ಈತ ಅಂತಿಂತ ವ್ಯಕ್ತಿಯಲ್ಲ. ಕೋಟ್ಯಧಿಪತಿ. ಮಾಡುತ್ತಿದ್ದದ್ದು ಕಸಗುಡಿಸುವ ಕೆಲಸ. ಕಳೆದ 10 ವರ್ಷಗಳಿಂದ ಈತ ಬ್ಯಾಂಕ್‌ ಖಾತೆಗೆ ಹಾಕಿದ್ದ ತನ್ನ ಸಂಬಳವನ್ನೇ ಪಡೆದುಕೊಂಡಿಲ್ಲ. ತಾನು ಕೆಲಸ ಮಾಡುತ್ತಿದ್ದ ಪ್ರದೇಶದಲ್ಲಿ ಭಿಕ್ಷೆ ಬೇಡಿಕೊಂಡು, ತಾಯಿಯ ಪಿಂಚಣಿಯಲ್ಲಿ ಜೀವನ ಸಾಗಿಸುತ್ತಿದ್ದ. ಇಂಥ ವ್ಯಕ್ತಿ ಶನಿವಾರ ಟಿಬಿ ಕಾಯಿಲೆಯಿಂದ ಮೃತಪಟ್ಟಿದ್ದಾನೆ.

ಪ್ರಯಾಗ್‌ರಾಜ್‌ (ಸೆ.4): ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯಲ್ಲಿ ವಿಶಿಷ್ಟ ಮತ್ತು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಯಾಕೆಂದರೆ, ಈ ಸುದ್ದಿ ಓದಿದ ಯಾರಿಗಾದರೂ ಆಶ್ಚರ್ಯವಾಗುವುದು ಖಂಡಿತ. ಯಾಕೆಂದರೆ, ಸರ್ಕಾರಿ ನೌಕರಿ ಇದ್ದರೂ, ಒಂದು ದಿನವೂ ಆತ ಈ ನೌಕರಿಯಿಂದ ಬಂದ ಸಂಬಳವನ್ನು ಖರ್ಚು ಮಾಡಿರಲಿಲ್ಲ. ಕಳೆದ 10 ವರ್ಷಗಳಿಂದ ಈ ಹಣ ತೆಗೆದುಕೊಳ್ಳದ ಕಾರಣಕ್ಕಾಗಿ ಅಕೌಂಟ್‌ನಲ್ಲಿ 70 ಲಕ್ಷವಾಗಿ ಬೆಳೆದಿತ್ತು. ಭಿಕ್ಷೆ ಬೇಡುವ ಮೂಲಕ, ತಾಯಿಯ ಪಿಂಚಣಿ ಹಣದ ಮೂಲಕ ಜೀವನ ಸಾಗಿಸುತ್ತಿದ್ದ ಈತ ಟಿಬಿ ಕಾಯಿಲೆಗೂ ತುತ್ತಾಗಿದ್. ಹಾಗಿದ್ದರೂ ಈ ಹಣವನ್ನು ತೆಗೆದಿರಲಿಲ್ಲ. ಕೊನೆಗೆ ಇದೇ ಕಾಯಿಲೆಯಿಂದಾಗಿ ಶನಿವಾರ ಸಾವು ಕಂಡಿದ್ದಾರೆ. ಈತನ ಹೆಸರು ಧೀರಜ್‌. ಪ್ರಯಾಗ್‌ರಾಜ್‌ ಸಂಗಮ್‌ ಸಿಟಿಯಲ್ಲಿರುವ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಕಚೇರಿಯ ಕುಷ್ಠರೋಗ ವಿಭಾಗದ ಮಿಲಿಯನೇರ್‌ ವ್ಯಕ್ತಿ ಈತ. ಧೀರಜ್‌ನ ತಂದೆ ಕೂಡ ಇದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. 2012ರಲ್ಲಿ ತಂದೆ ಕೆಲಸದಲ್ಲಿರುವಾಗಲೇ ಸಾವು ಕಂಡಿದ್ದರು. ಆ ಬಳಿಕ ಅನುಕಂಪದ ಅಧಾರದ ಮೇಲೆ ಈ ಕೆಲಸ ಸಿಕ್ಕಿತ್ತು. ಧೀರಜ್‌ನ ತಂದೆ ಕೂಡ ಎಂದಿಗೂ ತನ್ನ ಸಂಬಳವನ್ನು ಖಾತೆಯಿಂದ ತೆಗೆದಿರಲಿಲ್ಲ. ಅದೇ ಹಾದಿಯಲ್ಲಿ ಸಾಗಿದ ಮಗ ಕೂಡ ಕಳೆದ 10 ವರ್ಷದಿಂದ ತನ್ನ ಸಂಬಳವನ್ನು ತೆಗೆದಿರಲಿಲ್ಲ.

