ಮುಜಫ​ರ್‌ಪುರ(ಆ.22): ಬಿಹಾರ ಮತ್ತು ಹಗರಣಗಳಿಗೆ ಅವಿನಾಭಾವ ಸಂಬಂಧ ಎಂದರೆ ತಪ್ಪಾಗಲಾರದು. ಆದರೆ, ಇದೀಗ ಬೆಳಕಿಗೆ ಬಂದಿರುವ ಹೊಸ ಹಗರಣ ಮಾತ್ರ ಪೊಲೀಸರನ್ನು ಅಚ್ಚರಿಯ ಜೊತೆಗೆ ಬೆಚ್ಚಿ ಬೀಳಿಸಿದೆ. ಹೆಣ್ಣು ಮಗು ಜನಿಸಿದರೆ ನೀಡಲಾಗುವ ಸಹಾಯಧನ ಪಡೆಯುವ ಮಹಾ ದುರಾಸೆಗಾಗಿ ಹುಟ್ಟದೇ ಇರುವ ಹೆಣ್ಣು ಮಕ್ಕಳ ಸೃಷ್ಟಿಸುವ ಹೊಸ ದಂಧೆಯೊಂದು ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಇದಕ್ಕಿಂತಲೂ ಅಚ್ಚರಿಯೆಂದರೆ 65 ವರ್ಷದ ಇಳಿ ವಯಸ್ಸಿನ ಅಜ್ಜಿಯು ಕೇವಲ 14 ತಿಂಗಳಲ್ಲಿ 8 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳಂತೆ!

ವಿವಾಹಕ್ಕೂ ಮುನ್ನ ಗರ್ಭಧರಿಸಿದ್ದ ಯುವತಿಗೆ ಅಕ್ರಮ ಹೆರಿಗೆ: ಮಗು ಸಾವು

ಹೌದು, ಬಿಹಾರದ ಮುಜಫ​ರ್‌ಪುರದಲ್ಲಿ ಇಂಥದ್ದೊಂದು ಹಗರಣ ಬೆಳಕಿಗೆ ಶುಕ್ರವಾರ ಬಂದಿದೆ. 65 ವರ್ಷದ ಲೀಲಾದೇವಿ ಎಂಬಾಕೆ ತಾನು 14 ತಿಂಗಳಿನಲ್ಲಿ 8 ಮಕ್ಕಳಿಗೆ ಜನ್ಮ ನೀಡಿದ್ದಾಗಿ ದಾಖಲೆ ಸೃಷ್ಟಿಸಿದ್ದಾಳೆ. ಇಷ್ಟೇ ಅಲ್ಲದೆ, ಶಾಂತಿದೇವಿ ಎಂಬಾಕೆ 9 ತಿಂಗಳಲ್ಲಿ 5 ಮಕ್ಕಳಿಗೆ, ಸೋನಾದೇವಿ ಎಂಬಾಕೆ 5 ತಿಂಗಳಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ್ದಾಗಿ, ದಾಖಲೆ ಸೃಷ್ಟಿಸಿ ಸರ್ಕಾರ ನೀಡುವ ಸಹಾಯಧನದ ಫಲಾನುಭವಿಗಳಾಗಿದ್ದಾರೆ. ತನ್ಮೂಲಕ ಇವರೆಲ್ಲರೂ ಪ್ರತೀ ಮಗುವಿಗೆ 1400 ರು.ನಂತೆ ಸರ್ಕಾರದ ಅನುದಾನ ಪಡೆಯುತ್ತಿರುವ ವಿಚಾರ ದಾಖಲೆಗಳಿಂದ ಲಭ್ಯವಾಗಿದೆ.

ನಟಿ ಶ್ರುತಿ ಹರಿಹರನ್‌ ಕಮ್‌ ಬ್ಯಾಕ್‌; ಆದರಿದು ಸಿನಿಮಾಕ್ಕಲ್ಲ?

ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಉಸ್ತುವಾರಿ ಉಪೇಂದ್ರ ಚೌಧರಿ ಎಂಬುವರು ದಾಖಲೆ ಪರಿಶೀಲನೆ ವೇಳೆ ಈ ಅವ್ಯವಹಾರ ಬೆಳಕಿಗೆ ಬಂದಿದ್ದು, ಈ ಸಂಬಂಧ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೆ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಮ್ಯಾಜಿಸ್ಪ್ರೇಟ್‌ ಚಂದ್ರಶೇಖರ್‌ ಸಿಂಗ್‌ ತನಿಖೆಗೆ ಆದೇಶಿಸಿದ್ದಾರೆ.