700 ಕೆಜಿ 'ಮಿಯಾವ್ ಮಿಯಾವ್' ಡ್ರಗ್‌ ವಶ, ಇದರ ಮೌಲ್ಯ 1400 ಕೋಟಿ ರೂಪಾಯಿ!

ಮುಂಬೈ ಪೊಲೀಸ್‌ನ ಅಪರಾಧ ವಿಭಾಗದ ಆಂಟಿ ನಾರ್ಕೋಟಿಕ್ ಸೆಲ್ (ಎಎನ್‌ಸಿ) ನಲಸೋಪಾರ ಘಟಕ ಭರ್ಜರಿ ದಾಳಿ ನಡೆಸಿದೆ. ಆರೋಪಿಗಳು ಕಾರ್ಖಾನೆಯಲ್ಲಿ ಡ್ರಗ್ಸ್‌ ತಯಾರಿಸಿ ನಂತರ ತಮ್ಮ ಏಜೆಂಟ್‌ಗಳ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕೋಟಿಗಟ್ಟಲೆ ಸಂಪಾದಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

700kg mephedrone worth Rs 1,400 crore seized by Mumbai Police san

ಮುಂಬೈ (ಆ. 4): ಮುಂಬೈ ಪೊಲೀಸರು ಪಾಲ್ಘರ್ ಜಿಲ್ಲೆಯ ನಲಸೋಪಾರದಲ್ಲಿ ಡ್ರಗ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ 1,400 ಕೋಟಿ ರೂಪಾಯಿ ಮೌಲ್ಯದ 700 ಕೆಜಿ ಮೆಫೆಡ್ರೋನ್ ವಶಪಡಿಸಿಕೊಂಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಮುಂಬೈ ಪೊಲೀಸ್‌ನ ಅಪರಾಧ ವಿಭಾಗದ ಆಂಟಿ ನಾರ್ಕೋಟಿಕ್ ಸೆಲ್ (ಎಎನ್‌ಸಿ) ನಲಸೋಪಾರ ಘಟಕದಲ್ಲಿ ದಾಳಿ ನಡೆಸಿದೆ ಎಂದು ಅವರು ಹೇಳಿದರು. ಆರೋಪಿಗಳು ಕಾರ್ಖಾನೆಯಲ್ಲಿ ಡ್ರಗ್ಸ್‌ ತಯಾರಿಸಿ ನಂತರ ತಮ್ಮ ಏಜೆಂಟ್‌ಗಳ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕೋಟಿಗಟ್ಟಲೆ ಸಂಪಾದಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. "ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಆಂಟಿ ನಾರ್ಕೋಟಿಕ್‌ ತಂಡವು ಕಾರ್ಖಾನೆಯ ಮೇಲೆ ದಾಳಿ ನಡೆಸಿತು, ಈ ಸಮಯದಲ್ಲಿ ನಿಷೇಧಿತ ಔಷಧವಾದ ಮೆಫೆಡ್ರೋನ್ ಅನ್ನು ತಯಾರಿಸಲಾಗುತ್ತಿರುವುದು ಕಂಡುಬಂದಿತ್ತ' ಎಂದು ಅವರು ಹೇಳಿದ್ದಾರೆ. ಎಲ್ಲಾ ನಾಲ್ಕೂ ಮಂದಿಯನ್ನೂ ಮುಂಬೈನಲ್ಲಿ ಬಂಧನ ಮಾಡಲಾಗಿದ್ದರೆ, ಒಬ್ಬ ವ್ಯಕ್ತಿಯನ್ನು ನಲಸೋಪಾರದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ನಗರ ಪೊಲೀಸರು ನಡೆಸಿದ ಅತ್ಯಂತ ದೊಡ್ಡ ಡ್ರಗ್ ದಾಳಿ ಇದಾಗಿದೆ. ಮೆಫೆಡ್ರೋನ್ ಅನ್ನು 'ಮಿಯಾಂವ್ ಮಿಯಾವ್' ಅಥವಾ ಎಂಡಿ ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ. ಇದು ಸಿಂಥೆಟಿಕ್ ಉತ್ತೇಜಕವಾಗಿದ್ದು, ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ (NDPS) ಕಾಯಿದೆಯಡಿಯಲ್ಲಿ ನಿಷೇಧಿಸಲಾದ ಸೈಕೋಟ್ರೋಪಿಕ್ ವಸ್ತುವಾಗಿದೆ. ನಲಸೋಪಾರದಿಂದ ಬಂಧಿತ ಆರೋಪಿ ಆರ್ಗಾನಿಕ್‌ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವೀಧರನಾಗಿದ್ದು, ತನ್ನ ಕೌಶಲ್ಯವನ್ನು ಬಳಸಿಕೊಂಡು ಡ್ರಗ್ಸ್ ತಯಾರಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಾದಕ ದ್ರವ್ಯ ನಿಗ್ರಹ ದಳದ ಡಿಸಿಪಿ ದತ್ತಾ ನಲವಾಡೆ ಅವರು ದಾಳಿ ಕುರಿತು ಮಾಹಿತಿ ನೀಡಿದ್ದು, ಮುಂಬೈ ಪೊಲೀಸ್‌ನ ಎಎನ್‌ಸಿ ಘಟಕವು ನಲಸೋಪಾರಾ ಪ್ರದೇಶದಲ್ಲಿ 703 ಕಿಲೋಗ್ರಾಂ ಎಂಡಿ ಡ್ರಗ್ಸ್ ವಶಪಡಿಸಿಕೊಂಡಿದೆ ಮತ್ತು ಐವರು ಡ್ರಗ್ ದಂಧೆಕೋರರನ್ನು ಬಂಧಿಸಿದೆ ಎಂದು ಹೇಳಿದರು. ವಶಪಡಿಸಿಕೊಂಡ ಮಾದಕ ವಸ್ತು ಸುಮಾರು 1,400 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಮೆಡಿಕಲ್‌ ಎಮೆರ್ಜೆನ್ಸಿ ಕಿಟ್‌ನಲ್ಲಿ ಡ್ರಗ್ಸ್‌ ಪೂರೈಕೆ..!

