2ನೇ ಅಲೆ ತಗ್ಗಿದ ಬೆನ್ನಲ್ಲೆ ಹಲವು ರಾಜ್ಯಗಳಲ್ಲಿ ಅನ್‌ಲಾಕ್ ಆರಂಭ ಅನ್‌ಲಾಕ್ ಬಳಿಕ ದೇಶದ 66 ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಳ ಕರ್ನಾಟಕದ 10 ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 10ಕ್ಕಿಂತ ಹೆಚ್ಚು
ನವದೆಹಲಿ(ಜು.11): ಕೊರೋನಾ 2ನೇ ಅಲೆ ತಗ್ಗಿದ ಕಾರಣ ಇದೀಗ ದೇಶದ ಬಹುತೇಕ ರಾಜ್ಯಗಳಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ ಅನ್‌ಲಾಕ್ ಆರಂಭಗೊಂಡ ಬೆನ್ನಲ್ಲೇ ಪ್ರವಾಸಿ ತಾಣ ಭರ್ತಿಯಾಗುತ್ತಿದೆ. ಸಭೆ , ಸಮಾರಂಭ ಹೆಚ್ಚಾಗುತ್ತಿದೆ. ಜನರ ಒಡಾಟ ಹೆಚ್ಚಾಗಿದೆ. ಆದರೆ ಕೊರೋನಾ ಮಾರ್ಗಸೂಚಿ ಮಾತ್ರ ಪಾಲನೆಯಾಗುತ್ತಿಲ್ಲ. ಪರಿಣಾಮ ಇದೀಗ ದೇಶದ 66 ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ.
ಪ್ರವಾಸಕ್ಕೆಂದು ಹೋದ 2000 ವಾಹನ ಮರಳಿ ಕಳಿಸಿದ ಪೊಲೀಸರು..!
ದೇಶದ 66 ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 10ಕ್ಕಿಂತ ಹೆಚ್ಚಾಗಿದೆ. ಇದರೊಂದಿಗೆ ಡೆಲ್ಟಾ ಪ್ಲಸ್ ವೇರಿಯೆಂಟ್ ತ್ವರಿತವಾಗಿ ಹರಡುತ್ತಿದೆ. ಹೀಗಾಗಿ ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳಲ್ಲಿ ಲಾಕ್‌ಡೌನ್ ವಿಸ್ತರಣೆಯಾಗಿದೆ. ಇನ್ನು ಕೇರಳ ಹಾಗೂ ಮಹಾರಾಷ್ಟ್ರದಲ್ಲಿ 2ನೇ ಅಲೆ ಇನ್ನೂ ತಗ್ಗಿಲ್ಲ.
ಕೊರೋನಾ ಇನ್ನೂ ಹೋಗಿಲ್ಲ: ಪ್ರವಾಸಿಗರಿಗೆ ಕೇಂದ್ರ ಎಚ್ಚರಿಕೆ
66 ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 10ಕ್ಕಿಂತ ಹೆಚ್ಚಿದ್ದರೆ, ದೇಶದ 90ಕ್ಕೂ ಅಧಿಕ ಜಿಲ್ಲೆಗಳಲ್ಲಿ ಹೊಸ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ಹೀಗೆ ಹೊಸ ಕೊರೋನಾ ಹೆಚ್ಚಾಗುತ್ತಿರುವ ಜಿಲ್ಲೆಗಳಲ್ಲಿ ಕರ್ನಾಟಕದ 10 ಜಿಲ್ಲೆಗಳೂ ಸೇರಿವೆ.
ಹೊಸ ಪ್ರಕರಣ ಹೆಚ್ಚಾಗುತ್ತಿರುವ ರಾಜ್ಯ ಹಾಗೂ ಜಿಲ್ಲೆ
ಮಹಾರಾಷ್ಟ್ರ: 15 ಜಿಲ್ಲೆ
ಕೇರಳ: 14 ಜಿಲ್ಲೆ
ತಮಿಳುನಾಡು: 12 ಜಿಲ್ಲೆ
ಒಡಿಶಾ: 10 ಜಿಲ್ಲೆ
ಆಂಧ್ರಪ್ರದೇಶ: 10 ಜಿಲ್ಲೆ
ಕರ್ನಾಟಕ: 10 ಜಿಲ್ಲೆ
ಅಸ್ಸಾಂ: 6 ಜಿಲ್ಲೆ
ಪಶ್ಚಿಮ ಬಂಗಾಳ: 4 ಜಿಲ್ಲೆ
ಮೇಘಾಲಯ :2 ಜಿಲ್ಲೆ
ಮಣಿಪುರ: 2 ಜಿಲ್ಲೆ
ತ್ರಿಪುರ: 1 ಜಿಲ್ಲೆ
ಗೋವಾ:1 ಜಿಲ್ಲೆ
ಮಿಜೋರಾಂ:1 ಜಿಲ್ಲೆ
ಪುದುಚೇರಿ:1 ಜಿಲ್ಲೆ
ಅರುಣಾಚಲ ಪ್ರದೇಶ:1 ಜಿಲ್ಲೆ
