Asianet Suvarna News Asianet Suvarna News

ಮುಂಬೈ-ಹೈದರಾಬಾದ್ ಬುಲೆಟ್ ರೈಲು; ಉಳಿತಾಯವಾಗಲಿದೆ ಪ್ರಯಾಣಿಕರ 9.5 ಗಂಟೆ ಸಮಯ!

ಮುಂಬೈ -ಪುಣೆ-ಹೈದರಾಬಾದ್  ಬುಲೆಟ್ ರೈಲಿಗಾಗಿ ಸರ್ವೆ ಕಾರ್ಯ ಆರಂಭಗೊಂಡಿದೆ. ವಿಶೇಷ ಅಂದರೆ ಈ ಬುಲೆಟ್ ರೈಲಿನಿಂದ ಪ್ರಯಾಣಿಕರ 9.5 ಗಂಟೆ ಸಮಯ ಉಳಿತಾಯವಾಗಲಿದೆ. ಮುಂಬೈನಿಂದ ಹೈದರಾಬಾದ್ ತಲುಪಲು ಕೇವಲ 3.5 ಗಂಟೆಯಲ್ಲಿ ತಲುಪಲಿದೆ.

711 kM distance between Hyderabad Mumbai will be covered by bullet trains just 3 hours ckm
Author
Bengaluru, First Published Nov 2, 2020, 9:30 PM IST

ನವದೆಹಲಿ(ನ.02): ಅತೀ ವೇಗದ ಬುಲೆಟ್ ರೈಲು ಯೋಜನೆ ಕಾರ್ಯ ಆರಂಭಗೊಂಡಿದೆ. ಮುಂಬೈ-ಪುಣೆ-ಹೈದರಾಬಾದ್‌ಗೆ  ರೈಲಿನಲ್ಲಿ ಪ್ರಯಾಣ ಮಾಡಲು 13 ಗಂಟೆ ಪ್ರಯಾಣದ ಸಮಯ ಅತ್ಯವಶ್ಯಕ. ಆದರೆ ಬುಲೆಟ್ ರೈಲಿನಲ್ಲಿ ಕೇವಲ 3.5 ಗಂಟೆಯಲ್ಲಿ ನಿಗದಿತ ಸ್ಥಳ ತಲುಪಬಹುದು. ಬರೋಬ್ಬರಿ 9.5 ಗಂಟೆ ಸಮಯ ಉಳಿತಾಯವಾಗಲಿದೆ.

ಚೆನ್ನೈ- ಮೈಸೂರು ಸೇರಿ ದೇಶದಲ್ಲಿ 7 ಬುಲೆಟ್‌ ರೈಲು ಮಾರ್ಗ?.

ಪ್ರಸ್ತಾವಿತ ಮುಂಬೈ-ಹೈದರಾಬಾದ್ ರೈಲು 711 ಕಿಲೋಮೀಟರ್ ಅತೀ ದೊಡ್ಡ ಯೋಜನೆಯಾಗಿದೆ. ಬಹುನಿರೀಕ್ಷಿತ ಬುಲೆಟ್ ರೈಲು ಯೋಜನೆಯ ಭೂ ಸಮೀಕ್ಷೆ,  ಬಿಡ್ಡಿಂಗ್ ಮತ್ತು ಯೋಜನೆಯ ಕಾರ್ಯಸಾಧ್ಯತೆ ನವೆಂಬರ್ 5 ರಿಂದ ಆರಂಭವಾಗುವ ನಿರೀಕ್ಷೆಯಿದೆ.

ಹೈದರಾಬಾದ್-ಪುಣೆ-ಮುಂಬೈ ರೈಲು ಯೋಜನೆಯು ಈ ವರ್ಷ ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ(NHSRCL)ಕೈಗೆತ್ತಿಕೊಂಡ 7 ಬುಲೆಟ್ ರೈಲು ಟೆಂಡರ್‌ಗಳ ಭಾಗವಾಗಿದೆ. ಮುಂಬೈ ಮತ್ತು ಹೈದರಾಬಾದ್ ಬುಲೆಟ್ ರೈಲು ಪ್ರತಿ ಗಂಟೆಗೆ 320 ಕಿ.ಮೀ ವೇಗದಲ್ಲಿ ಸಾಗಲಿದೆ. ಸಾಮಾನ್ಯ ರೈಲುಗಳು 80 ರಿಂದ 120 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ. 

ಬುಲೆಟ್ ರೈಲು ಯೋಜನೆ ಕಾಮಗಾರಿ ಬಿಡ್ ಮಾಡುವರಿಗಾಗಿ ನವೆಂಬರ್ 5 ರಂದು ಬೆಳಗ್ಗೆ 11 ಗಂಟೆ ವಿಡಿಯೋ ಕಾನ್ಫರೆನ್ಸ್ ಸಭೆ ಆಯೋಜಿಸಲಾಗಿದೆ. ಬಿಡ್ಡಿಂಗ್ ದಾರರು  2,22,843 ರೂ ಭದ್ರತೆ ಠೇವಣಿ ಇಡಬೇಕಾಗಿದೆ. 16 ವಾರಗಳಲ್ಲಿ ಸಮೀಕ್ಷೆಯ ಕಾರ್ಯಗಳು ಪೂರ್ಣಗೊಳ್ಳಲಿದೆ.   ಈ ಯೋಜನೆಯಲ್ಲಿ ಮುಂಬೈ, ಪನ್ವೆಲ್, ನವೀ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಲೋನವಾಲ, ಪಿಂಪ್ರಿ-ಚಿಂಚ್‌ವಾಡ್, ಪುಣೆ, ಬಾರಾಮತಿ, ಸೋಲಾಪುರ, ಗುಲ್ಬರ್ಗಾ, ಹುಮನಾಬಾದ್-ಜಹೀರಾಬಾದ್, ಸಂಗರೆಡ್ಡಿ ಮತ್ತು ಹೈದರಾಬಾದ್‌ನಲ್ಲಿ 12 ನಿಲ್ದಾಣಗಳನ್ನು ನಿರ್ಮಿಸಲಾಗುವುದು.
 

Follow Us:
Download App:
  • android
  • ios