5ನೇ ತರಗತಿ ವಿದ್ಯಾರ್ಥಿನಿಗೆ ಚಿತ್ರಹಿಂಸೆ, ಕಳ್ಳತನ ಶಂಕೆ ಮೇಲೆ ಚಪ್ಪಲಿ ಹಾರ ಹಾಕಿ ಮೆರವಣಿಗೆ!
5ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ. ಹಾಸ್ಟೆಲ್‌ನಲ್ಲಿ ಕಳ್ಳತನ ಮಾಡಿದ್ದಾಳೆ ಅನ್ನೋ ಶಂಕೆ ಮೇಲೆ ವಿದ್ಯಾರ್ಥಿನಿಗೆ ಚಪ್ಪಲಿ ಹಾರ ಹಾಕಿ ಮರವಣಿಗೆ ಮಾಡಲಾಗಿದೆ. ವಿದ್ಯಾರ್ಥಿನಿಗೆ ಚಿತ್ರಹಿಂಸೆ ನೀಡಲಾಗಿದೆ.

ಇಂದೋರ್(ಡಿ.07): ಹಾಸ್ಟೆಲ್‌ನಲ್ಲಿರುವ ವಾರ್ಡನ್ ಮಕ್ಕಳಿಗೆ ಶಿಕ್ಷಕರು, ರಕ್ಷಕರು, ಆಪ್ತರು ಆಗಿರುತ್ತಾರೆ. ಮಕ್ಕಳು ತಪ್ಪು ಮಾಡಿದಾಗ ಬುದ್ದಿ ಹೇಳಿ, ತಿಳಿ ಹೇಳುವ ಕೆಲಸವೂ ಇವರಿಗಿದೆ. ಆದರೆ 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಹಾಸ್ಟೆಲ್ ವಾರ್ಡ್ ಕ್ರೌರ್ಯ ಮೆರೆದಿದ್ದಾರೆ. ಹಾಸ್ಟೆಲ್‌ನಲ್ಲಿನ ಕಳ್ಳತನವನ್ನು ಈ ವಿದ್ಯಾರ್ಥಿನಿ ಮಾಡಿದ್ದಾಳೆ ಎಂಬ ಶಂಕೆ ಮೇಲೆ, ವಿದ್ಯಾರ್ಥಿನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಘಟನೆ ಮಧ್ಯಪ್ರದೇಶದ ದಮ್ಜಿಪುರ ಗ್ರಾಮದಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ನಡೆದಿದೆ. ಹಾಸ್ಟೆಲ್‌ನಲ್ಲಿದ್ದ ಹಣ ಕಳ್ಳತನವಾಗಿದೆ. ಈ ಹಣ 5ನೇ ತರಗತಿ ವಿದ್ಯಾರ್ಥಿನಿ ಕದ್ದಿದ್ದಾಳೆ ಎಂದು ವಾರ್ಡನ್ ಆರೋಪಿಸಿದ್ದಾರೆ. ಶಂಕೆ ಮೇಲೆ ವಿದ್ಯಾರ್ಥಿನಯನ್ನು ಕರೆಸಿ ಹಾಸ್ಟೆಲ್‌ನಲ್ಲಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ.
ವಿದ್ಯಾರ್ಥಿನಿ ಪೋಷಕರಿಗೆ ಮಾಹಿತಿ ತಿಳಿದು ಕೂಡಲೆ ತಕ್ಷಣವೇ ಹಾಸ್ಟೆಲ್‌ಗೆ ತೆರಳಿ ವಿದ್ಯಾರ್ಥಿನಿಯನ್ನು ಕರೆದುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ವಿದ್ಯಾರ್ಥಿನಿ ಪೋಷಕರ ದೂರು ಪಡೆದ ಜಿಲ್ಲಾಧಿಕಾರಿ ಅಮನವೀರ ಸಿಂಗ್ ತನಿಖೆಗೆ ಆದೇಶಿಸಿದ್ದಾರೆ. ಇಷ್ಟೇ ಅಲ್ಲ ತಪ್ಪತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ನಾಲ್ವರು ವಿದ್ಯಾರ್ಥಿಗಳಿಗೆ ಥಳಿತ; ಶಿಕ್ಷಕರ ವಿರುದ್ಧ ಕ್ರಮಕ್ಕೆ ಪೋಷಕರ ಆಗ್ರಹ
