ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಮದ್ಯ ಸೇವನೆ ಮಾಡಬಹುದೇ? ಇಲ್ಲಿದೆ ಉತ್ತರ
ದೇಶಾದ್ಯಂತ ಈಗಾಗಲೇ ಲಸಿಕೆ ಅಭಿಯಾನ ಆರಂಭಗೊಂಡಿದೆ. ಕೊರೊನಾ ವೈರಸ್ ನಿಂದ ರಕ್ಷಣೆ ಪಡೆಯಲು ಅಪಾರ ಸಂಖ್ಯೆಯಲ್ಲಿ ಜನರು ಲಸಿಕಾಕರಣ ಕೇಂದ್ರಕ್ಕೆ ಧಾವಿಸುತ್ತಿದ್ದಾರೆ. ಏತನ್ಮಧ್ಯೆ ಲಸಿಕೆ ಹಾಗೂ ಮದ್ಯ ವಿಷಯ ಅತಿ ಹೆಚ್ಚು ಪ್ರಶ್ನೆಗೆ ಒಳಗಾದ ವಿಷಯವಾಗಿ ಹೊರಹೊಮ್ಮುತ್ತಿದೆ. ಕೊವಿಡ್-19 ಲಸಿಕೆ ಹಾಕಿಸಿಕೊಳ್ಳುವುದರ ಅರ್ಥ No Alcohol? ಕೊವಿಡ್ -19 ಲಸಿಕೆ ಹಾಕಿಸಿಕೊಂಡ ಬಳಿಕ ಅಲ್ಕೋಹಾಲ್ ಸೇವನೆಯಿಂದ ದೂರ ಉಳಿಯಬೇಕೆ?
ಈ ಕುರಿತು ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವಾಲಯ, "ವ್ಯಾಕ್ಸಿನ್ ನ ಮೊದಲ ಪ್ರಮಾಣ ಹಾಕಿಸಿಕೊಂಡಿರುವಿರಿ ಎಂಬ ಒಂದೇ ಕಾರಣಕ್ಕೆ ಅಲ್ಕೋಹಾಲ್ ನಿಂದ ದೂರ ಉಳಿಯುವ ಅವಶ್ಯಕತೆ ಇಲ್ಲ. ಏಕೆಂದರೆ ಅಲ್ಕೋಹಾಲ್ ಸ್ವತಃ ತಾನೇ ಕೊರೊನಾ ವೈರಸ್ ಸೋಂಕಿನ ವಿರುದ್ಧ ವ್ಯಾಕ್ಸಿನ್ ಪ್ರಭಾವವನ್ನು ಕಡಿಮೆ ಮಾಡುವುದಿಲ್ಲ" ಎಂದಿದೆ
ಅಲ್ಕೋಹಾಲ್ ಹಾಗೂ ವ್ಯಾಕ್ಸಿನ್ ಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರ, "ತಜ್ಞರು ಹೇಳುವ ಪ್ರಕಾರ ಅಲ್ಕೋಹಾಲ್, ವ್ಯಾಕ್ಸಿನ್ ಪ್ರಭಾವವನ್ನು ಕಡಿಮೆಗೊಳಿಸುತ್ತದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ" ಎಂದು ಹೇಳಿದೆ. ಆದರೆ ಆಲ್ಕೋಹಾಲ್ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ ಎಂದು ತಿಳಿಸಿದೆ.
ನಿಯಂತ್ರಕ ಸಂಸ್ಥೆಗಳು ಲಸಿಕೆ ಹಾಗೂ ಅಲ್ಕೋಹಾಲ್ ಕುರಿತು ಏನು ಹೇಳುತ್ತವೆ?
ಅಮೆರಿಕಾದ ಆರೋಗ್ಯ ಸಂಸ್ಥೆ CDC ಆಗಲಿ ಅಥವಾ ಸರ್ಕಾರ ಆಗಲಿ ಅಥವಾ ಬ್ರಿಟನ್ ನ ಹೆಲ್ತ್ ಇಂಗ್ಲೈಂಗ್ ಈ ರೀತಿಯ ಯಾವುದೇ ಸಾಧ್ಯತೆಗಳ ಬಗ್ಗೆ ತಿಳಿಸಿಲ್ಲ.
