ಮಂಗಳೂರು(ಜ.23): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆದಿತ್ಯ ರಾವ್ ವಿಚಾರಣೆಯ ವೇಳೆ ಬಹಳಷ್ಟು ಹೊತ್ತು ಬಾಯ್ಬಿಟ್ಟಿರಲಿಲ್ಲ. ಪೊಲೀಸ್ ವಿಚಾರಣೆ ಸಂದರ್ಭ ಸ್ಫೋಟಕ ಸತ್ಯ ಬಾಯ್ಬಿಟ್ಟಿದ್ದು, ಯೂಟ್ಯೂಬ್‌ನಲ್ಲಿ ಉಗ್ರರ ವಿಡಿಯೋ ನೋಡಿ ಬಾಂಬ್‌ ಸ್ಫೋಟಕ್ಕೆ ಸಂಚು ನಡೆಸಿದ್ದೆ ಎಂಬ ವಿಚಾರ ಆದಿತ್ಯರಾವ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಪಣಂಬೂರು ACP ಕಚೇರಿಯಲ್ಲಿ ಬಾಂಬರ್ ಆದಿತ್ಯರಾವ್ ವಿಚಾರಣೆ ತಡರಾತ್ರಿಯವರೆಗೂ ನಡೆದಿತ್ತು. ಪೊಲೀಸ್ ವಿಚಾರಣೆ ವೇಳೆ ಸ್ಫೋಟಕ ರಹಸ್ಯ ಬಹಿರಂಗವಾಗಿದ್ದು, ಪ್ರತೀಕಾರಕ್ಕಾಗಿಯೇ ವಿಧ್ವಂಸಕ ಕೃತ್ಯ ಎಸಗಿರೋದಾಗಿ ಆದಿತ್ಯರಾವ್ ಹೇಳಿದ್ದಾನೆ.

ವಿಮಾನ ನಿಲ್ದಾಣಗಳಲ್ಲಿ ಆರಂಭಿಕ ಹಂತದಲ್ಲಿ ಹ್ಯಾಂಡ್‌ಬ್ಯಾಗ್‌ ತಪಾಸಣೆಯೇ ಇಲ್ಲ

ಸರಿಯಾದ ಕೆಲಸವಿಲ್ಲದೆ ಮಾನಸಿಕವಾಗಿ‌ ಖಿನ್ನತೆಗೆ ಒಳಗಾಗಿದ್ದಾಗಿ ಹೇಳಿದ ಆದಿತ್ಯರಾವ್ ಯೂಟ್ಯೂಬ್ ನಲ್ಲಿ ಉಗ್ರರ ವಿಡಿಯೋ ನೋಡಿ‌ ಪ್ರಭಾವಿತನಾಗಿರೋದಾಗಿ ಒಪ್ಪಿಕೊಂಡಿದ್ದಾನೆ. ಬಾಂಬ್ ತಯಾರಿಕೆಗಾಗಿ ಎರಡು ತಿಂಗಳಿನಿಂದ ಪೂರ್ವಸಿದ್ಧತೆ ನಡೆಸಿದ್ದ ಆದಿತ್ಯರಾವ್ ಅದಕ್ಕಾಗಿ ಯೂಟ್ಯೂಬ್ ನಲ್ಲಿ ಬಾಂಬ್ ತಯಾರಿಕೆ ಬಗ್ಗೆ ಮಾಹಿತಿ ಪಡೆದಿದ್ದ.

ಸಮಾಜದ ವ್ಯವಸ್ಥೆ ಬಗ್ಗೆ ಆಕ್ರೋಶದಿಂದ ಕೃತ್ಯ ಎಸಗಿರೋದಾಗಿ ಆದಿತ್ಯರಾವ್ ಹೇಳಿದ್ದಾನೆ. ವಿಚಾರಣೆ ವೇಳೆ ಆದಿತ್ಯರಾವ್ ಹೇಳಿಕೆಗಳಿಂದ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.

'ನನ್ನ ಹೆಸರು ದೇಶಕ್ಕೇ ಗೊತ್ತಾಗಬೇಕು!'