ಎಎನ್‌ಸಿ ಇಡೀ ರಾಜ್ಯದಾದ್ಯಂತ ಹಲವಾರು ತಿಂಗಳುಗಳಿಂದ ತನ್ನ ಮಾದಕ ದ್ರವ್ಯ ವಿರೋಧಿ ಅಭಿಯಾನವನ್ನು ನಡೆಸುತ್ತಿದೆ. ಏಪ್ರಿಲ್‌ನಲ್ಲಿ, ಪಾಲ್ಘರ್‌ನ ಅದೇ ಪ್ರದೇಶದಿಂದ ಆಂಟಿ ನಾರ್ಕೋಟಿಕ್ ಸೆಲ್‌ನ ತಂಡವು ಎಂಡಿ ಡ್ರಗ್‌ಗಳ ಮತ್ತೊಂದು ಮೂಟೆಗಳನ್ನು ವಶಪಡಿಸಿಕೊಂಡಿದ್ದ ಈ ವೇಳೆ ಮೂವರನ್ನು ಬಂಧಿಸಲಾಗಿದ್ದು, ಎಂಡಿ ಡ್ರಗ್ಸ್ ಸುಮಾರು 7.04 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ.

ಅಮಿತ್‌ ಶಾ ಎದುರು 30 ಸಾವಿರ ಕೇಜಿ ಡ್ರಗ್ಸ್‌ ನಾಶ

2010ರಿಂದ ಭಾರತದಲ್ಲಿ ಬ್ಯಾನ್‌: ಭಾರತದಲ್ಲಿ ಮೆಫೆಡ್ರೋನ್ ಡ್ರಗ್‌ ಅನ್ನು 2010ರ ಏಪ್ರಿಲ್‌ 7 ರಿಂದ ಬ್ಯಾನ್‌ ಮಾಡಲಾಗಿದೆ.  ಡ್ರಗ್ಸ್ ದುರ್ಬಳಕೆ ಕಾಯಿದೆ 1971 (ತಿದ್ದುಪಡಿ) ಆದೇಶ 2010 ಅನ್ನು ಸಂಸತ್ತು ಅಂಗೀಕಾರ ಮಾಡುವ ಮೂಲಕ ಈ ಡ್ರಗ್‌ಗೆ ನಿಷೇಧ ವಿಧಿಸಿತ್ತು. ಮೆಫೆಡ್ರೋನ್ ಮತ್ತು ಇತರ ಬದಲಿ ಕ್ಯಾಥಿನೋನ್‌ಗಳು, ವರ್ಗ B ಔಷಧಗಳನ್ನು 16 ಏಪ್ರಿಲ್ 2010 ರಿಂದ ತಯಾರಿಸಲಾಯಿತು. ನಿಷೇಧವು ಜಾರಿಗೆ ಬರುವ ಮೊದಲು, ಡ್ರಗ್ಸ್ ಆಕ್ಟ್ 1971ರ ಅಡಿಯಲ್ಲಿ ಮೆಫೆಡ್ರೋನ್ ದುರುಪಯೋಗ ಸೇರಿರಲಿಲ್ಲ. ಮೆಫೆಡ್ರೋನ್ ಸೇವನೆಯಿಂದ ಹೃದಯ ಬಡಿತ ವೇಗವಾಗವಾಗಲಿದೆ. ಭ್ರಮೆಗಳು ಉಂಟಾಗಲಿದ್ದು, ಮೂಗು ಸೋರುವಿಕೆ ಹಾಗೂ ಫಿಟ್ಸ್‌ ಕೂಡ ಉಂಟುಮಾಡಬಹುದು. ಒಟ್ಟಾರೆ ಕೊಕೆನ್‌ ರೀತಿಯ ಡ್ರಗ್‌ ಇದಾಗಿದೆ.

Latest Videos
Follow Us:
Download App:
  • android
  • ios