Asianet Suvarna News Asianet Suvarna News

ವಿವಾಹಕ್ಕೂ ಮುನ್ನ ಗರ್ಭಧರಿಸಿದ್ದ ಯುವತಿಗೆ ಅಕ್ರಮ ಹೆರಿಗೆ: ಮಗು ಸಾವು

ವಿವಾಹಕ್ಕೂ ಮುನ್ನ ಗರ್ಭಧರಿಸಿದ್ದ ಯುವತಿ| ಅಕ್ರಮವಾಗಿ ಹೆರಿಗೆ ಮಾಡಿಸಿದ ಪರಿಣಾಮ ಮಗು ಸಾವು| ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಘಟನೆ| ಮೃತ ಮಗುವಿನ ಮರಣೋತ್ತರ ಪರೀಕ್ಷೆಗೆ ರವಾನೆ| ವರದಿ ಬಂದ ಬಳಿಕ ಕಾನೂನು ಕ್ರಮ: ಹೈಗ್ರೌಂಡ್ಸ್‌ ಪೊಲೀಸರು| 

Illegal Maternity to Young Woman in Bengaluru
Author
Bengaluru, First Published Aug 19, 2020, 8:36 AM IST

ಬೆಂಗಳೂರು(ಆ.19): ವಿವಾಹಕ್ಕೂ ಮುನ್ನ ಗರ್ಭಧರಿಸಿದ್ದ ಯುವತಿಗೆ ಅಕ್ರಮವಾಗಿ ಹೆರಿಗೆ ಮಾಡಿಸಿದ ಪರಿಣಾಮ ಮಗು ಸಾವಿಗೀಡಾಗಿದೆ ಎಂಬ ಆರೋಪ ನಗರದ ಖಾಸಗಿ ಆಸ್ಪತ್ರೆ ವಿರುದ್ಧ ಕೇಳಿ ಬಂದಿದೆ

ಚಿಕ್ಕಮಗಳೂರು ಮೂಲದ ಯುವಕ ಮತ್ತು ಬೆಂಗಳೂರಿನ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಯುವತಿ ಗರ್ಭ ಧರಿಸಿದ್ದು, ಇದಕ್ಕೆ ಆಕೆಯ ಕುಟುಂಬಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಇದೇ ಕಾರಣದಿಂದ ಯುವತಿಗೆ ಅಕ್ರಮವಾಗಿ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ಆಸ್ಪತ್ರೆಯ ವೈದ್ಯರು ಶಾಮೀಲಾಗಿದ್ದಾರೆ ಎಂದು ಯುವಕನ ಆಪ್ತ ವಕೀಲ ನಿತಿನ್‌ ಎಂಬುವರು ಆರೋಪಿಸಿದ್ದಾರೆ. ನಗರದ ಹೈಗ್ರೌಂಡ್ಸ್‌ ಪೊಲೀಸರು ಎಫ್‌ಐಆರ್‌ ದಾಖಲಿಸದೆ ಯುವತಿಯ ಪೋಷಕರು ಮತ್ತು ಆಸ್ಪತ್ರೆ ಸಿಬ್ಬಂದಿಯನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ ಎಂದು ಅವರು ದೂರಿದರು.

ಪುಟ್ಟ ಕಂದನಿಗೆ ಜನ್ಮ ಕೊಟ್ಟ 13 ವರ್ಷದ ರೇಪ್ ಸಂತ್ರಸ್ತೆ!

ಮೃತ ಮಗುವಿನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೈಗ್ರೌಂಡ್ಸ್‌ ಪೊಲೀಸರು ತಿಳಿಸಿದ್ದಾರೆ.
 

Follow Us:
Download App:
  • android
  • ios