ವ್ಯಾಕ್ಸಿನ್ ಡೋಸ್ ಹಾಕಿಸಿಕೊಂಡ ಬಳಿಕ, ನಡುವೆ ಅಥವಾ ಮೊದಲು ಅಲ್ಕೋಹಾಲ್ ಸೇವಿಸಬಹುದೇ? ಎಂಬ ಪ್ರಶ್ನೆ ಕೇಳಲಾಗಿ, ಬ್ರಿಟನ್ ನ ಆರೋಗ್ಯ ನಿಯಂತ್ರಕ ಸಂಸ್ಥೆ ಮೆಡಿಸಿನ್ಸ್ ಅಂಡ್ ಹೆಲ್ತ್ ಕೆಯರ್ ಪ್ರಾಡಕ್ಟ್ಸ್ ರೆಗ್ಯುಲೆಟರಿ ಏಜೆನ್ಸಿ, "ಅಲ್ಕೋಹಾಲ್, ಕೊವಿಡ್ ವ್ಯಾಕ್ಸಿನ್ ನ ಪ್ರಭಾವ ಪ್ರಭಾವಿತಗೊಳ್ಳುತ್ತದೆ ಅಥವಾ ಹಸ್ತಕ್ಷೇಪ ಮಾಡುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ. ಈ ಕುರಿತು ಆರೋಗ್ಯ ಚಿಕಿತ್ಸಕರ ಜೊತೆಗೆ ಮಾತುಕತೆ ನಡೆಸಬೇಕು ಎಂಬುದನ್ನು ಸಲಹೆ ನೀಡುತ್ತೇವೆ" ಎಂದಿದೆ.
ಲಸಿಕಾಕರಣದ ಅನುಭವದಿಂದ ಉತ್ಪನ್ನಗೊಂಡ ಸಾಕ್ಷ್ಯಗಳು ಏನನ್ನು ಹೇಳುತ್ತವೆ?
ಈ ಕುರಿತು ಬ್ಲೂಮ್ ಬರ್ಗ್ ಸಂಗ್ರಹಿಸಿರುವ ದತ್ತಾಂಶಗಳ ಪ್ರಕಾರ, ಮಾರ್ಚ್ 31ರವರೆಗೆ ಒಟ್ಟು 141 ದೇಶಗಳಲ್ಲಿ ಹಲವು ಕೊವಿಡ್ 19 ವ್ಯಾಕ್ಸಿನ್ ಗಳ 574 ಮಿಲಿಯ ಗೂ ಅಧಿಕ ಡೋಸ್ ಗಳನ್ನು ಜನರಿಗೆ ನೀಡಲಾಗಿದೆ.
ಅಮೇರಿಕಾದಲ್ಲಿ ಕೊವಿಡ್-19 ವ್ಯಾಕ್ಸಿನ್ ನ 148 ಮಿಲಿಯನ್ ಡೋಸ್ ಗಳನ್ನು ನೀಡಲಾಗಿದೆ ಹಾಗೂ ಒಟ್ಟು ಜನಸಂಖ್ಯೆಯ ಶೇ. 23 ರಷ್ಟು ಜನರನ್ನು ಕವರ್ ಮಾಡಲಾಗಿದೆ. ಬ್ರಿಟನ್ ನಲ್ಲಿ 35 ಮಿಲಿಯನ್ ಪ್ರಮಾಣಗಳನ್ನೂ ಜನರು ಬಳಸಿದ್ದಾರೆ. ಅಂದರೆ, ಸುಮಾರು ಶೇ.26 ರಷ್ಟು ಜನಸಂಖ್ಯೆಯನ್ನು ಕವರ್ ಮಾಡಲಾಗಿದೆ.
ಭಾರತದ ಕುರಿತು ಹೇಳುವುದಾದರ ಇದುವರೆಗೆ ಸುಮಾರು 62 ಮಿಲಿಯನ್ ಕೊವಿಡ್-19 ಲಸಿಕಯ ಡೋಸ್ ಬಳಕೆಯಾಗಿವೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಇದುವರೆಗೆ ಅಲ್ಕೋಹಾಲ್ ಸೇವನೆಯ ಫಲಿತಾಂಶಗಳಲ್ಲಿ ವ್ಯಾಕ್ಸಿನ್ ನ ಪ್ರಭಾವದಲ್ಲಿ ಇಳಿಕೆಯಾದ ಯಾವುದೇ ವರದಿ ಇಲ್ಲ.
ವಿಶ್ವಾದ್ಯಂತ ದೊಡ್ಡ ಸಂಖ್ಯೆಯಲ್ಲಿ ವೈದ್ಯರು, ಅಲ್ಕೋಹಾಲ್ ಆಂಟಿಬಾಡಿಗಳ ನಿರ್ಮಾಣದಲ್ಲಿ ಅಡೆತಡೆ ಉಂಟುಮಾಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ವ್ಯಾಕ್ಸಿನ್ ಹಾಕಿದ ಸಮಯದಲ್ಲಿ ಆಲ್ಕೋಹಾಲ್ ಸೇವನೆ ಮಾಡದೆ ಇರುವುದು ಉತ್ತಮ ಎಂದು ತಿಳಿಸಿದೆ.