Asianet Suvarna News Asianet Suvarna News

ಚೆನ್ನೈ- ಮೈಸೂರು ಸೇರಿ ದೇಶದಲ್ಲಿ 7 ಬುಲೆಟ್‌ ರೈಲು ಮಾರ್ಗ?

ಕೊರೋನಾ ವೈರಸ್‌ನಿಂದಾಗಿ ಪ್ರಸ್ತುತ ಪ್ರಗತಿಯಲ್ಲಿರುವ ಮುಂಬೈ- ಅಹಮದಾಬಾದ್‌ ರೈಲು ಯೋಜನೆ ವಿಳಂಬ| ಚೆನ್ನೈ- ಮೈಸೂರು ಸೇರಿದಂತೆ 7 ಹೊಸ ಬುಲೆಟ್‌ ರೈಲು ಯೋಜನೆ| ಒಟ್ಟು 4,869 ಕಿ.ಮೀ. ಉದ್ದದ ಬುಲೆಟ್‌ ರೈಲು ಯೋಜನೆ

Including Mysore Chennai India May get 7 Bullet Train Tracks pod
Author
Bangalore, First Published Sep 15, 2020, 12:37 PM IST

ನವದೆಹಲಿ(ಸೆ.15): ಕೊರೋನಾ ವೈರಸ್‌ನಿಂದಾಗಿ ಪ್ರಸ್ತುತ ಪ್ರಗತಿಯಲ್ಲಿರುವ ಮುಂಬೈ- ಅಹಮದಾಬಾದ್‌ ರೈಲು ಯೋಜನೆ ವಿಳಂಬವಾಗಿರುವ ಹೊರತಾಗಿಯೂ, ಚೆನ್ನೈ- ಮೈಸೂರು ಸೇರಿದಂತೆ 7 ಹೊಸ ಬುಲೆಟ್‌ ರೈಲು ಯೋಜನೆಗಳನ್ನು ಅಂದಾಜು 10 ಲಕ್ಷ ಕೋಟಿ ರು.ವೆಚ್ಚದಲ್ಲಿ ಕೈಗೊಳ್ಳಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ನೂತನ ಬುಲೆಟ್‌ ರೈಲು ಯೋಜನೆ ದೆಹಲಿ- ವಾರಾಣಸಿ, ಮುಂಬೈ- ನಾಗ್ಪುರ, ದೆಹಲಿ- ಅಹಮದಾಬಾದ್‌, ಚೆನ್ನೈ- ಬೆಂಗಳೂರು- ಮೈಸೂರು, ದೆಹಲಿ- ಅಮೃತಸರ, ಮುಂಬೈ- ಹೈದರಾಬಾದ್‌ ಹಾಗೂ ವಾರಾಣಸಿ- ಹೌರಾ ನಡುವೆ ಸಂಪರ್ಕ ಕಲ್ಪಿಸಲಿದೆ. ಒಟ್ಟು 4,869 ಕಿ.ಮೀ. ಉದ್ದದ ಬುಲೆಟ್‌ ರೈಲು ಯೋಜನೆ ಇದಾಗಿದೆ.

ನೂತನವಾಗಿ 7 ಹೊಸ ಬುಲೆಟ್‌ ರೈಲು ಮಾರ್ಗಗಳಿಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌)ಯೊಂದನ್ನು ತಯಾರಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಆ ಬಳಿಕ ಯೋಜನೆಗೆ ತಗುಲಬಹುದಾದ ವೆಚ್ಚವನ್ನು ನಿರ್ಧರಿಸಲಾಗುವುದು ಎಂದು ನ್ಯಾಷನಲ್‌ ಹೈಸ್ಪೀಡ್‌ ರೈಲ್‌ ಕಾರ್ಪೊರೆಷನ್‌ನ ವ್ಯವಸ್ಥಾಪಕ ನಿರ್ದೇಶಕ ಅಚಲ್‌ ಖಾರೆ ತಿಳಿಸಿದ್ದಾರೆ.

ಪ್ರಸ್ತುತ ಪ್ರಗತಿಯಲ್ಲಿರುವ ಮುಂಬೈ- ಅಹಮದಾಬಾದ್‌ ರೈಲು ಯೋಜನೆ 508 ಕಿ.ಮೀ. ದೂರದ ಮಾರ್ಗವನ್ನು ಹೊಂದಿದೆ. ಈ ಯೋಜನೆಗೆ 1.8 ಲಕ್ಷ ಕೋಟಿ ರು. ವೆಚ್ಚವಾಗುವ ನಿರೀಕ್ಷೆ ಇದೆ.

Follow Us:
Download App:
  • android
  • ios