ಗುವಾಹಟಿ [ಜ.24]: ದೇಶಾದ್ಯಂತ ಅಶಾಂತಿ ಸೃಷ್ಟಿಗೆ ಕೆಲ ಉಗ್ರ ಸಂಘಟನೆಗಳು ಹಾಗೂ ಭಯೋತ್ಪಾದಕರು ತೀವ್ರ ಯತ್ನ ನಡೆಸುತ್ತಿರುವ ಹೊತ್ತಿನಲ್ಲೇ, ಅಸ್ಸಾಂನಲ್ಲಿ ವಿವಿಧ ಬಂಡುಕೋರ ಸಂಘಟನೆಗಳ 644 ಸದಸ್ಯರು ಸರ್ಕಾರಕ್ಕೆ ಶರಣಾಗಿದ್ದಾರೆ. ಈ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವ ಮಹತ್ವದ ನಿರ್ಣಯವೊಂದನ್ನು ಕೈಗೊಂಡಿದ್ದಾರೆ. ಇಷ್ಟುಪ್ರಮಾಣದಷ್ಟುಉಗ್ರರು, ಉಗ್ರವಾದ ತ್ಯಜಿಸಿ, ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಇದೇ ಮೊದಲು.

ಸಲೂನ್‌ನಿಂದ ಹೊರಬಿದ್ದ ಸ್ಫೋಟಕ ಮಾಹಿತಿ, ಶಂಕಿತನ ಬಳಿಯಿದ್ದ ಇನ್ನೊಂದು ಬ್ಯಾಗ್ ಎಲ್ಲೋಯ್ತು?.

ಯುಎಲ್‌ಎಫ್‌ಎ(1), ಎನ್‌ಡಿಎಫ್‌ಡಿ, ಕೆಎಲ್‌ಒ, ಸಿಪಿಐ(ನಕ್ಸಲ್‌), ಎನ್‌ಎಸ್‌ಎಲ್‌ಎ, ಎಡಿಎಫ್‌ ಹಾಗೂ ಎನ್‌ಎಲ್‌ಎಫ್‌ಬಿ ಎಂಬ ಬಂಡುಕೋರ ಸಂಘಟನೆಗಳ 644 ಸದಸ್ಯರು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್‌ ಸಮ್ಮುಖದಲ್ಲಿ ತಮ್ಮ ಉಗ್ರ ಸಂಘಟನೆಗಳನ್ನು ತೊರೆದಿದ್ದಾರೆ. ಇವರೆಲ್ಲರಿಗೂ ಸರ್ಕಾರದಲ್ಲಿರುವ ಯೋಜನೆಗಳಡಿ ಪುನರ್ವಸತಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಆಶ್ವಾಸನೆ ನೀಡಿದ್ದಾರೆ. ಈ ಸಂದರ್ಭದಲ್ಲಿ 177 ಶಸ್ತ್ರಾಸ್ತ್ರಗಳು, 58 ಸಿಡಿಮದ್ದುಗಳು, 1.93 ಕೇಜಿ ತೂಕದ ಸ್ಫೋಟಕಗಳು, 52 ಗ್ರೆನೇಡ್‌ಗಳು, 71 ಬಾಂಬ್‌ಗಳು, 3 ರಾಕೆಟ್‌ ಲಾಂಚರ್‌ಗಳು, 306 ಸ್ಫೋಟಕ  ಸಾಧನಗಳು ಹಾಗೂ 15 ಚೂಪಾದ ಆಯುಧಗಳನ್ನು ಉಗ್ರರು ಸರ್ಕಾರಕ್ಕೆ ಒಪ್ಪಿಸಿದ್ದಾರೆ.

ಸಲೂನ್‌ನಿಂದ ಹೊರಬಿದ್ದ ಸ್ಫೋಟಕ ಮಾಹಿತಿ, ಶಂಕಿತನ ಬಳಿಯಿದ್ದ ಇನ್ನೊಂದು ಬ್ಯಾಗ್ ಎಲ್ಲೋಯ್ತು?..

ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸೋನೊವಾಲ್‌, ‘ಅಸ್ಸಾಂ ಅಭಿವೃದ್ಧಿಗಾಗಿ ಸಮಾಜದ ಮುಖ್ಯವಾಹಿನಿಗೆ ವಾಪಸ್ಸಾದ ನಿಮ್ಮ ಬಗ್ಗೆ ಜನ ಹೆಮ್ಮೆ ಪಡುತ್ತಾರೆ. ಅಲ್ಲದೆ, ಸಮಾಜದ ಮುಖ್ಯ ವಾಹಿನಿಯಿಂದ ಇನ್ನೂ ದೂರವೇ ಇರುವವರು, ಮುಂದೆ ಬರುವ ಮೂಲಕ ಭಾರತವನ್ನು ಶಕ್ತಗೊಳಿಸಲು ಮುಂದಾಗಬೇಕು’ ಎಂದು ಕರೆ ಕೊಟ್ಟರು.