ಥಾಣೆಯಲ್ಲಿ ತಂದೆಯ ನಿರ್ಲಕ್ಷ್ಯದ ಚಾಲನೆಯಿಂದಾಗಿ ಅಪಘಾತ ಸಂಭವಿಸಿ ತಾಯಿ ಮೃತಪಟ್ಟಳು. ಎಂಟು ವರ್ಷದ ಮಗಳು ತಂದೆಯ ವಿರುದ್ಧ ಕೇಸ್ ದಾಖಲಿಸಿ, ನ್ಯಾಯಮಂಡಳಿಯಿಂದ 32.41 ಲಕ್ಷ ರೂ. ಪರಿಹಾರ ಪಡೆದಳು. ತಂದೆಯ ತಪ್ಪಿನಿಂದಾಗಿ ಅಪಘಾತವಾಗಿದೆ ಎಂದು ನ್ಯಾಯಮಂಡಳಿ ತೀರ್ಪು ನೀಡಿತು. ವಿಮಾ ಕಂಪನಿಯ ವಾದಗಳನ್ನು ತಿರಸ್ಕರಿಸಿ, ಮೃತಳ ಆದಾಯ, ಸೇವಾವಧಿ ಪರಿಗಣಿಸಿ ಪರಿಹಾರ ನಿಗದಿಪಡಿಸಲಾಯಿತು.
ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡ 8 ವರ್ಷದ ಬಾಲಕಿಯೊಬ್ಬಳು, ಅಪ್ಪನ ವಿರುದ್ಧವೇ ಕೇಸ್ ದಾಖಲು ಮಾಡಿ 32.41 ಲಕ್ಷ ರೂಪಾಯಿ ಪರಿಹಾರ ಪಡೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಅಪ್ಪ-ಅಮ್ಮ ಹೋಗುತ್ತಿದ್ದ ಕಾರು ಅಪಘಾತಕ್ಕೀಡಾಗಿ ಮಹಿಳೆ ಮೃತಪಟ್ಟಿದ್ದಳು. ಈ ಅಪಘಾತಕ್ಕೆ ತನ್ನ ಅಪ್ಪನೇ ಕಾರಣ ಎಂದು ಬಾಲಕಿ ಮೋಟಾರ್ ಅಪಘಾತ ಹಕ್ಕುಗಳ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದಳು. ಈಕೆ ಅಪ್ರಾಪ್ತೆಯಾಗಿರುವ ಕಾರಣ, ಈಕೆಯ ಪರವಾಗಿ ಅಜ್ಜಿ, ದೂರು ದಾಖಲು ಮಾಡಿದ್ದರು. ಡಿಸೆಂಬರ್ 2021 ರಲ್ಲಿ ಈ ಘಟನೆ ನಡೆದಿತ್ತು. ತನ್ನ ತಾಯಿಯನ್ನು ಬಲಿ ತೆಗೆದುಕೊಂಡ ಕಾರು ಅಪಘಾತಕ್ಕೆ ಕಾರಣನಾದ ತನ್ನ ತಂದೆಯೇ ಎಂದು ಬಾಲಕಿ ದೂರಿದ್ದಳು.
ವಾದ, ಪ್ರತಿವಾದ ಆಲಿಸಿದ ಕೋರ್ಟ್ ಅಪ್ಪ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದು, 32.41 ಲಕ್ಷ ಪರಿಹಾರಕ್ಕೆ ಆದೇಶಿಸಿದೆ. ಕುಟುಂಬವು ನಾಂದೇಡ್‌ನಿಂದ ಉಮರ್ಖೇಡ್‌ಗೆ ಪ್ರಯಾಣಿಸುತ್ತಿದ್ದಾಗ ತಂದೆ ಚಲಾಯಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, 38 ವರ್ಷದ ನರ್ಸಿಂಗ್ ಕಾಲೇಜು ಬೋಧಕ ತಾಯಿಗೆ ಮಾರಣಾಂತಿಕ ಗಾಯಗಳಾಗಿ ಸಾವನ್ನಪ್ಪಿದ್ದರು. ವಿಚಾರಣೆ ವೇಳೆ ನ್ಯಾಯಮಂಡಳಿಯು ತಂದೆಯ ನಿರ್ಲಕ್ಷ್ಯವನ್ನು ಕಂಡುಹಿಡಿದು ಅಪಘಾತಕ್ಕೆ ಅವರನ್ನು ಹೊಣೆಗಾರರನ್ನಾಗಿ ಮಾಡಿದೆ.
