Asianet Suvarna News Asianet Suvarna News

ರೈಲ್ವೆ ಕಚೇರಿಯ ಮೇಜಿನ ಮೇಲೇರಿ ಬಾಸ್‌ನಂತೆ ಹೆಡೆಬಿಚ್ಚಿ ಕುಳಿತ ನಾಗರಹಾವು

ನಾಗರಹಾವೊಂದು ರೈಲ್ವೆ ಕಚೇರಿಯೊಳಗೆ ನುಸುಳಿ ಸುಮಾರು  20 ನಿಮಿಷಗಳ ಕಾಲ ಅಲ್ಲಿನ ಮೇಜೊಂದರ ಮೇಲೆ ಹೆಡೆ ಬಿಚ್ಚಿ ಕುಳಿತಿದ್ದ  ಘಟನೆ ಕೋಟಾದ ರೈಲು ನಿಲ್ದಾಣದಲ್ಲಿ ನಡೆದಿದೆ.

6 Feet Cobra Caught Chilling At Officer Desk At Kota Railway Station akb
Author
Kota, First Published Jun 3, 2022, 9:43 AM IST

ಕೋಟಾ: ಇತ್ತೀಚಿನ ದಿನಗಳಲ್ಲಿ ಜನವಸತಿ ಪ್ರದೇಶಗಳಿಗೆ ನಾಗರಹಾವುಗಳು ಭೇಟಿ ನೀಡುತ್ತಿರುವುದು ಸಾಮಾನ್ಯವಾಗಿದೆ. ಅದರಲ್ಲೂ ಮಳೆ ಬಂದರೆ ಆಶ್ರಯಕ್ಕಾಗಿ ಮನೆಯ ಒಳಗಡೆ ನುಗ್ಗಲು ಯತ್ನಿಸುತ್ತವೆ. ಇವುಗಳು ಯಾವುದೇ  ಸದ್ದು ಮಾಡದ ಕಾರಣ ಇವುಗಳ ಇರುವಿಕೆಯನ್ನು ಪತ್ತೆ ಮಾಡುವುದು ಕಷ್ಟವಾಗಿದೆ. ಕೆಲ ದಿನಗಳ ಹಿಂದೆ ಹಾವೊಂದು ವ್ಯಕ್ತಿಯೊಬ್ಬರ ಶೂವೊಳಗೆ ಆಶ್ರಯ ಪಡೆದಿತ್ತು. ಶೂವನ್ನು ಕಾಲಿಗೆ ಹಾಕಲು ಯತ್ನಿಸಿದಾಗ ಹಾವಿರುವುದು ಬೆಳಕಿಗೆ ಬಂದಿತ್ತು.

ಅದೇ ರೀತಿ ಈಗ ಕೋಟಾದ ರೈಲ್ವೆ ಕಚೇರಿಯೊಂದರಲ್ಲಿ (Railway Office) ಅಧಿಕಾರಿಯೊಬ್ಬರ ಕೊಠಡಿಯ ಮೇಲೆ ಹಾವೊಂದು ಕಾಣಿಸಿಕೊಂಡು ಸಿಬ್ಬಂದಿಗಳನ್ನು ಭಯಗೊಳಿಸಿತು. ಕೋಟಾದ ರೈಲ್ವೆ ಕಚೇರಿಯ ಕಾರ್ನರ್‌ನಲ್ಲಿದ್ದ ಕೊಠಡಿಯ ಕಂಟ್ರೋಲ್‌ ಪ್ಯಾನೆಲ್‌ನ (control panel)ಮೇಜಿನ ಮೇಲೆ ಸುರುಳಿ ಸುತ್ತಿ ಹೆಡೆ ಬಿಚ್ಚಿ ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಕುಳಿತಿತ್ತು. 

 

ನಾಗರಹಾವು ಪ್ಯಾನಲ್ ರೂಮ್‌ಗೆ ನುಸುಳಿದ ನಂತರ ಕೊಠಡಿಯ ಮೂಲೆಯಲ್ಲಿರುವ ಮೇಜಿನ ಮೇಲೆ ಅಧಿಕಾರಿ ಕುಳಿತಿರುವಂತೆ ನಿಯಂತ್ರಣ ಫಲಕದ ಮೇಲೆ ಹೆಡೆ ಬಿಚ್ಚಿ ಕುಳಿತಿತ್ತು. ಕೋಟಾ ಡಿವಿಷನ್‌ನ ರಾವ್ತಾ ರಸ್ತೆ (ಆರ್‌ಡಿಟಿ) ನಿಲ್ದಾಣದ ನಿಯಂತ್ರಣ ಕೊಠಡಿಯಲ್ಲಿ ಈ ಘಟನೆ ನಡೆದಿದ್ದು, ಹೆಡೆಬಿಚ್ಚಿ ಕುಳಿತ ನಾಗರಹಾವಿನ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ದೇವರ ಕೋಣೆಗೆ ಬಂದ ವಿಷಕಾರಿ ಉಗುಳುವ ಹಾವು ಸೆರೆ

ನಾಗರಹಾವು ಮೇಜಿನ ಬಳಿ ಬಾಸ್‌ನಂತೆ ಕುಳಿತಿದೆ. ಅದೃಷ್ಟವಶಾತ್, ನಾಗರಹಾವಿನ ಉಪಸ್ಥಿತಿಯಿಂದಾಗಿ ಯಾವುದೇ ರೈಲು ಸೇವೆಗಳಿಗೆ ಅಡ್ಡಿಯಾಗಲಿಲ್ಲ. ಕೋಟಾ ವಿಭಾಗದ ರಾವ್ತಾ ರಸ್ತೆಯ (ಆರ್‌ಡಿಟಿ) ಪ್ಯಾನಲ್ ರೂಮ್‌ನಲ್ಲಿ ರೈಲ್ವೆ ಅಧಿಕಾರಿಯ ಮೇಜಿನ ಮೇಲೆ ಆರು ಅಡಿ ಉದ್ದ ನಾಗರಹಾವು ಕಾಣಿಸಿಕೊಂಡಿತ್ತು ಎಂದು ಬರೆದು ಈ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಸದಾ ಬಿಡುವಿಲ್ಲದೇ ಕಾರ್ಯನಿರ್ವಹಿಸುವ ರೈಲ್ವೆಯಲ್ಲಿ ಹಾವು ಯಾವುದೇ ಅಡಚಣೆಗೆ ಕಾರಣವಾಗಲಿಲ್ಲ. ಪ್ರತಿದಿನ ಈ ರೈಲು ನಿಲ್ದಾಣ ಸಾವಿರಾರು ಇಂಜಿನಿಯರಿಂಗ್/ವೈದ್ಯಕೀಯ ಆಕಾಂಕ್ಷಿಗಳಿಂದ ತುಂಬಿ ತುಳುಕುತ್ತಿದೆ.

ಹಾವು, ಚೇಳುಗಳ ತಾಣವಾದ ಉಡುಪಿ ಬಯಲು ರಂಗಮಂದಿರ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ದೈನಿಕ್ ಭಾಸ್ಕರ್ ಪ್ರಕಾರ, ಹಾವು ಸುಮಾರು 20 ನಿಮಿಷಗಳ ಕಾಲ ಹಾವು ಮೇಜಿನ ಮೇಲೆ ಕುಳಿತಿತ್ತು, ಅದನ್ನು ಪಾಯಿಂಟ್‌ಮ್ಯಾನ್ ಲಲಿತ್ ಬೌರಾಸಿ (Lalit Baurasi) ಸುರಕ್ಷಿತವಾಗಿ ರಕ್ಷಿಸಿದರು. ನಂತರ ಅದನ್ನು ಕಾಡಿನಲ್ಲಿ ಬಿಡಲಾಯಿತು. ಮಳೆ ಬಂದಾಗ ಆಶ್ರಯಕ್ಕಾಗಿ ಇತ್ತೀಚೆಗೆ ಹಾವುಗಳು ಜನವಸತಿ ಪ್ರದೇಶಗಳಿಗೆ ಬಂದು ಆಶ್ರಯ ಬಯಸುತ್ತಿದ್ದು, ಶೂ ಕಾರು ಬೈಕುಳ ಒಳಗೆ ಸೇರಿಕೊಂಡಿರುತ್ತವೆ. ಹೀಗಾಗಿ ಶೂ ಧರಿಸುವ ಮೊದಲು ಅಥವಾ ಕಾರನ್ನು ಚಾಲನೆ ಮಾಡುವ ಮೊದಲು ಒಮ್ಮೆ ತಪಾಸಣೆ ಮಾಡುವುದೊಳಿತು. 
 

Follow Us:
Download App:
  • android
  • ios