ಕೇರಳದಲ್ಲಿ ಸಿಕ್ಕಿದ್ದ  15  ಕೋಟಿ ಚಿನ್ನ, ಬೆಂಗಳೂರಲ್ಲಿ ಬಲೆಗೆ ಬಿದ್ದ ಸ್ವಪ್ನ!

ಬಹುಕೋಟಿ ಮೊತ್ತದ ಚಿಒನ್ನ ಸ್ಮಗ್ಲಿಂಗ್ ಕೇಸ್/ ಬೆಂಗಳೂರಿನಲ್ಲಿ ಪ್ರಮುಖ ಆರೋಪಿ ಬಂಧನ/ ಸ್ವಪ್ನ ಸುರೇಶ್ ಬಂಧಿಸಿದ ಎನ್ ಐಎ ಅಧಿಕಾರಿಗಳು/ ಭಾನುವಾರ ಕೇರಳಕ್ಕೆ ಕರೆದೊಯ್ಯಲಿದ್ದಾರೆ

Kerala gold smuggling case NIA detains key accused Swapna Suresh Bengaluru

ಬೆಂಗಳೂರು(ಜು.  11) ಕೇರಳದ ಬಹುಕೋಟಿ ಚಿನ್ನ ಸ್ಮಗ್ಲಿಂಗ್ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ರನ್ನು  ಎನ್ ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.  ಭಾನುವಾರ ಕೇರಳದ ಕೊಚ್ಚಿಯ ಎನ್ ಐಎ ಕಚೇರಿಗೆ ಕರೆದೊಯ್ಯಲಿದ್ದಾರೆ.

ಕುಟುಂಬ ಸಮೇತ ವಶಕ್ಕೆ ಪಡೆದು ಕರೆದೊಯ್ಯಲಾಗುತ್ತಿದೆ. ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌'' ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ಸರ್ಕಾರಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ಹೇಳಲಾಗಿತ್ತು.

ಉತ್ತರ ಪ್ರದೇಶದಲ್ಲಿ ಮಾತನಾಡುತ್ತಿರುವ ಪೊಲೀಸ್ ರಿವಾಲ್ವಾರ್‌ ಗಳು

ಸರಿತ್, ಸ್ವಪ್ನ ಪ್ರಭ ಸುರೇಶ್, ಫೈಜಲ್ ಫರೀದ್ ಮತ್ತು ಸಂದೀಪ್ ನಾಯರ್ ವಿರುದ್ಧ ಪ್ರಕರಣ ದಾಖಲಾಗಿತ್ತು.  ಕೇರಳ ಸರ್ಕಾರದ ಮಾಹಿತಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಸ್ವಪ್ನ ಸುರೇಶ್ ಕೆಲಸ ಮಾಡುತ್ತಿದ್ದರು.  ಯುಎಇ ರಾಯಭಾರ ಕಚೇರಿಯ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಸರಿತ್ ಕುಮಾರ್ ಬಂಧನ ಮಾಡಿದಾಗ ಅನೇಕರ ಹೆಸರುಗಳು ಹೊರಗೆ ಬಂದಿದ್ದವು.  ಈಗಾಗಲೇ ಕೇರಳಾದಲ್ಲಿ ಸರಿತ್ ಕುಮಾರ್ ಬಂಧಿಸಿದ್ದ ಎನ್ ಐಎ ಹೆಚ್ಚಿನ ತನಿಖೆ ನಡೆಸಲಿದೆ. 

Latest Videos
Follow Us:
Download App:
  • android
  • ios