Asianet Suvarna News Asianet Suvarna News

Covid Threat: ಕರ್ನಾಟಕ ಸೇರಿ ದೇಶದ 8 ರಾಜ್ಯ ಆತಂಕಕಾರಿ

*   ದೇಶದ 28 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ 10%ಕ್ಕಿಂತ ಹೆಚ್ಚು
*   43 ಜಿಲ್ಲೆಗಳಲ್ಲಿ 5-10% ಪಾಸಿಟಿವಿಟಿ ದರ: ಕೇಂದ್ರ
*   ಡೆಲ್ಟಾಗೆ ಹೋಲಿಸಿದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಕಡಿಮೆ

8 States of the Country is Apprehensive Including Karnataka Due to Coronavirus grg
Author
Bengaluru, First Published Jan 6, 2022, 4:15 AM IST

ನವದೆಹಲಿ(ಜ.06):  ಕರ್ನಾಟಕ(Karnataka) ಸೇರಿದಂತೆ 8 ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳು ಕಳವಳಕಾರಿ ರೀತಿಯಲ್ಲಿ ಏರಿಕೆಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ(Central Ministry of Health) ಬುಧವಾರ ಕಳವಳ ವ್ಯಕ್ತಪಡಿಸಿದೆ.

ಡಿ.29ರಂದು ಪಾಸಿಟಿವಿಟಿ ದರ ಶೇ.0.79ರಷ್ಟಿತ್ತು. ಆದರೆ ಜ.5ರ ವೇಳೆಗೆ ಪಾಸಿಟಿವಿಟಿ ದರ ಶೇ.5.03ಕ್ಕೆ ಏರಿಕೆಯಾಗಿದೆ. ಈ ಮಟ್ಟದಲ್ಲಿ ಸೋಂಕು ಉಲ್ಬಣವಾಗುತ್ತಿರುವುದಕ್ಕೆ ಒಮಿಕ್ರೋನ್‌(Omicron) ರೂಪಾಂತರಿಯೇ ಕಾರಣ. ಹಾಗಂತ ಜನರು ಗಾಬರಿ ಆಗಬೇಕಿಲ್ಲ. ಕೋವಿಡ್‌ ಮಾರ್ಗಸೂಚಿ ಪಾಲಿಸಬೇಕು. ಜನ ಗುಂಪುಗೂಡುವುದನ್ನು ತಡೆಗಟ್ಟಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧ್ಯಕ್ಷ (ICMR) ಡಾ.ಬಲರಾಮ್‌ ಭಾರ್ಗವ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

"

Covid 19: ಕೇಜ್ರಿವಾಲ್‌, ಸುರ್ಜೇವಾಲಾ ಸೇರಿ ಅನೇಕ ಮುಖಂಡರಿಗೆ ಕೊರೋನಾ ಸೋಂಕು

ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ಕೇರಳ, ತಮಿಳುನಾಡು, ಜಾರ್ಖಂಡ್‌ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಿದೆ. ಹಾಗಾಗಿ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಈ ನಡುವೆ, ದೇಶದ 28 ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಾಗಿದೆ. 43 ಜಿಲ್ಲೆಗಳಲ್ಲಿ ಶೇ.5ರಿಂದ 10ರಷ್ಟುಪಾಸಿಟಿವಿಟಿ ಇದೆ. ಕಳೆದ 24 ಗಂಟೆಗಳಲ್ಲಿ 534 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ಗುಣಮುಖ ಪ್ರಮಾಣವೂ ಹೆಚ್ಚಾಗಿದೆ. ಡೆಲ್ಟಾಗೆ ಹೋಲಿಸಿದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಒಮಿಕ್ರಾನ್ ವೈರಸ್ ನಿಂದ ದೇಶದಲ್ಲಿ ಮೊದಲ ಸಾವು!

ಕೋವಿಡ್-19 ನ ರೂಪಾಂತರ ವೈರಸ್ ಒಮಿಕ್ರಾನ್ ನಿಂದಾಗಿ ಭಾರತದಲ್ಲಿ (India) ಮೊಟ್ಟಮೊದಲ ಸಾವು (Death) ಸಂಭವಿಸಿದೆ. ಅತ್ಯಂತ ವೇಗವಾಗಿ ಹಬ್ಬುತ್ತಿರುವ ಒಮಿಕ್ರಾನ್ ವೈರಸ್ ನಿಂದಾಗಿ ಬುಧವಾರ ರಾಜಸ್ಥಾನದಲ್ಲಿ (Rajasthan) ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎಂದು ರಾಜಸ್ಥಾನ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರ ಕೂಡ ಇದನ್ನು ಒಮಿಕ್ರಾನ್ ವೈರಸ್ ನಿಂದ ದೇಶದಲ್ಲಿ ಸಂಭವಿಸಿದ ಮೊದಲ ಸಾವು ಎಂದು ಖಚಿತಪಡಿಸಿದೆ.

