ನೋಯ್ಡಾ(ಜು.12): ಸಮೀಪದ ಮನೆಯಲ್ಲಿ ಪುಟ್ಟ ಕಂದಮ್ಮ ಒಂದೇ ಸಮನೆ ಅಳುವ ಧ್ವನಿ ಕೇಳುತ್ತಲೇ ಇತ್ತು. ಬಾಗಿಲು ಪಡೆದು ನೋಡಿದರೆ 8 ತಿಂಗಳ ಹಸುಗೂಸು ಮತ್ತೆಂದೂ ಎದ್ದು ಬಾರದ ಅಪ್ಪ ಅಮ್ಮನ ಶವದ ಮುಂದೆ ಅಳುತ್ತಿತ್ತು.

ಇದು ನೋಯ್ಡಾದ ಹೋಶಿಯಾರ್‌ಪುರದಲ್ಲಿ ನಡೆದ ಘಟನೆ. ಹೋಶಿಯಾರ್‌ಪುರದ ಸೆಕ್ಟರ್ 51ರಲ್ಲಿ ದಂಪತಿ ಸತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೋಶಿಯಾರ್‌ಪುರದ ನಿವಾಸಿಯೊಬ್ಬರು ಮಗು ಅಳುವುದು ಕೇಳುತ್ತಿದೆ ಎಂದು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ಹಾಗೆಯೇ ಮನೆಯ ಬಾಗಿಲು ಬಡಿದರೂ, ಮನೆಯವರು ಯಾರೂ ಬಾಗಿಲು ತೆಗೆಯುತ್ತಿಲ್ಲ ಎಂಬುದನ್ನು ತಿಳಿಸಿದ್ದರು.

ಡ್ರಗ್ಸ್‌ ಕೊಟ್ಟು ಪುತ್ರಿ ಮೇಲೆ ಮಲತಂದೆ ರೇಪ್: ಹೇಯ ಕೃತ್ಯಕ್ಕೆ ತಾಯಿಯೂ ಸಹಕಾರ!

ಪೊಲೀಸರು ಸ್ಥಳಕ್ಕೆ ಆಗಮಿಸಿ ಮನೆಯ ಬಾಗಿಲು ಒಡೆದು ಒಳಗೆ ಪ್ರವೇಶಿಸಿದ್ದಾರೆ. ಮನೆಯೊಳಗೆ ಮೃತಪಟ್ಟ ದಂಪತಿ ಪಕ್ಕ ಕುಳಿತು 8 ತಿಂಗಳ ಕಂದಮ್ಮ ಅಳುತ್ತಿರುವ ದೃಶ್ಯ ಕಂಡು ಬಂದಿದೆ.

ಆರಂಭದಲ್ಲಿ ಇದು ಆತ್ಮಹತ್ಯೆಯಂತೆ ಕಾಣಿಸುತ್ತಿದೆ. ಆದರೆ ಯಾವುದೇ ಡೆತ್‌ನೋಟ್ ಸ್ಥಳದಲ್ಲಿ ಲಭ್ಯವಾಗಿಲ್ಲ. ಬಿಹಾರ ಮೂಲದ ಈ ದಂಪತಿ ಜುಲೈ 7ರಂದು ನೋಯ್ಡಾದ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

ಕೇರಳದಲ್ಲಿ ಸಿಕ್ಕಿದ್ದ 15 ಕೋಟಿ ಚಿನ್ನ, ಬೆಂಗಳೂರಲ್ಲಿ ಬಲೆಗೆ ಬಿದ್ದ ಸ್ವಪ್ನ!

ಮೃತದೇಹವನ್ನು ಪೋಸ್ಟ್ ಮಾರ್ಟ್ಂಗಾಗಿ ಕಳುಹಿಸಿದ್ದು, ಮಗುವನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಬಿಹಾರದ ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಗಿದೆ.