Asianet Suvarna News Asianet Suvarna News

ಔಷಧಿ, ಸರ್ಕಾರ ಬದಲಿಸುವುದು ಸೂಕ್ತವಲ್ಲ, ಹಿಮಾಚಲ ಸಂಪ್ರದಾಯಕ್ಕೆ ಅಂತ್ಯ ಹಾಡಲು ಮೋದಿ ಮನವಿ!

ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ಮೋದಿ ಚುನಾವಣಾ ರ‍್ಯಾಲಿಗೆ ಜನಸಾಗರವೇ ಹರಿದು ಬಂದಿದೆ. ಈ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಮೋದಿ, ಹಲವು ಕುತೂಹಲ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಇಷ್ಟೇ ಅಲ್ಲ ಹಿಮಾಚಲ ಪ್ರದೇಶದಲ್ಲಿರುವ ಚುನಾವಣಾ ಸಂಪ್ರದಾಯಕ್ಕೆ ಅಂತ್ಯಹಾಡಿ ಮತ್ತೆ ಬಿಜೆಪಿಗೆ ಅಧಿಕಾರ ನೀಡಲು ಔಷಧಿಯ ಉದಾಹರಣೆ ನೀಡಿದ್ದಾರೆ. ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ. 
 

Himchal Pradesh Election development works struck due to Changing govt in every five years says PM Modi in Sundernagar rally ckm
Author
First Published Nov 5, 2022, 2:41 PM IST

ಶಿಮ್ಲಾ(ನ.05):  ಹಿಮಾಚಲ ಪ್ರದೇಶದಲ್ಲಿ ಒಂದು ಬಾರಿ ಒಂದು ಸರ್ಕಾರ ಮತ್ತೊಂದು ಬಾರಿ ಇನ್ನೊಂದು ಸರ್ಕಾರದ ಬದಲು ಸ್ಥಿರ ಸರ್ಕಾರಕ್ಕೆ ಮತ ನೀಡಿ. ಆರೋಗ್ಯ ಸಮಸ್ಯೆಯಾದರೆ ಒಂದು ಬಾರಿ ಅಲೋಪಥಿ ಮೆಡಿಸಿನ್, ಮತ್ತೊಂದು ಬಾರಿ ಆರ್ಯುವೇದ, ಮತ್ತೆ ಹೋಮಿಯೋಪಥಿ ಔಷಧಿ ತೆಗೆದುಕೊಂಡರೆ ರೋಗ ವಾಸಿಯಾಗುವುದಿಲ್ಲ. ಕೇವಲ ಖರ್ಚು ಮಾತ್ರ. ಇದೇ ರೀತಿ ಪ್ರತಿ ಬಾರಿ ಸರ್ಕಾರ ಬದಲಿಸುವ ಪದ್ಧತಿಗೆ ಅಂತ್ಯಹಾಡಿ ಮತ್ತೆ ಬಿಜೆಪಿ ಸರ್ಕಾರಕ್ಕೆ ಅವಕಾಶ ನೀಡಿ ಎಂದು ಪ್ರದಾನಿ ಮೋದಿ ಹೇಳಿದ್ದಾರೆ. ಹಿಮಾಚಲ ಪ್ರದೇಶದ ಸುಂದರ್ ನಗರದಲ್ಲಿ ಆಯೋಯಿಸಿದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್ ಆಡಳಿತದಲ್ಲಿ ಮಾಡಿದ ಅವಾಂತರಗಳು ಹಾಗೂ ಬಿಜೆಪಿ ಸರ್ಕಾರದಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು. ಪ್ರಧಾನಿಯಾದ ಬೆನ್ನಲ್ಲೇ ಹಿಮಾಚಲ ಪ್ರದೇಶಕ್ಕಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಲು ಅನುದಾನ ಬಿಡುಗಡೆ ಮಾಡಿದ್ದೆ. ಆದರೆ 2014 ರಿಂದ 2017ರ ವರೆಗೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಕೇವಲ 15 ಮನೆ ನಿರ್ಮಾಣ ಮಾಡಿ ಸೌಲಭ್ಯವನ್ನು ಜನರಿಗೆ ತಲುಪಿಸಲಿಲ್ಲ. ಆದರೆ ಬಿಜೆಪಿ ಸರ್ಕಾರ ಈಗಾಗಲೇ 8,000 ಮನೆಗಳನ್ನು ಪೂರ್ಣಗೊಳಿಸಿದೆ. 2,000 ಮನೆಗಳ ಕಾಮಾಗಾರಿ ಶೀಘ್ರದಲ್ಲೇ ಪೂರೈಸಲಿದೆ.  

ಇಂದು ಬೆಳಗ್ಗೆ ಹಿಮಾಚಲ ಪ್ರದೇಶಕ್ಕೆ ಆಗಮಿಸುವ ವೇಳೆ ಸುದ್ದಿಯೊಂದು ಬಂತಿತ್ತು. ಭಾರತದ ಮೊದಲ ಮತದಾರ  ಹಿಮಾಚಲ ಪ್ರದೇಶದ ಮೂಲಕ ಶ್ಯಾಮ ಶರಣ್ ನೇಗಿ ನಿಧನ ಸುದ್ದಿ ತಿಳಿಯಿತು. ಶ್ಯಾಮ್ ಶರಣ್ ನೇಗಿ ಎಲ್ಲಾ ಯುವಕರಿಗೆ ಪ್ರೇರಣೆಯಾಗಿದ್ದಾರೆ. ನವೆಂಬರ್ 2 ರಂದು ಕೂಡ ಶ್ಯಾಮ್ ಅವರು ಮತದಾನ ಮಾಡಿದ್ದರು. ತಮ್ಮ ಜೀವಿತಾವಧಿಯಲ್ಲಿ ಒಟ್ಟು 34 ಬಾರಿ ಮತದಾನ ಮಾಡಿದ ಶ್ಯಾಮ್ ಶರಣ್ ನಮ್ಮೆಲ್ಲರಿಗೂ ಮಾದರಿ ಎಂದು  ಶ್ಯಾಮ್ ಶರಣ್ ನೇಗಿಗೆ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

 

ಎಷ್ಟೇ ಪ್ರಭಾವಿಗಳಿರಲಿ; ಭ್ರಷ್ಟರನ್ನು ಸದೆಬಡಿಯಿರಿ: ನರೇಂದ್ರ ಮೋದಿ

ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಮತದಾರರು ನೀಡುವ ಒಂದೊಂದು ಮತ ಮುಂಂದಿನ ದಿನದಲ್ಲಿ ಹಿಮಾಚಲ ಪ್ರದೇಶದ ಭವಿಷ್ಯ ರೂಪಿಸಲಿದೆ. ಅಮೃತ ಕಾಲ ಸಂದರ್ಭದಲ್ಲಿ ಹಿಮಾಚಲ ಪ್ರದೇಶ ತ್ವರಿತ ಅಭಿವೃದ್ಧಿಗೆ ಸುಸ್ಥಿರ ಸರ್ಕಾರ ಮುಖ್ಯ. ಇದಕ್ಕೆ ಹಿಮಾಚಲ ಪ್ರದೇಶ ರಾಜ್ಯದ ಮತದಾರರು ಉತ್ತಮ ರೀತಿಯಲ್ಲಿ ಅರ್ಥೈಸಿದ್ದಾರೆ. ಬಿಜೆಪಿ ಎಂದರೆ ಸ್ಥರ, ಬಿಜೆಪಿ ಎಂದರೆ ಅಭಿವೃದ್ಧಿ, ಬಿಜೆಪಿ ಎಂದರೆ ಸೇವಾ ಮನೋಭಾವ, ಬಿಜೆಪಿ ಎಂದರೆ ಮಹಿಳಾ ಸಬಲೀಕರಣ. ಹೀಗಾಗಿ ಹಿಮಾಚಲ ಪ್ರದೇಶ ಜನರು, ಮುಂಬರುವ ಚುನಾವಣೆಯಲ್ಲಿ ಬಹುಮತಗಳಿಂದ ಗೆಲ್ಲಿಸುವ ವಿಶ್ವಾಸವಿದೆ ಎಂದರು.

 

 

ಸ್ವಾತಂತ್ರ್ಯ ನಂತರ ಸುದೀರ್ಘ ವರ್ಷಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಆಡಳಿತ ನಡೆಸಿದೆ. ಈಗಲೂ ಹಿಮಾಚಲ ಪ್ರದೇಶದಲ್ಲಿ ಆಡಳಿತಕ್ಕೆ ಹಾತೊರೆಯುತ್ತಿದೆ.  ಕಾಂಗ್ರೆಸ್ ಈ ರಾಜ್ಯದಿಂದ ಎಲ್ಲಾ ಸಂಪತ್ತನ್ನು ಕೊಳ್ಳೆ ಹೊಡದಿದೆ ಹೊರತು ಅಭಿವೃದ್ಧಿ ಮಾಡಿಲ್ಲ. ಈ ಚಿಕ್ಕ ರಾಜ್ಯದಲ್ಲಿ ಏನು ಮಾಡುವುದು? ಹಿಮಾಚಲ ಪ್ರದೇಶದಿಂದ ಹೆಚ್ಚಿನ ಸಂಸದರಿಲ್ಲ, ಇದರಿಂದ ಪಕ್ಷಕ್ಕೆ ಏನೂ ಪ್ರಯೋಜನವಿಲ್ಲ ಎಂದು ಆಡಳಿತಲೇ ಮಾಡುತ್ತಲೇ ಬಂದಿತು. ಇದರಿಂದ ಹಿಮಾಚಲ ಪ್ರದೇಶ ಅಭಿವೃದ್ಧಿಯಲ್ಲಿ ಹಿಂದೆ ಉಳಿಯಿತು. ಆದರೆ ಬಿಜೆಪಿ ಸರ್ಕಾರಕ್ಕೆ ಅಧಿಕಾರ ನೀಡಿದ್ದೀರಿ. ಹೀಗಾಗಿ ಅಭಿವೃದ್ಧಿ ಕಾಣುತ್ತಿದೆ. 

ಹಿಮಾಚಲ ಪ್ರದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಕಾಸದ ಎಲ್ಲಾ ಯೋಜನೆಗಳು ಸ್ಥಗಿತಗೊಳ್ಳಲಿದೆ. ಮನೆಯಲ್ಲಿ ಯಾರಾಗಿದರೂ ಆರೋಗ್ಯ ಸಮಸ್ಯೆ ಎದುರಾದರೆ, ಒಂದೊಂದು ಬಾರಿ ಒಂದೊಂದು ಔಷಧಿ ಸೇವಿಸಿದರೆ ಸಮಸ್ಯೆ ನಿವಾರಣೆಯಾಗುವುದಿಲ್ಲ. ಒಂದೇ ಔಷಧಿಯನ್ನು ವೈದ್ಯರು ಹೇಳಿದ ಸಮಯದವರೆಗೆ ತೆಗೆದುಕೊಂಡರೆ ಮಾತ್ರ ಸಮಸ್ಯೆ ದೂರವಾಗಲಿದೆ. ಹೀಗಾಗಿ ಹಿಮಾಚಲ ಪ್ರದೇಶದಲ್ಲಿ ಒಂದು ಬಾರಿ ಒಂದು ಸರ್ಕಾರ ಮತ್ತೊಂದು ಮತ್ತೊಂದುಸರ್ಕಾರ ಬಂದರೆ ಅಭಿವೃದ್ಧಿ ಕುಂಠಿತವಾಗಲಿದೆ. ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದರೆ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಮೋದಿ ಹೇಳಿದ್ದಾರೆ.

ಗುಜರಾತ್‌ನಲ್ಲಿ ಮಿಲಿಟರಿ ವಿಮಾನ ಘಟಕಕ್ಕೆ PM Narendra Modi ಅಡಿಗಲ್ಲು

ಹಿಮಾಚಲ ಪ್ರದೇಶದ ಜನ ನನ್ನನ್ನು ದೆಹಲಿಗೆ ಕಳುಹಿಸಿದ್ದೀರಿ. ನಿಮಗಾಗಿ ನಾನು ಸೇವೆ ಮಾಡುತ್ತಿದ್ದೇನೆ. ನನಗೆ ಮತ್ತೆ ಅವಕಾಶ ನೀಡಿ, ನಿಮ್ಮ ಸೇವೆಗೆ ಸದಾ ಇರುತ್ತೇನೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರವನ್ನು ನೀವು ತನ್ನಿ, ನಾನು ನಿಮ್ಮ ಸೇವೆಯನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ಮಾಡಲು ಸಿದ್ಧನಿದ್ದೇನೆ. ಹಿಮಾಚಲ ಪ್ರದೇಶ ಚುನಾವಣೆ ದೆಹಲಿ ಲೋಕಸಭಾ ಚುನಾವಣೆಗೂ ಬಿಜೆಪಿ ನೆರವಾಗಲಿದೆ ಎಂದರು.

ಕಾಂಗ್ರೆಸ್ 50 ವರ್ಷಗಳ ಹಿಂದೆ ಗರೀಬಿ ಹಠಾವೋ ಆಂದೋಲನ ಆರಂಭಿಸಿತ್ತು. ಪ್ರತಿ ಚುನಾವಣೆಯಲ್ಲಿ ಬಡತನ ನಿರ್ಮೂಲನೆ ಆಂದೋಲನ ನಡೆಸುತ್ತಲೇ ಬಂದಿದೆ. ಆದರೆ ಇದುವರೆಗೆ ಭಾರತದಿಂದ ಬಡತನ ನಿರ್ಮೂಲನೆ ಆಗಿದೆಯಾ? 2012ರಲ್ಲಿ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ ಯಾವುದೇ ಭರವಸೆ ಪೂರೈಸಿಲ್ಲ. ಹೀಗಾಗಿ 2017ರಲ್ಲಿ ಬಿಜೆಪಿ ಸರ್ಕಾರಕ್ಕೆ ನೀವು ಅಧಿಕಾರ ನೀಡಿದ್ದೀರಿ. ನಾವು ಭರವಸೆ ನೀಡಿದ ಯೋಜನೆಗಳನ್ನು ಸಾಕಾರಗೊಳಿಸಲು ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಬಹುತೇಕ ಭರವಸೆ ಪೂರ್ಣಗೊಂಡಿದೆ.

ರಾಮಮಂದಿರ ಭರವಸೆ ನೀಡಿದ್ದೇವು. ಇಂದು ರಾಮ ಮಂದಿರ ನಿರ್ಮಾಣವಾಗುತ್ತಿದೆ. ಬಿಜೆಪಿ ಘೋಷಣೆ ಮಾಡಿದ ಪ್ರತಿಯೊಂದು ಭರವಸೆಗಳನ್ನು ಈಡೇರಿಸಲಿದೆ. ಹಿಮಾಚಲ ಪ್ರದೇಶ ವೀರರ ನಾಡು. ದೇವರ ನಾಡು. ಈ ಪವಿತ್ರ ಮಣ್ಣಿನಲ್ಲಿ ಘೋಷಣೆ ಮಾಡಿ ಸುಮ್ಮನಾಗುವುದು ಬಿಜೆಪಿ ಸಂಸ್ಕೃತಿಯಲ್ಲ. ಎಲ್ಲಾ ಭರವಸೆಯನ್ನು ನಾವು ಈಡೇರಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ. 

