Asianet Suvarna News Asianet Suvarna News

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಮುಂದೆ ಹಿಂಸಾಚಾರ, 8 ಮಂದಿಯ ಬಂಧನ

ಬಿಜೆಪಿ ಯುವ ಮೋರ್ಚಾ (ಬಿಜೆವೈಪಿ) ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ 200 ಪ್ರತಿಭಟನಾಕಾರರು, ಕಾಶ್ಮೀರ ಫೈಲ್‌ಗಳನ್ನು ತೆರಿಗೆ ಮುಕ್ತಗೊಳಿಸುವ ಕುರಿತು ಅವರ ಹೇಳಿಕೆಯನ್ನು ವಿರೋಧಿಸಲು ದೆಹಲಿ ಸಿಎಂ ಅವರ ಮನೆಯ ಹೊರಗೆ ಜಮಾಯಿಸಿದ್ದಲ್ಲದೆ, ದೊಡ್ಡ ಮಟ್ಟದ ಪ್ರತಿಭಟನೆಯನ್ನೂ ನಡೆಸಿದ್ದರು.

8 people held for vandalism outside  delhi CM Arvind Kejriwal house san
Author
Bengaluru, First Published Apr 1, 2022, 6:55 PM IST | Last Updated Apr 1, 2022, 6:55 PM IST

ನವದೆಹಲಿ (ಏ. 1): ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಅವರ ನಿವಾಸದ ಹೊರಗೆ ಬಿಜೆಪಿ ಯುವ ಮೋರ್ಚಾ (ಬಿಜೆವೈಪಿ) ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಒಂದು ದಿನದ ನಂತರ, ದೆಹಲಿ ಪೊಲೀಸ್ (Delhi Police) ಗುರುವಾರ 8 ಮಂದಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಕೋರ್ಸ್ ಓದುತ್ತಿರುವ ವಿದ್ಯಾರ್ಥಿ, ಕಾನೂನು ಪದವೀಧರ, ಇ ಉದ್ಯೋಗಿ ಬಂಧಿತರಲ್ಲಿ ಸೇರಿದ್ದಾರೆ ಎಂದು ಹೇಳಲಾಗಿದೆ. ಬಂಧಿತರಲ್ಲಿ ಉಳಿದ ಐವರನ್ನು ವಾಣಿಜ್ಯೋದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ.

ಬಿಜೆಪಿ ಯುವ ಮೋರ್ಚಾ (ಬಿಜೆವೈಎಂ) ರಾಷ್ಟ್ರೀಯ ಅಧ್ಯಕ್ಷ ಮತ್ತು ಲೋಕಸಭೆಯ ಸಂಸದ ತೇಜಸ್ವಿ ಸೂರ್ಯ(Lok Sabha MP Tejaswi Surya)ನೇತೃತ್ವದ ಸುಮಾರು 200 ಪ್ರತಿಭಟನಾಕಾರರು ಬುಧವಾರ ದೆಹಲಿ ಸಿಎಂ (Delhi CM) ಮನೆಯ ಹೊರಗೆ ಜಮಾಯಿಸಿದ್ದರು, ಕಾಶ್ಮೀರ ಫೈಲ್ಸ್ (The Kashmir Files) ಕುರಿತು ಕೇಜ್ರಿವಾಲ್ ದೆಹಲಿ ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿತ್ತು. 90 ದಶಕದಲ್ಲಿ ಪಂಡಿತರ ಮೇಲಿನ ನಡೆದ ಹತ್ಯಾಕಾಂಡದ ಬಳಿಕ ಕಣಿವೆ ರಾಜ್ಯದಿಂದ ಪಂಡಿತರು ಹೇಗೆ ವಲಸೆ ಬಂದರು ಎನ್ನುವುದನ್ನು ತೋರಿಸಿದ ಸಿನಿಮಾವನ್ನು ದೆಹಲಿಯಲ್ಲಿ ತೆರಿಗೆ ಮುಕ್ತ ಮಾಡಬೇಕು ಎಂದು ಬಿಜೆಪಿ (BJP) ಒತ್ತಾಯಿಸಿತ್ತು. ಈ ಕುರಿತಾಗಿ ಅರವಿಂದ್ ಕೇಜ್ರಿವಾಲ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ಮಾರ್ಚ್ 24 ರಂದು ದೆಹಲಿ ಸಿಎಂ ವಿಧಾನಸಭೆಯಲ್ಲಿ ಮಾತನಾಡುತ್ತಾ “ಬಿಜೆಪಿ ಪಕ್ಷವು ದೆಹಲಿಯಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಬೇಕೆಂದು ಒತ್ತಾಯಿಸುತ್ತಿದೆ. ಅದನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿ, ಚಲನಚಿತ್ರವನ್ನು ಪ್ರತಿಯೊಬ್ಬರೂ ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ. ಕೆಲವರು ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದ್ದೀರಿ ಮತ್ತು ನೀವು (ಬಿಜೆಪಿ) ಚಿತ್ರದ ಪೋಸ್ಟರ್‌ಗಳನ್ನು ಅಂಟಿಸುವ ಕೆಲಸ ಮಾಡಿದ್ದೀರಿ' ಎಂದು ಅಪಹಾಸ್ಯದ ನಗುವಿನೊಂದಿಗೆ ಮಾತನಾಡಿದ್ದರು.