ಧೀರಜ್ ಪ್ರಯಾಗರಾಜ್ ಜಿಲ್ಲಾ ಕುಷ್ಠರೋಗ ಇಲಾಖೆಯಲ್ಲಿ ಕಸಗುಡಿಸುವುದು ಮಾತ್ರವಲ್ಲ ವಾಚ್‌ಮನ್‌ ಆಗಿಯೂ ಕೆಲಸ ಮಾಡುತ್ತಿದ್ದರು. ಆದಾಯ ತೆರಿಗೆಯನ್ನೂ ಕೂಡ ಈತ ಕಟ್ಟುತ್ತಿದ್ದ. ಇದೇ ವರ್ಷದ ಆರಂಭದಲ್ಲಿ ಬ್ಯಾಂಕ್‌ನ ಅಧಿಕಾರಿಗಳು ಈತನ ಕಚೇರಿಗೆ ಬಂದು ಈತನನ್ನು ಹುಡುಕುವವರೆಗೂ, ಈತನೊಬ್ಬ ಕೋಟ್ಯಧಿಪತಿ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಧೀರಜ್‌ ಧರಿಸುವ ಕೊಳೆಯಾದ ಬಟ್ಟೆಗಳು ಹಾಗೂ ಆತನ ವೇಷಭೂಷಣ ನೋಡಿದ ಎಲ್ಲರೂ ಆತನನ್ನು ಭಿಕ್ಷುಕ ಎಂದುಕೊಂಡಿದ್ದರು. ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಗಳು ಕಾಲಿಗೆ ಬಿದ್ದು, ಗೋಗೆರೆದು ಹಣ ಪಡೆಯುತ್ತಿದ್ದ. ಅವರೂ ಕೂಡ ಈತ ಬಡವ ಇರಬೇಕು ಎಂದುಕೊಂಡು ಹಣ ನೀಡುತ್ತಿದ್ದರು. ಆದರೆ, ಬ್ಯಾಂಕ್‌ನ ಅಧಿಕಾರಿಗಳು ಬಂದು ಧೀರಜ್‌ನ ಬಗ್ಗೆ ತಿಳಿಸಿದಾಗ ಸ್ವತಃ ಆಸ್ಪತ್ರೆಯ ಸಿಬ್ಬಂದಿಗಳೇ ಹೌಹಾರಿಹೋಗಿದ್ದವು.

