ಪ್ರವಾತಕ್ಕೆ ಉರುಳಿ ಬಿದ್ದ ಸೇನಾ ವಾಹನ, ಭೀಕರ ಅಪಘಾತ 26 ಯೋಧರು ಸಂಚರಿಸುತ್ತಿದ್ದ ಸೇನಾ ಬಸ್ ಲಡಾಖ್‌ನ ತುರ್ತುಕ್‌ನಲ್ಲಿರುವ ಶ್ಯೋಕ್ ನದಿಗೆ ಬಿದ್ದ ಬಸ್

ನವದೆಹಲಿ(ಮೇ.27): ಸೇನಾ ಯೋಧರು ತೆರಳುತ್ತಿದ್ದ ಬಸ್ ಅಪಘಾತಗೊಂಡು ಪ್ರಪಾತದಲ್ಲಿರುವ ನದಿ ಉರುಳಿದ ಘಟನೆ ಲಡಾಖ್‌ನ ತುರ್ತುಕ್‌ನಲ್ಲಿ ನಡೆದಿದೆ. ಪ್ರಪಾತದಲ್ಲಿ ಹರಿಯುತ್ತಿರುವ ಶ್ಯೋಕ್ ನದಿಗೆ ಬಸ್ ಉರುಳಿ ಬಿದ್ದಿದೆ. ಪರಿಣಾಮ 7 ಯೋಧರು ಸ್ಥಳದಲ್ಲೇ ಸಾವನ್ನಪ್ಪಿದ್ದು, 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಪರ್ತಾಪುರದ ಟ್ರಾನ್ಸಿಟ್ ಕ್ಯಾಂಪ್‌ನಿಂದ ತೆರಳಿದ ಬಸ್ ಥೋಯಿಸ್‌ನಿಂದ 25 ಕಿಲೋಮೀಟರ್ ದೂರದಲ್ಲಿ ಬಸ್ ಅಪಘಾತ ಸಂಭವಿಸಿದೆ. ಬಸ್‌ನಲ್ಲಿ 26 ಯೋಧರು ಪ್ರಯಾಣಿಸುತ್ತಿದ್ದರು. ಇಂದು ಬೆಳಗ್ಗೆ 9 ಗಂಟೆಗೆ ಘಟನೆ ನಡೆದಿದೆ. 50 ರಿಂದ 60 ಅಡಿ ಆಳಕ್ಕೆ ಬಿದ್ದಿರುವ ಕಾರಣ ಬಸ್‌ನಲ್ಲಿನ ಎಲ್ಲಾ ಪ್ರಯಾಣಿಕರಿಗೆ ಗಾಯಗಳಾಗಿದೆ. 

Soldier Died: ವರ್ಷದ ಹಿಂದೆ ಮದುವೆಯಾಗಿದ್ದ ವಿಜಯಪುರದ ಯೋಧ ಹುತಾತ್ಮ

ಬಸ್ ಸಂಪೂರ್ಣ ನಜ್ಜು ಗುಜ್ಜಾಗಿದೆ.ಗಾಯಗೊಂಡ ಯೋಧರನ್ನು ಪಾರ್ತಾಪುರದಲ್ಲಿರುವ 404 ಫೀಲ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರಗೊಂಡಿರುವ ಕಾರಣ ಲೇಹ್‌ನಲ್ಲಿ ಸೇನಾ ವೈದ್ಯಕೀಯ ಸಿಬ್ಬಂದಿಗಳ ತಂಡ ಪರ್ತಾಪುರ್‌ಗೆ ತೆರಳಿ ಚಿಕಿತ್ಸೆ ನೀಡುತ್ತಿದೆ. 

