* ದೇಶ, ರಾಜ್ಯದಲ್ಲಿ ಕೊರೋನಾ ಹಾವಳಿ* ಕೊರೋನಾ ಆರ್ಭಟ ನಡುವೆಯೇ ಈದ್‌ ಹಬ್ಬ ಆಚರಣೆ* ಸುರಕ್ಷಿತ ಈದ್ ಆಚರಣೆಗೆ ಪಂಚ ಸೂತ್ರಗಳು: ಮುಸ್ಲಿಂ ವ್ಯಕ್ತಿ ಮಾಡಿದ ವಿಡಿಯೋ ವೈರಲ್!

ಬೆಂಗಳೂರು(ಮೇ.13): ಕೊರೋನಾ ಹಾವಳಿ ರಾಷ್ಟ್ರ, ರಾಜ್ಯದಲ್ಲಿ ಮಿತಿ ಮೀರಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯಗಳು ಕಟ್ಟು ನಿಟ್ಟಿನ ಕ್ರಮ ವಹಿಸಿದೆ. ಆರೋಗ್ಯ ಸೌಕರ್ಯಗಳ ಕೊರತೆ ಮಧ್ಯೆ ಜನರು ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹೀಗಿದ್ದರೂ ಅನೇಕ ಮಂದಿ ಈ ಮಹಾಮಾರಿಯನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗೇ ಸರ್ಕಾರ ಹೇರಿದ ನಿಯಮಗಳನ್ನು ಉಲ್ಲಂಘಿಸಿ ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ಓಡಾಡುವುದರೊಂದಿದೆ, ಮಾಸ್ಕ್ ಧರಿಸುವುದನ್ನೂ ಮರೆಯುತ್ತಾರೆ. ಅದರಲ್ಲೂ ಇಂದು ಈದ್‌ ಹಬ್ಬ. ಖರೀದಿ ಓಡಾಟ ಹೆಚ್ಚಿರುತ್ತದೆ. ಹೀಗಿರುವಾಗ ಮುಸ್ಲಿಂ ವ್ಯಕ್ತಿಯೊಬ್ಬ ಮುಸ್ಲಿಂ ಬಾಂಧವರಿಗೆ ಎಚ್ಚರವಾಗಿರುವಂತೆ ಜಾಗೃತಿ ಮೂಡಿಸುವ ವಿಡಿಯೋ ಭಾರೀ ವೈರಲ್ ಆಗಿದೆ.

ಹೌದು ಈದ್‌ ಹಬ್ಬದ ಸಂದರ್ಭದಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಬೆಂಗಳೂರಿನ ಮರ್ಸಿ ಮಿಷನ್ ಸಂಚಾಲಕ ಅಮೀನ್ ಮುದಸ್ಸಿರ್ ಕೊರೋನಾದಿಂದ ನಮ್ಮ ಕುಟುಂಬವನ್ನು ಕಾಪಾಡುವ ಐದು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ.

1. ದಯವಿಟ್ಟು ಎಲ್ಲರೂ ಈ ಬಾರಿ ಶಾಪಿಂಗ್ ಬಂದ್ ಮಾಡಿ: ಸರ್ಕಾರ ನೀಡಿರುವ ಆರರಿಂದ ಹತ್ತು ಗಂಟೆಯೊಳಗೆ ಜನರು ಓಡಾಡುವುದನ್ನು ನೋಡಿದರೆ, ಅವರೇನು ಶಾಪಿಂಗ್ ಮಾಡುತ್ತಾರೆಂದೇ ಆರ್ಥವಾಗುತ್ತಿಲ್ಲ. ಆದರೆ ನೆನಪಿಟ್ಟುಕೊಳ್ಳಿ ಈ ಶಾಪಿಂಗ್ ನಮಗೆ ಹಾನಿಯುಂಟು ಮಾಡಲಿದೆ. ಏನಿದೆಯೋ ಅದರಿಂದಲೇ ಸಂತಸ ಪಟ್ಟುಕೊಳ್ಳಿ. ಈಗ ನಾವು ಹೊಸ ಶೂ, ಬಟ್ಟೆ ಖರೀದಿಸಬೇಕೆಂದಿಲ್ಲ. ಪರಿಸ್ಥಿತಿ ಎಷ್ಟು ಕೆಟ್ಟಿದೆ ಎಂದರೆ ನೀವು ಭೇಟಿ ನೀಡಿದ ಸ್ಥಳದಿಂದ ಕೊರೋನಾ ತಗುಲುವ ಸಾಧ್ಯತೆ ಇದೆ. ಕೊರೋನಾ ಈಗ ಗಾಳಿಯಿಂದ ಹರಡುತ್ತದೆ ಎಂಬುವುದು ತಜ್ಞರೇ ಹೇಳಿದ್ದಾರೆ. ಹೀಗಾಗಿ ಓಡಾಡುವುದನ್ನು ನಿಲ್ಲಿಸಿ. ಹೊಸ ಬಟ್ಟೆ, ವಸ್ತುಗಳಿಲ್ಲದೇ ನಾವು ಈದ್‌ ಆಚರಿಸಬಹುದು.

ಕೊರೋನಾ: ಈದ್‌-ಮಿಲಾದ್‌ ಆಚ​ರ​ಣೆಗೆ ಮಾರ್ಗಸೂಚಿ ಪಾಲನೆ ಕಡ್ಡಾಯ

2. ನಾವೆಲ್ಲರೂ ಈದ್‌ ವೇಳೆ ಒಳ್ಳೊಳ್ಳೆ ಊಟ ತಯಾರಿಸುತ್ತೇವೆ. ಇದನ್ನು ತಯಾರಿಸಲು ಅನೇಕ ವಸ್ತುಗಳ ಅಗತ್ಯವಿರುತ್ತದೆ. ಇದನ್ನು ಖರೀದಿಸಲು ನೀವು ಹೊರಗೆ ಹೋಗಬೇಕಾಗುತ್ತದೆ, ಕಡಿಮೆ ಎಂದರೂ ಮೂರ್ನಾಲ್ಕು ಅಂಗಡಿಗಳಿಗೆ ಭೇಟಿ ನೀಡಬೇಕಾಗುತ್ತದೆ. ಹೀಗಿರುವಾಗ ನಮ್ಮ ಮನೆಯಲ್ಲಿ ಏನಿದೆಯೋ ಅದರಿಂದಲೇ ಊಟ ತಯಾರಿಸಿ ಹಬ್ಬ ಆಚರಿಸಬಾರದಾ? ಯಾಕೆಂದರೆ ಜನಸಂದಣಿ ಇದ್ದಲ್ಲಿ ಕೊರೋನಾ ಇದ್ದೇ ಇರುತ್ತದೆ. ಒಂದೇ ಒಂದು ಸೀನಿನಿಂದ ಹತ್ತು ಮಂದಿಗೆ ಕೊರೋನಾ ತಗುಲುತ್ತದೆ. ಈ ವೇಳೆ ಕೊರೋನಾದಿಂದ ಸಾವನ್ನಪ್ಪಿದ ಕುಟುಂಬಗಳ ಬಗ್ಗೆ ನೆನಪಿಸಿಕೊಳ್ಳಿ. 

3. ಈದ್‌ ನಮಾಜ್ ಮನೆಯಲ್ಲೇ ಓದಲು ಹೇಳಲಾಗಿದೆ. ಹೀಗಾಗಿ ನೀವು ನಿಮ್ಮ ಮನೆಯಲ್ಲೇ ನಮಾಜ್ ಮಾಡಿ. ಇದನ್ನು ಹೇಗೆ ಮಾಡುವುದು ಎಂದು ಸೋಧಶಿಯಲ್ ಮೀಡಿಯಾದಲ್ಲಿ ಇದೆ.

4. ಕೆಲವರು ಹತ್ತು ಮನೆಯವರು ಒಟ್ಟು ಸೇರಿ ನಮಾಜ್ ಮಾಡುತ್ತೇವೆ ಎಂದುಕೊಳ್ಳುತ್ತಾರೆ. ಆದರೆ ಹೀಗೆ ಮಾಡಬೇಡಿ. ಕೊರೋನಾ ಭಾರೀ ವೇಗವಾಗಿ ಹರಡುತ್ತಿದೆ. ಇಂದು ಬಹುತೇಕ ಎಲ್ಲಾ ಗಲ್ಲಿಗಳಲ್ಲಿನ ಕೊರೋನಾ ಇದೆ. ನೀವು ಸುರಕ್ಷಿತವಾಗಿದ್ದೀರಿ. ಹೀಗಾಗಿ ನಿಮ್ಮ ಮನೆಯಲ್ಲೇ ನಮಾಜ್ ಮಾಡಿ. ಗುಂಪು ಸೇರಬೇಡಿ. 

5. ಈದ್‌ ವೇಳೆ ಹಲವಾರು ವರ್ಷದಿಂದ ನಡೆದುಕೊಂಡು ಬರುವ ಪರಂಪರೆಯಂತೆ ಅಜ್ಜ, ಅಜ್ಜಿಯನ್ನು ಭೇಟಿಯಾಗಲು ಹೋಗಬೇಡಿ. ಹೀಗೆ ತಪ್ಪಿಯೂ ಮಾಡಬೇಡಿ. 

ಕೊರೋನಾದಲ್ಲಿ ಕಳೆದ ಒಂದು ತಿಂಗಳಲ್ಲಿ ಎಷ್ಟು ಮಕ್ಕಳು ಸಾವನ್ನಪ್ಪುದ್ದಾರೆ ಎಂದರೆ ನಾನು ನನ್ನ ಜೀವನದಲ್ಲಿ ಬಹುಶಃ ಅಷ್ಟು ಮಕ್ಕಳು ಸಾವನ್ನಪ್ಪಿರುವುದನ್ನು ನೋಡಿಲ್ಲ. ಜೀವ ಕೊಡುವ ಕೊಡುವುದು ಹಾಗೂ ಹಿಂಪಡೆಯುವ ಹಕ್ಕು ಅಲ್ಲಾನಿಗಿದೆ ಎನ್ನಲಾಗುತ್ತದೆ, ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಬುದ್ಧಿವಂತಿಕೆ ನಮಗಿರಬೇಕು. ಎಲ್ಲವನ್ನೂ ತಿಳಿದು ಮುಗ್ಧರಂತೆ ಓಡಾಡಿಕೊಂಡಿದ್ದರೆ ನಮ್ಮಷ್ಟು ಮೂರ್ಖರು ಯಾರೂ ಇರುವುದಿಲ್ಲ ಎಂದಿದ್ದಾರೆ.