ಕಾವೇರಿ ನದಿಗೆ ಈಜಾಡಲು ಹೋಗಿ ತಂದೆ-ಮಗ ಸೇರಿ ನಾಲ್ವರು ಮೃತಪಟ್ಟ ದುರ್ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿ ನಡೆದಿದೆ.

ಮಂಡ್ಯ (ಮಾ.26): ಕಾವೇರಿ ನದಿಗೆ ಈಜಾಡಲು ಹೋಗಿ ತಂದೆ-ಮಗ ಸೇರಿ ನಾಲ್ವರು ಮೃತಪಟ್ಟ ದುರ್ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿ ನಡೆದಿದೆ.

ತಂದೆ ನಾಗೇಶ್(40) ಮಗ ಭರತ್ (17), ಗುರು(32), ಮಹದೇವ್(16) ಸಾವನ್ನಪ್ಪಿದರು. ಮೃತಪಟ್ಟ ನಾಲ್ವರು ಮೈಸೂರು ಮೂಲದದವರೆಂದು ತಿಳಿದುಬಂದಿದೆ. ಮೈಸೂರಿನ ಕನಕಗಿರಿಯಿಂದ ಮಳವಳ್ಳಿಯ ಮುತ್ತತ್ತಿಗೆ ಪ್ರವಾಸಕ್ಕೆ ಬಂದಿದ್ದರು.ಒಂದೇ ಬಸ್‌ನಲ್ಲಿ ಆಗಮಿಸಿದ್ದ 40 ಜನ ಕುಟುಂಬಸ್ಥರು ಹಾಗೂ ಸ್ನೇಹಿತರು. ಬಿಸಲಿನ ತಾಪಕ್ಕೆ ತಂಪಾಗಲು ನದಿಯಲ್ಲಿ ಈಜಾಡಲು ತೆರಳಿದ್ದರು. ಕಾವೇರಿ ನದಿಯಲ್ಲಿ ಈಜಾಡುವ ವೇಳೆ ನೀರಿನಲ್ಲಿ ಓರ್ವ ಮುಳುಗಿದ್ದಾನೆ. ರಕ್ಷಣೆಗೆ ಹೋದ ಮೂವರು ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸದ್ಯ ಇಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತಿಬ್ಬರ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

ಬೆಳಗಾವಿ: ಕೃಷಿ ಹೊಂಡದಲ್ಲಿ ಬಿದ್ದು ಒಂದೇ ಕುಟುಂಬದ ಮೂವರ ಸಾವು