ಘಟನೆ ನಡೆದ ಬೆನ್ನಲ್ಲೇ ಸೇನೆ ತಕ್ಷಣವೇ ಸ್ಥಳಕ್ಕೆ ತೆರಳಿ ಎಲ್ಲಾ ಯೋಧರನ್ನು ಆಸ್ಪತ್ಪೆ ರವಾನಿಸದೆ. ಆದರೆ 7 ಯೋಧರು ಬದುಕುಳಿಯಲಿಲ್ಲ. ಗಂಭರವಾಗಿ ಗಾಯಗೊಂಡಿರುವ ಯೋಧರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಲವರನ್ನು ಸೇನಾ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. 

ಸಿಯಾಚಿನ್ ಭಾಗದಲ್ಲಿನ ಈ ಘಟನೆ ನಡೆದಿದೆ. ಸಿಯಾಚಿನ್ ವಿಶ್ವ ಅತೀ ಎತ್ತರದ ಯುದ್ಧಭೂಮಿಯಾಗಿದೆ. ಉತ್ತರ ಕಾಶ್ಮೀರದಲ್ಲಿರುವ ಸಿಯಾಚಿನ್ ಸಂಪೂರ್ಣ ಮಂಜಿನಿಂದ ಆವೃತ್ತವಾಗಿರುವ ಪ್ರದೇಶವಾಗಿದೆ. 1984ರಿಂದ ಭಾರತೀಯ ಸೇನೆ ಸೈನಿಕರನ್ನು ನಿಯೋಜಿಸಿದೆ. ಸುಮಾರು 20,000 ಅಡಿ ಎತ್ತರದಲ್ಲಿರುವ ಯುದ್ಧಭೂಮಿ ಇದಾಗಿದೆ.

ಆಫ್ಘನ್‌ನಿಂದ ಮರಳಿದ 80 ಉಗ್ರರ ಭಾರತಕ್ಕೆ ಕಳಿಸಲು ಪಾಕ್‌ ಸಿದ್ಧತೆ

ರಾಜಸ್ಥಾನದಲ್ಲಿ ಬೆಳಗಾವಿ ಯೋಧ ಸಾವು
ರಾಜಸ್ಥಾನದ ಬರ್ಮೇರದಲ್ಲಿ ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟಿದ್ದ ಬೆಳಗಾವಿ ತಾಲೂಕಿನ ಇದ್ದಲಹೊಂಡ ಗ್ರಾಮದ ಯೋಧ ಬಾಳಪ್ಪ ತಾನಾಜೀ ಮೊಹಿತೆ (32 ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಮದ್ರಾಸ್‌ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮೃತಯೋಧ ತಾಯಿ, ಪತ್ನಿ, ಮತ್ತು 5 ವರ್ಷದ ಮಗನನ್ನು ಅಗಲಿದ್ದು, ಇಡೀ ಗ್ರಾಮವೇ ದುಃಖದ ಮಡುವಲ್ಲಿ ಮುಳುಗಿತ್ತು. ಬರ್ಮೆರನಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಮೃತಪಟ್ಟಿದ್ದರು. ಭಾನುವಾರ ರಾತ್ರಿ ರಾಜಸ್ಥಾನದಿಂದ ಯೋಧನ ಪಾರ್ಥೀವ ಶರೀರವನ್ನು ತೆಗೆದುಕೊಂಡು ಬಂದು ಬೆಳಗಾವಿಯ ಮರಾಠಾ ಲಘು ಪದಾತಿದಳ (ಎಂಎಲ್‌ಐಆರ್‌ಸಿ) ಕ್ಯಾಂಪಸ್‌ನಲ್ಲಿ ಇರಿಸಲಾಗಿತ್ತು. ಸೋಮವಾರ ಬೆಳಗ್ಗೆ 9 ಗಂಟೆಗೆ ಸ್ವಗ್ರಾಮ ಇದ್ದಲಹೊಂಡಕ್ಕೆ ಸೇನಾ ವಾಹನದ ಮೂಲಕ ಸಾಗಿಸಿ, ಮಧ್ಯಾಹ್ನ 1.30ರ ಸುಮಾರಿಗೆ ವಿಧಿವಿಧಾನದಂತೆ, ಸಕಲ ಸರ್ಕಾರಿ ಗೌರವ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು