16326 ಕೇಸ್‌, 666 ಸಾವು: ಸಕ್ರಿಯ ಕೇಸ್‌ 1.73 ಲಕ್ಷಕ್ಕೆ ಇಳಿಕೆ

  • ದೇಶದಲ್ಲಿ ಹೊಸದಾಗಿ 16,326 ಕೋವಿಡ್‌ ಪ್ರಕರಣಗಳು ದಾಖಲು
  • ಒಟ್ಟು ಸಾವಿನ ಸಂಖ್ಯೆ 4.53 ಲಕ್ಷಕ್ಕೆ ಏರಿಕೆ
666 covid 19 death in India on October 23rd dpl

ನವದೆಹಲಿ(ಅ.24): ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 16,326 ಕೋವಿಡ್‌ ಪ್ರಕರಣಗಳು ದಾಖಲಾಗಿದೆ. ಸೋಂಕಿನಿಂದ 666 ಜನರು ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 4.53 ಲಕ್ಷಕ್ಕೆ ಏರಿಕೆಯಾಗಿದೆ.

ಸಕ್ರಿಯ ಪ್ರಕರಣಗಳು 1.73 ಲಕ್ಷಕ್ಕೆ ಇಳಿಕೆಯಾಗಿದ್ದು, ಇದು 233 ದಿನಗಳ ಕನಿಷ್ಠ ಸಂಖ್ಯೆಯಾಗಿದೆ. ಕೇರಳದಲ್ಲಿ ಇದುವರೆಗೂ ಸಂಭವಿಸಿದ ಸಾವಿನ ಸಂಖ್ಯೆಯಲ್ಲಿ ಪರಿಷ್ಕರಣೆ ಮಾಡಿ ಹೆಚ್ಚುವರಿಯಾಗಿ 292 ಜನರ ಸಾವು ಸೇರಿಸಿದ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆಯಲ್ಲಿ ದಿಢೀರ್‌ ಹೆಚ್ಚಳ ಮಾಡಲಾಗಿದೆ.

COVID19: ಭಾರತೀಯರ ಜೀವಿತಾವಧಿ 2 ವರ್ಷ ಇಳಿಕೆ

ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 99 ಸೋಂಕಿತರು ಸಾವಿಗೀಡಾಗಿದ್ದಾರೆ. ಸತತ 29 ದಿನಗಳಿಂದ ದೈನಂದಿನ ಪ್ರಕರಣಗಳ ಸಂಖ್ಯೆ 30 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 2,017 ಸೋಂಕಿತರು ಗುಣಮುಖರಾಗಿದ್ದು, 13.64 ಲಕ್ಷ ಮಾದರಿಗಳ ಪರೀಕ್ಷೆ ಮಾಡಲಾಗಿದೆ. ದೈನಂದಿನ ಪಾಸಿಟಿವಿಟಿ ದರ ಶೇ.1.20ರಷ್ಟುದಾಖಲಾಗಿದೆ.

ರಾಜ್ಯದಲ್ಲಿ(Karnataka) ಕೋವಿಡ್‌ ಪರೀಕ್ಷೆಗಳ(Covid Test) ಒಟ್ಟು ಸಂಖ್ಯೆ 5 ಕೋಟಿ ದಾಟಿದೆ. ಶನಿವಾರ 1.20 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು, ರಾಜ್ಯದಲ್ಲಿ ಈವರೆಗೆ 5,00,31,061 ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 29.85 ಲಕ್ಷ ಮಂದಿಯಲ್ಲಿ ಕೋವಿಡ್‌ ಸೋಂಕಿರುವುದು ದೃಢಪಟ್ಟಿದೆ. 

ಸರ್ಕಾರದ(Government)ಪ್ರಯೋಗಾಲಯದಲ್ಲಿ ಈವರೆಗೆ ಒಟ್ಟು 3.51 ಕೋಟಿ ಮತ್ತು ಖಾಸಗಿ ಪ್ರಯೋಗಾಲಯದಲ್ಲಿ 1.49 ಕೋಟಿ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಕಳೆದ ಆಗಸ್ಟ್‌ನಲ್ಲಿ 48.45 ಲಕ್ಷ ಕೋವಿಡ್‌ ಪರೀಕ್ಷೆ ನಡೆಸಿರುವುದು ತಿಂಗಳೊಂದರಲ್ಲಿ ನಡೆಸಿರುವ ಗರಿಷ್ಠ ಪರೀಕ್ಷೆಯಾಗಿದೆ.

Latest Videos
Follow Us:
Download App:
  • android
  • ios