ಸ್ಯಾನಿಟೈಸರ್‌ನಿಂದ ಮದ್ಯ ತಯಾರಿಸುತ್ತಿದ್ದ ಗ್ಯಾಂಗ್ ತಮಿಳುನಾಡು ಪೊಲೀಸರಿಂದ 6 ಮಂದಿ ಬಂಧನ ಬಂಧಿತರಿಂದ 300 ಲೀಟರ್ ಸ್ಯಾನಿಟೈಸರ್, ಖಾಲಿ ಬಾಟಲ್‌ಗಳು, ಟಾಟಾ ಏಸ್ ವಾಹನವನ್ನು ಜಪ್ತಿ
ಚೆನ್ನೈ (ಮೇ.21): ಸ್ಯಾನಿಟೈಸರ್‌ನಿಂದ ಮದ್ಯ ತಯಾರಿಸುತ್ತಿದ್ದ ಗ್ಯಾಂಗ್‌ವೊಂದನ್ನು ಭೇದಿಸಿರುವ ತಮಿಳುನಾಡು ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 300 ಲೀಟರ್ ಸ್ಯಾನಿಟೈಸರ್, ಖಾಲಿ ಬಾಟಲ್‌ಗಳು, ಟಾಟಾ ಏಸ್ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಮದ್ಯ ಸೇವನೆ ಮಾಡಬಹುದೇ? ಇಲ್ಲಿದೆ ಉತ್ತರ .
ಕುಡಲೂರು ಜಿಲ್ಲೆಯ ರಾಮನಾಥನ್ ಕುಪ್ಪಂ ಎಂಬಲ್ಲಿ ಸ್ಯಾನಿಟೈಸರ್ ಮೂಲಕ ಅಕ್ರಮವಾಗಿ ಲಿಕ್ಕರ್ ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು, ಭರ್ಜರಿ ಕಾರಾರಯಚರಣೆ ನಡೆಸಿ 6 ಮಂದಿಯನ್ನು ಬಂಧಿಸಿದ್ದಾರೆ.
ಸೋಂಕು ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಮೇ 24ರವರೆಗೆ ಲಾಕ್‌ಡೌನ್ ಜಾರಿ ಮಾಡಲಾಗಿದ್ದು, ಮದ್ಯದಂಗಡಿಗಳು ಮುಚ್ಚಿವೆ. ಇದನ್ನೇ ಈ ಗ್ಯಾಂಗ್ ಬಂಡವಾಳವಾಗಿಸಿಕೊಂಡಿತ್ತು ಎನ್ನಲಾಗಿದೆ.
