ನವದೆಹಲಿ(ಏ.05): ಸಿಕ್ಕಿಂ-ನೇಪಾಳ ಗಡಿಯಲ್ಲಿ ಇಂದು(ಏ.05) ಭೂಕಂಪನವಾಗಿದೆ. ರಾತ್ರಿ 8.29ರ ವೇಳೆಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 5.4ರಷ್ಟು ತೀವ್ರತೆ ದಾಖಲಾಗಿದೆ.  ಸಿಕ್ಕಿಂನ ರಾಜಧಾನಿ ಗ್ಯಾಂಗ್ಟೊಕ್‌ನ ಪೂರ್ವ-ಆಗ್ನೇಯ ದಿಕ್ಕಿನಲ್ಲಿ ಭೂಕಂಪನದ ಕೇಂದ್ರ ಬಿಂದುವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.

ಹಿಮಾಲಯ ಸಂಕಟ, ಉತ್ತರ ಭಾರತಕ್ಕೆ ಕಾದಿದ್ಯಾ ಕಂಟಕ?

ಭೂಕಂಪನದ ತೀವ್ರತೆದೆ ಉತ್ತರ ಬಂಗಾಳ, ಅಸ್ಸಾಂ ಹಾಗೂ ಬಿಹಾರದಲ್ಲೂ ಭೂಮಿ ಕಂಪಿಸಿದೆ.  ಇನ್ನು ನೇಪಾಳ, ಭೂತಾನ್, ಮೇಘಾಲಯ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. 

ಭೂಕಂಪವು ಮೇಲ್ಮೈಯಿಂದ 10 ಕಿ.ಮೀ ಆಳದಲ್ಲಿ ಅಪ್ಪಳಿಸಿದೆ. ಘಟನೆ ಬೆನಲ್ಲೇ ಸಿಕ್ಕಿಂ, ಅಸ್ಸಾಂ, ಬಿಹಾರ ಹಾಗೂ ಬಂಗಾಳ  ಮುಖ್ಯಮಂತ್ರಿಗಳ ಜೊತೆ ಪ್ರದಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.ಕೇಂದ್ರದಿಂದ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ.