ಉತ್ತರ ಪ್ರದೇಶದಲ್ಲಿ ಈಗ ಡೆಂಗ್ಯೂ ಅಟ್ಟಹಾಸ: 50 ಮಕ್ಕಳು ಸೇರಿ 60 ಬಲಿ!
* ಉತ್ತರ ಪ್ರದೇಶದಲ್ಲಿ ಈಗ ಡೆಂಗ್ಯೂ ಅಟ್ಟಹಾಸ
* ಈತನಕ 50 ಮಂದಿ ಮಕ್ಕಳು ಸೇರಿ ಒಟ್ಟು60 ಮಂದಿ ಸಾವಿನ ಕದ ತಟ್ಟಿದ್ದಾರೆ
* ಪಶ್ಚಿಮ ಉತ್ತರ ಪ್ರದೇಶ ಭಾಗದಲ್ಲಿ ತೀವ್ರವಾಗಿ ಬಾಧಿಸುತ್ತಿರುವ ಡೆಂಗ್ಯೂ
ಲಕ್ನೋ(ಸೆ.04) ಕೊರೋನಾ ನರ್ತನಕ್ಕೆ ನಲುಗಿದ್ದ ಉತ್ತರ ಪ್ರದೇಶದಲ್ಲಿ ಸದ್ಯ ಡೆಂಗ್ಯೂ ಅಟ್ಟಹಾಸ ಆರಂಭಿಸಿದೆ. ಡೆಂಗ್ಯೂ ಹೊಡೆತಕ್ಕೆ ಈವರೆಗೆ 50 ಮಕ್ಕಳು ಸೇರಿ ಒಟ್ಟು 60 ಮಂದಿ ಮೃತಪಟ್ಟಿದ್ದಾರೆ.
ಹೌದು ಪಶ್ಚಿಮ ಉತ್ತರ ಪ್ರದೇಶ ಭಾಗದಲ್ಲಿ ಡೆಂಗ್ಯೂ ತೀವ್ರವಾಗಿ ಬಾಧಿಸುತ್ತಿದ್ದು, ಕಳೆದ 10 ದಿನಗಳಿಂದ ಈ ರೋಗಕ್ಕೆ ಬಾಧಿಸುತ್ತಿರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಲ್ಲದೇ ಶೇ 50 ರಷ್ಟು ಪ್ರಕರಣ ಫರಿದಾಬಾದ್ ಭಾಗದಿಂದ ವರದಿಯಾಗುತ್ತಿವೆ ಎಂಬುವುದು ಉಲ್ಲೇಖನೀಯ.
ಈವರೆಗೆ 200 ಸ್ಯಾಂಪಲ್ಸ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಫರಿದಾಬಾದ್, ಮಥುರಾ, ಪ್ರಯಾಗ್ ರಾಜ್ನಲ್ಲಿ ಡೆಂಗ್ಯೂ ಉಲ್ಬಣಗೊಂಡಿದೆ. ಪ್ರಯಾಗ್ ರಾಜ್ ಸುತ್ತಮುತ್ತ ಒಟ್ಟು 34 ಪ್ರಕರಣಗಳು ವರದಿಯಾಗಿವೆ ಎಂಬುವುದು ಮತ್ತೊಂದು ಆಘಾತಕಾರಿ ವಿಚಾರ.
ಇನ್ನು ಡೆಂಗ್ಯೂ ಹಾವಳಿ ಮಧ್ಯೆ ಆರು ಮಂದಿಯ ತಂಡ ಜ್ವರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಸೋಮವಾರ ವರದಿ ನೀಡುವ ಸಾಧ್ಯತೆ ಇದೆ.
ಇನ್ನು ಡೆಂಗ್ಯೂ ಹರಡುತ್ತಿರುವ ಬಗ್ಗೆ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕಿ ಪ್ರಯಾಂಕಾ ಗಾಂಧಿ 100ಕ್ಕೂ ಹೆಚ್ಚು ಮಂದಿ ಸಾವಿನ ಕದ ತಟ್ಟಿದ್ದಾರೆ. ಈ ಕೂಡಲೇ ನೆರವಿಗೆ ಯುಪಿ ಸರ್ಕಾರ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.