ಇದನ್ನು ವಿರೋಧಿಸಿ ಬಿವೈಜೆಎಂ ಪ್ರತಿಭಟನಾಕಾರರು ಬುಧವಾರ ಕೇಜ್ರಿವಾಲ್ ಅವರ ನಿವಾಸದ ಹೊರಗಿನ ಬೂಮ್ ತಡೆಗೋಡೆಯನ್ನು ಮುರಿದಿದ್ದರೆ,  ಬಡಿದು ಹಾಕಿದ್ದಲ್ಲದೆ,  ಮುಖ್ಯ ಗೇಟ್‌ಗಳಿಗೆ ಕೆಂಪು ಬಣ್ಣ ಬಳಿದು ಆಕ್ರೋಶ ಹೊರಹಹಾಕಿದ್ದರು. ಮನೆಯ ಹೊರಗಿನ ಸಿಸಿಟಿವಿ ಕ್ಯಾಮೆರಾವನ್ನು ನಾಶಪಡಿಸಿದ್ದರು. ಬುಧವಾರದ ಪ್ರತಿಭಟನೆಗೆ ಅನುಮತಿಯ ಅರ್ಜಿಯನ್ನು ಈ ಹಿಂದೆ ಬಿಜೆಪಿ ಅಧಿಕಾರಿ ಹುಕುಂ ಸಿಂಗ್ ಸಲ್ಲಿಸಿದ್ದರು, ಆದರೆ ದೆಹಲಿ ಉತ್ತರ ಜಿಲ್ಲೆಯ ಪೊಲೀಸರು ಇದನ್ನು ತಿರಸ್ಕರಿಸಿದರು.

ಕಾಶ್ಮೀರದಲ್ಲಿ ಹಿಂದುಗಳ ಹತ್ಯೆ ಕುರಿತು ಅಪಹಾಸ್ಯ, ಕೇಜ್ರಿವಾಲ್ ಮನೆಯ ಮುಂದೆ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ!

ಘಟನೆಯ ನಂತರ, ಬುಧವಾರ "ಅಪರಿಚಿತ ವ್ಯಕ್ತಿಗಳ" ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದರು. ಸೆಕ್ಷನ್ 186 (ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸುವುದು), 188 (ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶಕ್ಕೆ ಅಸಹಕಾರ), 353 (ದಾಳಿ ಅಥವಾ ಕ್ರಿಮಿನಲ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದರು. “ನಾವು ಇದುವರೆಗೆ ಎಂಟು ಜನರನ್ನು ಬಂಧಿಸಿದ್ದೇವೆ. ಎಲ್ಲರನ್ನೂ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಅತಿ ದೊಡ್ಡ ಪಕ್ಷದಿಂದ ಗೂಂಡಾಗಿರಿ: ಬಿಜೆಪಿ ವಿರುದ್ಧ ಕೇಜ್ರಿ ಆಕ್ರೋಶ

ನಾವು ದೃಶ್ಯಗಳಿಂದ ಕೆಲವರನ್ನು ಗುರುತಿಸಿದ್ದೇವೆ. ಸುಮಾರು 20 ಜನರನ್ನು ಗುರುತಿಸಲಾಗಿದ್ದು, ತಂಡಗಳನ್ನು ದಾಳಿಗೆ ಕಳುಹಿಸಲಾಗಿದೆ ಎಂದು ಡಿಸಿಪಿ (ಉತ್ತರ) ಸಾಗರ್ ಸಿಂಗ್ ಕಲ್ಸಿ ಗುರುವಾರ ತಿಳಿಸಿದ್ದಾರೆ. ನಲವತ್ತು ವರ್ಷದ ಜಿತೇಂದರ್ ಬಿಶ್ತ್, 38 ವರ್ಷದ ನವೀನ್ ಕುಮಾರ್, 35 ವರ್ಷದ ಬಬ್ಲು ಕುಮಾರ್, 28 ವರ್ಷದ ರಾಜು ಸಿಂಗ್, 27 ವರ್ಷದ ಚಂದ್ರಕಾಂತ್ ಮತ್ತು ಪ್ರದೀಪ್ ತಿವಾರಿ, 28 ವರ್ಷದ ನೀರಜ್ ದೀಕ್ಷಿತ್ ಮತ್ತು 21ರ ಹರೆಯದ ಸನ್ನಿ ಕುಶ್ವಾಹ ಅವರನ್ನು ಸಿಎಂ ಕೇಜ್ರಿವಾಲ್ ಅವರ ಮನೆಯ ಹೊರಗೆ ನಡೆದ ಧ್ವಂಸ ಪ್ರಕರಣದಲ್ಲಿ ಬಂದಿಸಲಾಗಿದೆ.
ಎಲ್ಲಾ ಎಂಟು ಮಂದಿ ದೆಹಲಿ ನಿವಾಸಿಗಳು ಮತ್ತು ಬಿಜೆವೈಎಂ ಸದಸ್ಯರು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. 

Latest Videos
Follow Us:
Download App:
  • android
  • ios