ಏಳು ವರ್ಷದ ಬಾಲಕಿಯ ವಿಡಿಯೋ ವೈರಲ್ ಏಕಾಂಗಿಯಾಗಿ ವಡೋದರಾದಿಂದ ಮುಂಬೈಗೆ ಬಂದ ಬಾಲಕಿ ವಿಮಾನದಲ್ಲಿ ಏಕಾಂಗಿಯಾಗಿ ಸಂಚಾರ
ಮುಂಬೈ (ಮಾ.29): ಪೋಷಕರಿಗೆ, ಅವರ ಮಕ್ಕಳು ಮೊದಲ ಬಾರಿಗೆ ಮಾಡುವ ಪ್ರತಿಯೊಂದೂ ವಿಚಾರಗಳು ವಿಶೇಷವಾಗಿದೆ. ಮಕ್ಕಳನ್ನು ಸ್ವತಂತ್ರರನ್ನಾಗಿ ಮಾಡುವುದು ಮತ್ತು ಜೀವನದಲ್ಲಿ ಹೊಸ ವಿಷಯಗಳನ್ನು ತಿಳಿದುಕೊಳ್ಳುವಂತೆ ಮಾಡುವುದು ಪೋಷಕರ ಜವಾಬ್ದಾರಿ. ತಮ್ಮ ಪುತ್ರಿಯನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಪೋಷಕರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ.
ಇಲ್ಲೊಬ್ಬರು ತಾಯಿ ಈ ಪ್ರಯತ್ನದ ಭಾಗವಾಗಿ 7 ವರ್ಷದ ಬಾಲಕಿಯನ್ನು ಏಕಾಂಗಿಯಾಗಿ ವಿಮಾನದಲ್ಲಿ ಕಳುಹಿಸಿದ್ದಾರೆ. ವಿಮಾನದಲ್ಲಿ ಮೊದಲ ಬಾರಿಗೆ ಒಂಟಿಯಾಗಿ ಪ್ರಯಾಣಿಸಿದ 7 ವರ್ಷದ ಬಾಲಕಿಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐದು ದಿನಗಳ ಹಿಂದೆ ಆಕೆಯ ತಾಯಿ ಇಷ್ನಾ ಬಾತ್ರಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಮಗಳ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಈ ವಿಡಿಯೋವನ್ನು ಇಲ್ಲಿಯವರೆಗೆ 4.9 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಹುಡುಗಿ ವಡೋದರಾದಲ್ಲಿ ವಿಮಾನ ಹತ್ತಿದ ನಂತರ ಮುಂಬೈನಲ್ಲಿ ಆಕೆಯ ತಾಯಿ ಆಕೆಯನ್ನು ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ತಾಯಿ ಅವಳನ್ನು ಭೇಟಿಯಾಗುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ.
ಹೆಂಡ್ತಿಯನ್ನು ಭೇಟಿಯಾಗೋಕೆ 18 ರಾತ್ರಿ ಸಮುದ್ರದಲ್ಲೇ ಏಕಾಂಗಿಯಾಗಿ ಸಂಚರಿಸಿದ..!
ಅನಾಯಾ (Anaaya) ಎಂಬ ಹೆಸರಿನ ಹುಡುಗಿ ಇಂಡಿಗೋ ವಿಮಾನದಲ್ಲಿ(IndiGo flight) ವಡೋದರಾದಿಂದ ಮುಂಬೈಗೆ ಏಕಾಂಗಿಯಾಗಿ ಹಾರಿದ್ದಾಳೆ ಎಂದು ವೀಡಿಯೊದ ಶೀರ್ಷಿಕೆ ತಿಳಿಸಿದೆ. ಅವಳು ತನ್ನ ಅಜ್ಜಿಯ ಮನೆಯಿಂದ ಹೀಗೆ ಏಕಾಂಗಯಾಗಿ ಮುಂಬೈಗೆ ಬಂದಿದ್ದಾಳೆ. ಈ ವೇಳೆ ಅಪ್ರಾಪ್ತರಿಗೆ ವಿಮಾನ ಹಾರಾಟದ ಕಾರ್ಯ ವಿಧಾನ ಮತ್ತು ವಿಮಾನ ಯಾನ ಸಂಸ್ಥೆಗಳ ಸುಗಮ ಪ್ರಕ್ರಿಯೆಯನ್ನು ಶ್ಲಾಘಿಸಿದರು.
