Asianet Suvarna News Asianet Suvarna News

ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ನವ ಜೋಡಿಗಳಿಗೆ ಶುಭಹಾರೈಕೆ!

ಇದೊಂದು ವಿಶೇಷ ಸಾಮೂಹಿಕ ವಿವಾಹಮೋಹೋತ್ಸವ. ತಂದೆ ಕಳೆದುಕೊಂಡ 551 ಯುವತಿಯರ ಸಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಮಹೋತ್ಸವದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡು ನವ ಜೋಡಿಗಳಿಗೆ ಶುಭಹಾರೈಸಿದ್ದಾರೆ.
 

551 girls tied knot at mega event in Gujarat PM modi attend mass wedding ceremony and blessed couples ckm
Author
First Published Nov 6, 2022, 9:18 PM IST

ಅಹಮ್ಮದಾಬಾದ್(ನ.06): ಪ್ರಧಾನಿ ನರೇಂದ್ರ ಮೋದಿ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಗುಜರಾತ್‌ನ ಭವ್ನಗರದಲ್ಲಿ ಸಾಮೂಹಿಕ ವಿವಾಹ ಮಹೋತ್ಸ ನಡೆದಿದೆ. ಈ ಕಾರ್ಯಕ್ರಮದಲ್ಲಿ ತಂದೆ ಕಳೆದುಕೊಂಡ 551 ಯುವತಿಯರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಈ ವಿಶೇಷ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ. ಜವಾಹರ್ ಮೈದಾನದಲ್ಲಿ ಈ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಮಕ್ರಮ ಆಯೋಜಿಸಲಾಗಿತ್ತು. ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಈ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನವ ಜೋಡಿಗಳಿಗೆ ಶುಭ ಹಾರೈಸಿದರು.

ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಹೊಸ ಬದುಕಿಗೆ ಕಾಲಿಟ್ಟ ನವ ಜೋಡಿಗಳು ತಮ್ಮ ಜೀವನದಲ್ಲಿ ಅತ್ಯಂತ ಯಶಸ್ವಿಯಾಗಲೆಂದು ಮೋದಿ ಹಾರೈಸಿದರು. ಇದೇ ವೇಳೆ ನವ ಜೋಡಿಗಳಿಗೆ ಕಿವಿ ಮಾತು ಹೇಳಿದ್ದಾರೆ. ಇಲ್ಲಿ ಮದುವೆಯಾಗಿರುವ ನವ ಜೋಡಿಗಳು, ಮನೆಯವರ ಒತ್ತಾಯಕ್ಕೆ, ಸಂಬಂಧಿಕರ ಒತ್ತಾಯಕ್ಕೆ ಮತ್ತೆ ಅದ್ದೂರಿ ಮದುವೆಯಾಗಬೇಡಿ. ಸುಖಾಸುಮ್ಮನೆ ಹಣ ಪೋಲು ಮಾಡಬೇಡಿ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದರಿ ಎಂದು ಮೋದಿ ಹೇಳಿದ್ದಾರೆ.

ದ್ವೇಷ ಹರಡುವ, Gujarat ಮಾನಹಾನಿ ಮಾಡುವವರನ್ನು ಹೊರಹಾಕಲಾಗುತ್ತದೆ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಮುಂಬರುವ ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಇಂದು ಕಪ್ರಾಡದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿ ಮೋದಿ ಮಾತನಾಡಿದ್ದಾರೆ. ಗುಜರಾತ್ ಚುನಾವಣಾ ಪ್ರಚಾರಕ್ಕಾಗಿ ಮೋದಿ ತವರೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಈ ವೇಳೆ ಕಾಂಗ್ರೆಸ್ ಹಾಗೂ ಆಪ್ ವಿರುದ್ಧ ಹರಿಹಾಯ್ದಿದ್ದಾರೆ.