ಸೈನಿಕರ ಭೂಮಿ ಹಿಮಾಚಲ ಪ್ರದೇಶ. ಒನ್ ರ್ಯಾಂಕ್ ಒನ್ ಪೆನ್ಶನ್ ಯೋಜನೆ 2014ರಲ್ಲಿ ಘೋಷಣೆ ಮಾಡಿದ್ದೇವು. ಈಗ ನಾವು ಈ ಭರವಸೆಯನ್ನು ಪೂರೈಸಿದ್ದೇವೆ. ಇದು ಹಿಮಾಲಚಲ ಪ್ರದೇಶ ಪ್ರತಿಯೊಬ್ಬ ಯೋಧರ ಕುಟುಂಬಕ್ಕೆ ನೆರವಾಗಲಿದೆ. ಕಾಂಗ್ರೆಸ್ ಇದ್ದರೆ ಇದೇ ಹೆಸರಿನಲ್ಲಿ ಯೋಧರ ಹಣವನ್ನೂ ಲೂಟಿ ಮಾಡುತ್ತಿತ್ತು. ಸ್ವಾತಂತ್ರ್ಯ ಬಳಿಕ ಮೊದಲ ಭ್ರಷ್ಟಾಚಾರ ನಡೆಸಿದ್ದು ರಕ್ಷಣಾ ಕ್ಷೇತ್ರದಲ್ಲಿ. ಬಳಿಕ ಎಲ್ಲಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಾಡಿ ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆದಿದೆ. ಪ್ರತಿ ಖರೀದಿಯಲ್ಲಿ ಕಮಿಷನ್ ಹೊಡದಿದೆ. ಇದರಿಂದ ಭಾರತದ ಶಸ್ತ್ರಾಸ್ತ್ರ ಖರೀದಿಗೆ ಹಣವೇ ಇಲ್ಲದಂತಾಯಿತು. ಇದರಿಂದ ಹಿಮಾಚಲ ಪ್ರದೇಶದ ಜನರಿಗೆ ತೀವ್ರ ಸಮಸ್ಯೆಯಾಗಿದೆ. ನಮ್ಮ ಯೋಧರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರ ಇರಲಿಲ್ಲ. ಹೀಗಾಗಿ ಶತ್ರಗಳು ಗುಂಡೇಟಿಗೆ ವೀರಮರಣವನ್ನಪ್ಪಿದ್ದಾರೆ.  ಆದರೆ ಇದೀಗ ಭಾರತ ಆತ್ಮನಿರ್ಭರವವಾಗಿದೆ. ನಾವೇ ಶಸ್ತ್ರಾಸ್ತ್ರ ಉತ್ಪಾದಿಸುತ್ತಿದ್ದೇವೆ. ಭಾರತ ಅತ್ಯಂತ ಬಲಿಷ್ಠಾ ಸೇನಾ ಪಡೆಯನ್ನು ಕಟ್ಟಲಾಗಿದೆ ಎಂದು ಮೋದಿ ಹೇಳಿದರು.

2014ರಲ್ಲಿ ಪ್ರಧಾನಿಯಾದ ಬಳಿಕ ಹಿಮಾಚಲ ಪ್ರದೇಶದ ಜನರಿಗೆ ಕೆಲ ಸೌಲಭ್ಯಗಳನ್ನು ನೀಡಲಾಗಿತ್ತು. ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಈ ಯೋಜನೆಗಳನ್ನು ಜನರಿಗೆ ತಲುಪಿಸಲಿಲ್ಲ. ಕೇಂದ್ರದ ಯೋಜನೆಯಿಂದ ಮೋದಿಗೆ ಕ್ರಿಡಿಟ್ ಹೋಗಲಿದೆ ಎಂದು ಕಾಂಗ್ರೆಸ್ ತಮ್ಮದೇ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಇಲ್ಲದವರಿಗೆ ಮನೆ ನೀಡುವ ಯೋಜನೆ ಇದಾಗಿದೆ. ಹಿಮಾಚಲ ಪ್ರದೇಶದಲ್ಲಿನ ಮನೆ ಇಲ್ಲದವರಿಗೆ ಮನೆ ನೀಡಲು ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ 2014ರಿಂದ 2017ರ ವರೆಗೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಕೇವಲ 15 ಮನೆ ಮಾಡಿ ಸೌಲಭ್ಯವನ್ನು ಜನರಿಗೆ ತಲುಪಿಸಲೇ ಇಲ್ಲ. ಆದರೆ 2017ರಲ್ಲಿ ಬಿಜೆಪಿ ಸರ್ಕಾರಕ್ಕೆ ಮತ ನೀಡಿದ್ದೀರಿ. 2017ರಲ್ಲಿ ಬಿಜೆಪಿ ಸರ್ಕಾರ 10,000 ಮನೆ ನಿರ್ಮಾಣ ಕಾರ್ಯ ಶುರು ಮಾಡಿದೆವು. ಇದೀಗ 8,000 ಸಾವಿರ ಮನೆ ಪೂರ್ಣಗೊಂಡಿದೆ. ಇನ್ನುಳಿದ 2,000 ಮನೆಗಳ ಕಾರ್ಯ ಶೀಘ್ರದಲ್ಲೇ ಪೂರ್ಗೊಳ್ಳಲಿದೆ. ಇವೆಲ್ಲವೂ ಮೋದಿ ಅಥವಾ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಮಾಡಿದ್ದಲ್ಲ. ಇವೆಲ್ಲ ನೀವು ಹಾಕಿದ ಮತದಿಂದ ಆಗಿದೆ. ಸರಿಯಾಗಿ ಮತ ಹಾಕಿದ್ದೀರಿ, ಸರಿಯಾದ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ. 

Follow Us:
Download App:
  • android
  • ios