ನನ್ನ 7 ವರ್ಷದ ಮಗು ವಿಮಾನದಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸಿದೆ. ಇಂತಹ ಸುಗಮ ಪ್ರಕ್ರಿಯೆಗಾಗಿ @indigo.6e ಗೆ ಧನ್ಯವಾದಗಳು. ಇಂಡಿಗೋ ಫ್ಲೈಟ್‌ನಲ್ಲಿ ಪ್ರಯಾಣಿಸುವಾಗ ಜೊತೆಯಲ್ಲಿ ಯಾರೋ ಇಲ್ಲದ ಅಪ್ರಾಪ್ತ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಪೋಷಕರು ಅಥವಾ ಪಾಲಕರಿಂದ ಫಾರ್ಮ್ ಅನ್ನು ಮೊದಲು ಭರ್ತಿ ಮಾಡುವುದು ಕಾರ್ಯವಿದೆ. ಇದರ ಬೆಲೆ 2200 ರೂಪಾಯಿಗಳು. ಅಲ್ಲದೆ, ಅಪ್ರಾಪ್ತರನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗುವ ಸಂಬಂಧಿತ ವ್ಯಕ್ತಿಯ ಗುರುತನ್ನು ಲಗತ್ತಿಸಬೇಕಾಗಿದೆ ಮತ್ತು ಆ ವ್ಯಕ್ತಿಯನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗೆ ಮಗುವನ್ನು ಕರೆದೊಯ್ಯಲು ಅನುಮತಿ ಇರುವುದಿಲ್ಲ.
ಯುದ್ಧ ಪೀಡಿತ ಉಕ್ರೇನ್‌ನಿಂದ ಒಂಟಿಯಾಗಿ 1400 ಕಿ.ಮೀ ಪ್ರಯಾಣಿಸಿದ 11ರ ಬಾಲಕ
ಬಾಲಕಿಯನ್ನು ವಿಮಾನ ನಿಲ್ದಾಣದ ನಿರ್ಗಮನದಲ್ಲಿ ಗ್ರೌಂಡ್ ಸ್ಟಾಫ್ ಬೆಂಗಾವಲು ಮಾಡಿದರು. ನಂತರ ಅವಳನ್ನು ವಿಮಾನದಲ್ಲಿದ್ದ ಗಗನಸಖಿಯರಿಗೆ ಹಸ್ತಾಂತರಿಸಲಾಯಿತು. ಬಂದಿಳಿದ ನಂತರ ಗಗನಸಖಿಯು ಆಗಮಿಸಿದ ವಿಮಾನ ನಿಲ್ದಾಣದ ಸಿಬ್ಬಂದಿಗೆ ಅವಳನ್ನು ಹಸ್ತಾಂತರಿಸಿದರು, ಅವರು ನನ್ನನ್ನು ಕರೆದು ವಿಮಾನ ನಿಲ್ದಾಣದ ಹೊರಗಿನ ಒಂದು ನಿರ್ದಿಷ್ಟ ಸ್ಥಳದಲ್ಲಿ ಅವರನ್ನು ಭೇಟಿಯಾಗಲು ಹೇಳಿದರು ಮತ್ತು ನಾನು ಅವಳನ್ನು ಸ್ವೀಕರಿಸಿದ ಫಾರ್ಮ್‌ನಲ್ಲಿ ಸಹಿ ಮಾಡುವ ಜೊತೆಗೆ ನನ್ನ ಗುರುತನ್ನು ತೋರಿಸಬೇಕಾಗಿತ್ತು ಎಂದು ಈ ಪ್ರಕ್ರಿಯೆಯನ್ನು ಅವರು ವಿವರಿಸಿದರು.
ಆದರೆ ನಾನು ನನ್ನ ಚಿಕ್ಕ ಹುಡುಗಿಯ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಮತ್ತು ಪೋಷಕರಾಗಿ ಅವಳನ್ನು ಸ್ವತಂತ್ರವಾಗಿಸಲು ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ನನಗೆ ಸಂತೋಷವಾಗುತ್ತದೆ. ಮುಂದಿನ ಬಾರಿ ನಾನು ವಿಮಾನದಲ್ಲಿ ದೀರ್ಘಾವಧಿಯ ಪ್ರಯಾಣವನ್ನು ಒಬ್ಬಂಟಿಯಾಗಿ ಮಾಡಬೇಕೆಂದು ಅವಳು ನನಗೆ ಹೇಳಿದಳು ಮತ್ತು ನನ್ನ ಹೃದಯ ತುಂಬಿ ಬಂದಿದೆ ಎಂದು ಅವರು ಬರೆದುಕೊಂಡಿದ್ದಾರೆ.