ಪತಿಯ ದೇಹ ತುಂ*ಡರಿಸಿ ಡ್ರಮ್ನಲ್ಲಿಟ್ಟು ಲವರ್ ಜೊತೆ ಹುಟ್ಟುಹಬ್ಬ: ವೈರಲ್ ಆಯ್ತು ವಿಡಿಯೋ!
ಮೃತ ಮಹಿಳೆಯ ಮಾಸಿಕ ಆದಾಯ, ಭವಿಷ್ಯದ ನಿರೀಕ್ಷೆಗಳು, ಅವಲಂಬನೆಯ ನಷ್ಟ ಮತ್ತು ಅಂತ್ಯಕ್ರಿಯೆಯ ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡು ಒಟ್ಟು ಪರಿಹಾರವನ್ನು ₹64.82 ಲಕ್ಷ ಎಂದು ಲೆಕ್ಕಹಾಕಲಾಗಿದೆ. ತಂದೆಯೇ ದೌರ್ಜನ್ಯ ಎಸಗಿದ ವ್ಯಕ್ತಿ (ತಪ್ಪು ಮಾಡಿದ ವ್ಯಕ್ತಿ) ಆಗಿದ್ದರಿಂದ, ನ್ಯಾಯಮಂಡಳಿಯು ಒಟ್ಟು ಮೊತ್ತದ 50% - ₹32.41 ಲಕ್ಷ - ಅಪ್ರಾಪ್ತ ಮಗಳಿಗೆ ನೀಡಿತು, ಅರ್ಜಿ ಸಲ್ಲಿಸಿದ ದಿನಾಂಕದಿಂದ ನಷ್ಟ ಸಂಭವಿಸುವವರೆಗೆ ಶೇಕಡಾ 8 ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ನೀಡುವಂತೆ ನ್ಯಾಯಮಂಡಳಿ ಸೂಚಿಸಿದೆ.
ಅಪರಿಚಿತ ವಾಹನ ಅಪಘಾತಕ್ಕೆ ಕಾರಣ ಎಂದು ಮತ್ತು ತಂದೆಗೆ ಮಾನ್ಯ ಚಾಲನಾ ಪರವಾನಗಿ ಇಲ್ಲ ಎಂದು ವಾದಿಸಿ ವಿಮಾ ಕಂಪನಿಯು ಕ್ಲೇಮ್ ಅನ್ನು ಪ್ರಶ್ನಿಸಿತು, ಆದರೆ ನ್ಯಾಯಮಂಡಳಿಯು ಈ ವಾದಗಳನ್ನು ತಿರಸ್ಕರಿಸಿತು, ಅಪಘಾತದ ಸಮಯದಲ್ಲಿ ವಿಮಾ ಪಾಲಿಸಿ ಮಾನ್ಯ ಮತ್ತು ಸಮಗ್ರವಾಗಿತ್ತು ಎಂದು ಗಮನಿಸಿತು. ಮೃತ ತಾಯಿಯು ಪಡೆಯುವ ಸಂಬಳದ ಆಧಾರದ ಮೇಲೆ ಹಾಗೂ ಅವರ ಸೇವಾ ಅವಧಿಯನ್ನೆಲ್ಲಾ ಪರಿಗಣಿಸಿ, ಮಗುವಿಗೆ ಈ ಪರಿಹಾರದ ಮೊತ್ತವನ್ನು ನ್ಯಾಯಮಂಡಳಿಯು ನಿಗದಿ ಮಾಡಿದೆ. ಅಪ್ಪನ ವಿರುದ್ಧವೇ ಕೇಸ್ ಹಾಕಿರುವ ಈ ಘಟನೆ ತುಂಬಾ ಅಪರೂಪ ಎನ್ನಬಹುದು.
ಬುರ್ಖಾ ಕೇ ಪೀಚೆ ಕ್ಯಾ ಹೈ? ಬಟ್ಟೆ ಬಿಚ್ಚಿ ಬಿಚ್ಚಿ ಸುಸ್ತಾದ ಪೊಲೀಸ್ರು- ಸೊಂಟದಲ್ಲಿತ್ತು ಗ'ಮ್ಮತ್ತು'