ಉದಯ್ ಪುರದ  (Udaipur) 73 ವರ್ಷದ ವ್ಯಕ್ತಿ ಲಕ್ಷ್ಮೀನಾರಾಯಣ್ ನಾಗರ್ ಒಮಿಕ್ರಾನ್ ವೈರಸ್ ನಿಂದಾಗಿ ಮೃತಪಟ್ಟವರಾಗಿದ್ದಾರೆ. ಡಿಸೆಂಬರ್ 15 ರಂದು ಕೋವಿಡ್-19 ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಕ್ಷ್ಮೀನಾರಾಯಣ್, ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಈ ವ್ಯಕ್ತಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಇತರ ಕಾಯಿಲೆಗಳಿಂದ ಬಳಲುತ್ತಿದ್ದ ಎಂದು ವರದಿಯಾಗಿದೆ. ಇವರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ (genome sequencing) ಕಳುಹಿಸಲಾಗಿತ್ತು. ಏತನ್ಮಧ್ಯೆ ಡಿಸೆಂಬರ್ 21 ರಂದು ಅವರಿಗೆ ಕೋವಿಡ್ ನೆಗೆಟಿವ್ ಕಂಡುಬಂದಿದೆ. ಡಿಸೆಂಬರ್ 25 ರಂದು ಬಂದ ಜೀನೋಮ್ ಸೀಕ್ವೆನ್ಸಿಂಗ್‌ ಫಲಿತಾಂಶದಲ್ಲಿ ವ್ಯಕ್ತಿಯಲ್ಲಿ ಒಮಿಕ್ರಾನ್ ವೈರಸ್ ಇರುವುದು ಪತ್ತೆಯಾಗಿತ್ತು. ಅದಾದ ಬಳಿಕ ಆರು ದಿನಗಳ ಕಾಲ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದ್ದ ಲಕ್ಷ್ಮೀನಾರಾಯಣ್ ನಾಗರ್, ಬುಧವಾರ ಮಧ್ಯಾಹ್ನ 3.30ರ ವೇಳೆಗೆ ಸಾವನ್ನಪ್ಪಿದ್ದಾರೆ.  ಸಾವನ್ನಪ್ಪಿರುವ ವ್ಯಕ್ತಿ ಈಗಾಗಲೇ ಎರಡು ಬಾರಿ ಲಸಿಕೆ ಪಡೆದುಕೊಂಡಿದ್ದು ಮಾತ್ರವಲ್ಲದೆ, ಹೊರದೇಶಗಳು ಅಥವಾ ರಾಜ್ಯಗಳಿಗೆ ಪ್ರಯಾಣ ಬೆಳೆಸಿದ ಆಗೂ ಪ್ರಾಥಮಿಕ ಸಂಪರ್ಕದೊಂದಿಗೆ ಜೊತೆಯಾದ ಉದಾಹರಣೆಗಳಿಲ್ಲ.

Coronavirus ಶಾಲಾ-ಕಾಲೇಜು ಬಂದ್ ಬಗ್ಗೆ ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ

ಪ್ರಸ್ತುತ, ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 2,135 ಆಗಿದೆ. ಇಂದು ಮುಂಜಾನೆ ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ಭಾರತದಲ್ಲಿ ಇದುವರೆಗೆ 828 ಓಮಿಕ್ರಾನ್ ರೋಗಿಗಳು ಚೇತರಿಸಿಕೊಂಡಿದ್ದಾರೆ. ಹೊಸ ಕೋವಿಡ್-19 ರೂಪಾಂತರದಿಂದ ಹಾನಿಗೊಳಗಾದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಮಹಾರಾಷ್ಟ್ರ ಮತ್ತು ದೆಹಲಿ ಅಗ್ರಸ್ಥಾನದಲ್ಲಿವೆ.  ಮಹಾರಾಷ್ಟ್ರದಲ್ಲಿ 653 ಒಮಿಕ್ರಾನ್ ಪ್ರಕರಣಗಳಿದ್ದರೆ, ದೆಹಲಿಯ ಒಮಿಕ್ರಾನ್ ಸಂಖ್ಯೆ 464 ಆಗಿದೆ. ರಾಜಸ್ಥಾನದಲ್ಲಿ 174 ಒಮಿಕ್ರಾನ್ ಸೋಂಕುಗಳು ಪತ್ತೆಯಾಗಿವೆ, ಅವರಲ್ಲಿ 88 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ.

ಭಾರತದಲ್ಲಿ ಒಂದೇ ದಿನ 58,097 ಕೋವಿಡ್ ಪ್ರಕರಣಗಳ ಏರಿಕೆಯಾಗಿದೆ. ಹಿಂದಿನ ದಿನಗಳಲ್ಲಿ ಒಟ್ಟು 20,718 ರಷ್ಟು ಏರಿಕೆಯಾಗಿದೆ ಮತ್ತು 24 ಗಂಟೆಗಳ ಅವಧಿಯಲ್ಲಿ 534 ಸಾವುಗಳು ಸಂಭವಿಸಿವೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ.
 

Follow Us:
Download App:
  • android
  • ios