 

 

ಪಾಕ್‌ ಹಿಂದೂ ನಿರಾಶ್ರಿತರಿಂದ ಗುಜರಾತಲ್ಲಿ ಮತಚಲಾವಣೆ: ಇದೇ ಮೊದಲು
5 ವರ್ಷಗಳಿಂದ ಭಾರತದ ಪೌರತ್ವ ಪಡೆದಿರುವ ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿ ಹಿಂದೂ ನಿರಾಶ್ರಿತರು ಮೊದಲ ಬಾರಿಗೆ ಈ ಬಾರಿಯ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಅಹಮದಾಬಾದ್‌ ಜಿಲಾಧಿಕಾರಿ ಕಚೇರಿಯು 2016 ರಲ್ಲಿ ಪಾಕಿಸ್ತಾನದಿಂದ ವಲಸೆ ಬಂದಿದ್ದ 1032 ಹಿಂದೂಗಳಿಗೆ ಪೌರತ್ವ ನೀಡಿತ್ತು. ಡಿ.1 ರಂದು 93 ವಿಧಾನ ಸಭಾ ಸ್ಥಾನಗಳಿಗೆ ಗುಜರಾತ್‌ನಲ್ಲಿ ಚುನಾವಣೆ ನಡೆಯಲಿದ್ದು, ಭಾರತದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲು ನಿರಾಶ್ರಿತರು ಕಾತರರಾಗಿದ್ದಾರೆ. ಅವರ ಮತಗಳು ಚುನಾವಣೆ ಫಲಿತಾಂಶವನ್ನು ಹೇಗೆ ಬದಲಿಸಬಹುದು ಎಂಬುವುದರ ಬಗ್ಗೆ ರಾಜಕೀಯ ವಲಯದಲ್ಲಿ ಈಗಾಗಲೇ ಚರ್ಚೆಗಳು ಆರಂಭವಾಗಿದೆ.

ಔಷಧಿ, ಸರ್ಕಾರ ಬದಲಿಸುವುದು ಸೂಕ್ತವಲ್ಲ, ಹಿಮಾಚಲ ಸಂಪ್ರದಾಯಕ್ಕೆ ಅಂತ್ಯ ಹಾಡಲು ಮೋದಿ ಮನವಿ!

ಬಹುನಿರೀಕ್ಷಿತ ಹಾಗೂ ಬಹುಚರ್ಚಿತ ಗುಜರಾತ್‌ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ್ದು, ಎರಡು ಹಂತದಲ್ಲಿ ಡಿ.1 ಹಾಗೂ ಡಿ.5ರಂದು ಮತದಾನ ನಡೆಯಲಿದೆ. ಈಗಾಗಲೇ ಘೋಷಣೆಯಾಗಿರುವ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯ ಮತ ಎಣಿಕೆಯ ಜೊತೆಗೇ ಡಿ.8ರಂದು ಗುಜರಾತ್‌ ಚುನಾವಣೆಯ ಮತ ಎಣಿಕೆಯೂ ನಡೆಯಲಿದೆ.

182 ವಿಧಾನಸಭಾ ಸ್ಥಾನಗಳಿರುವ ಗುಜರಾತ್‌ನಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, 89 ಸೀಟುಗಳಿಗೆ ಡಿ.1ರಂದು ಹಾಗೂ ಉಳಿದ 93 ಸೀಟುಗಳಿಗೆ ಡಿ.5ರಂದು ಮತದಾನ ನಡೆಯಲಿದೆ. ಎರಡೂ ಹಂತಕ್ಕೆ ಕ್ರಮವಾಗಿ ನ.5 ಹಾಗೂ ನ.10ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಕ್ರಮವಾಗಿ ನ.14 ಹಾಗೂ 17 ಕಡೆಯ ದಿನಗಳಾಗಿದ್ದು, ನಾಮಪತ್ರಗಳನ್ನು ನ.15 ಹಾಗೂ ನ.18ರಂದು ಪರಿಶೀಲಿಸಲಾಗುತ್ತದೆ.

Follow Us:
Download App:
  • android
  • ios