ಮನೆಯಲ್ಲೇ ಮೊಸಳೆ ಸಾಕಿದ ಭೂಪ: ಕಿಲ್ಲರ್‌ ಮೊಸಳೆಯೊಂದಿಗೆ ಆಟ

ಈತನನ್ನು ಹುಡುಕೊಂಡು ಬ್ಯಾಂಕ್‌ನ ನೌಕರರು ಕುಷ್ಠರೋಗದ ಆಸ್ಪತ್ರೆಗೆ ಬಂದಾಗ ಈತ ಭಿಕ್ಷುಕನಲ್ಲ, ಇಲ್ಲಯ ನೌಕರ ಹಾಗೂ ಆದಾಯ ತೆರಿಗೆ ಕಟ್ಟುವಷ್ಟು ಹಣ ಈತನಲ್ಲಿದೆ ಎನ್ನುವುದು ಅಲ್ಲಿನ ಸಿಬ್ಬಂದಿಗಳು ಹಾಗೂ ರೋಗಿಗಳಿ ತಿಳಿದಿದೆ. ಈ ವೇಳೆ ಸಹೋದ್ಯೋಗಿಗಳಿಗೆ ಧೀರಜ್ ಕೋಟ್ಯಾಧಿಪತಿ ಎಂಬುದು ಗೊತ್ತಾಗಿದೆ. 10 ವರ್ಷಗಳಿಂದ ಧೀರಜ್‌ ಒಂದೇ ಒಂದು ದಿನಕ್ಕೂ ಬ್ಯಾಂಕ್‌ನಿಂದ ತಮ್ಮ ಸಂಬಳದ ಹಣವನ್ನಿ ವಿತ್‌ಡ್ರಾ ಮಾಡಿಲ್ಲ ಎಂದು ಸ್ವತಃ ಬ್ಯಾಂಕರ್‌ಗಳು ಈ ವೇಳೆ ಹೇಳಿದ್ದರು. ಇಂಥ ಹೆಸರಿನ ವ್ಯಕ್ತಿಯೊಬ್ಬ ಇದ್ದಾನೆಯೇ ಅಥವಾ ಇವನ ಹೆಸರಿನಲ್ಲಿರುವ ಬೇರೆ ಅಕೌಂಟ್‌ ಇದಾಗಿರಬಹುದೇ ಎನ್ನುವ ಅನುಮಾನದಲ್ಲಿ ಬ್ಯಾಂಕರ್‌ಗಳು ಬಂದಿದ್ದರು.

ಭಾರತೀಯ ತಿನಿಸಿನ ಮೇಲೆ ವ್ಯಾಮೋಹ: ಮಗುವಿಗೆ ಪಕೋಡಾ ಎಂದು ಹೆಸರಿಟ್ಟ ಐರ್ಲೆಂಡ್‌ ದಂಪತಿ

ಧೀರಜ್‌ ಸ್ವಂತ ಮನೆ ಕೂಡ ಹೊಂದಿದ್ದಾನೆ. ಇದಲ್ಲದೆ, ತಾಯಿಯ ಹೆಸರಿಗೆ ಪಿಂಚಣಿ ಕೂಡ ಬರುತ್ತಿತ್ತು. 80 ವರ್ಷದ ತಾಯಿಯ ಜೊತೆ ವಾಸವಾಗಿದ್ದರು. ಎಂದಿಗೂ ಧೀರಜ್‌ಗೆ ತಾವು ಮದುವೆಯಾಗಬೇಕು ಎಂದು ಬಯಸಿರಲಿಲ್ಲ. ಮದುವೆಯಾದಲ್ಲಿ ಬರುವ ಹುಡುಗಿ ಹಣದ ಮೇಲೆ ಆಸೆ ಪಡಬಹುದು ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದ. ಸಹೋದ್ಯೋಗಿಗಳ ಪ್ರಕಾರ, ಧೀರಜ್ ಮಾನಸಿಕವಾಗಿ ಸ್ವಲ್ಪ ದುರ್ಬಲರಾಗಿದ್ದರು, ಆದರೆ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಕೆಲಸವನ್ನು ಪೂರ್ಣಗೊಳಿಸುತ್ತಿದ್ದರು. ಅವರ ಸರಳತೆ ಮತ್ತು ನೇರ ನುಡಿ ನೌಕರರಿಗೆ ಸದಾ ನೆನಪಿನಲ್ಲಿ ಉಳಿಯುತ್ತದೆ ಎನ್ನುತ್ತಾರೆ.