ಈ ಘಟನೆ ನಡೆದು ಕೆಲ ದಿನಗಳು ಆಗಿವೆ. ಮಗಳನ್ನು ಭೇಟಿ ಮಾಡಲು ಹಾಸ್ಟೆಲ್‌ಗೆ ಬಂದಾಗ ವಿಚಾರ ತಿಳಿಯಿತು. ನನ್ನ ಮಗಳು ತಪ್ಪು ಮಾಡಿದ್ದರೆ ಅದಕ್ಕೆ ಕೆಲ ವಿಧಾನಗಳಿವೆ. ಮಕ್ಕಳಿಗೆ ಈ ರೀತಿಯ ಶಿಕ್ಷೆ ನೀಡಲು ಅಧಿಕಾರವಿಲ್ಲ. ಇಷ್ಟೇ ಅಲ್ಲ ಬುದ್ದಿ ಹೇಳಬೇಕಾದ ವಾರ್ಡನ್ ಹಾಗೂ ಹಾಸ್ಟೆಲ್ ಸಿಬ್ಬಂದಿಗಳು ಈ ರೀತಿ ಮಾಡಿರುವ ಅಪರಾಧ. ಈ ವಿಚಾರವನ್ನು ಇಲ್ಲಿಗೆ ಬಿಡಲು ನಾನು ಸಿದ್ಧಿನಿಲ್ಲ. ವಿದ್ಯಾರ್ಥಿನಿಗೆ ಆಗಿರುವ ಮಾನಸಿಕ ಹಿಂಸೆಯನ್ನು ಯಾರಾದರೂ ಗಮನಿಸಿದ್ದೀರಾ ಎಂದು ವಿದ್ಯಾರ್ಥಿನಿ ತಂದೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಮಗಳ ಮುಖಕಕ್ಕೆ ಪ್ರೇತದ ರೀತಿಯಲ್ಲಿ ಪೈಂಟ್ ಬಳಿಯಲಾಗಿದೆ. ಚಪಲ್ಲಿ ಹಾರ ಹಾಕಿ ಸಂಪೂರ್ಣ ಹಾಸ್ಟೆಲ್‌ನಲ್ಲಿ ಮೆರವಣಿಗೆ ಮಾಡಲಾಗಿದೆ. ಇದು ಕ್ರೌರ್ಯ. ಬುಡುಕಟ್ಟು ಬಾಲಕಿ ಮೇಲೆ ಮಾಡಿದ ಕ್ರೌರ್ಯ. ನನ್ನ ಮಗಳ ಮೇಲೆ ಮತ್ತೊಬ್ಬ ವಿದ್ಯಾರ್ಥಿನಿಯ 400 ರೂಪಾಯಿ ಕದ್ದಿದ್ದಾಳೆ ಅನ್ನೋ ಆರೋಪ ಹೊರಿಸಿದ್ದಾರೆ. ಈ ಕುರಿತು ಆಂತರಿಕ ತನಿಖೆ ನಡೆಸಿ ತಪ್ಪಿದ್ದರೆ ಮಗಳಿಗೆ ಬುದ್ದಿ ಹೇಳಬೇಕಿತ್ತು. ಆದರೆ ಈ ರೀತಿ ಮಾಡುವುದು ಅಕ್ಷ್ಯಮ್ಯ ಅಪರಾಧ ಎಂದು ವಿದ್ಯಾರ್ಥಿನಿ ತಂದೆ ಹೇಳಿದ್ದಾರೆ.
ತಮಾಷೆಗೆಂದು ಅಪರಿಚಿತರ ಮದ್ವೆಗೆ ಹೋಗಿ ಊಟ ಮಾಡದಿರೀ ಜೋಕೆ... ಇಲ್ಲೇನಾಯ್ತು ನೋಡಿ
ಜಿಲ್ಲಾಧಿಕಾರಿ ತನಿಖೆಗ ಆದೇಶಿಸಿದ ಬೆನ್ನಲ್ಲೇ ಹಾಸ್ಟೆಲ್ ವಾರ್ಡನ್ ನುಣುಚಿಕೊಳ್ಳುವ ಯತ್ನ ಮಾಡಿದ್ದಾರೆ. ತನಿಖೆ ಆದೇಶದ ಬೆನ್ನಲ್ಲೇ ವಾರ್ಡನ್ ಯಾರ ಕೈಗೂ ಸಿಗದೆ ನಾಪತ್ತೆಯಾಗಿದ್ದಾರೆ. ಇತ್ತ ದಮ್ಜಿಪುರ ಗ್ರಾಮದಲ್ಲಿ ಆಕ್ರೋಶ ವ್ಯಕ್ತವಾಗಿದೆ. ವಾರ್ಡನ್ ಹಾಗೂ ಹಾಸ್ಟೆಲ್ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.
ಮಗಳು ಮಾನಸಿಕವಾಗಿ ಕುಗ್ಗಿಹೋಗಿದ್ದಾಳೆ. ಈ ರೀತಿಯ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ತಕ್ಷಣವೇ ಕ್ರಮ ಜರುಗಿಸಬೇಕು ಎಂದು ವಿದ್ಯಾರ್ಥಿನಿ ತಂದೆ ಆಗ್ರಹಿಸಿದ್ದಾರೆ.