 ವರ್ಷ ಮೇಲ್ಪಟ್ಟವರಿಗೆ ಇದನ್ನು ನೀಡಬಹುದು ಇತ್ತೀಚೆಗೆ ಕಂಪನಿ ಹೇಳಿಕೊಂಡಿತ್ತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona